SBI ಬ್ಯಾಂಕ್ ನಲ್ಲಿ ಜೂನಿಯರ್ ಅಸೋಸಿಯೇಟ್ ಹುದ್ದೆ ಖಾಲಿ
ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ SBI ನಲ್ಲಿ ಜೂನಿಯರ್ ಅಸೋಸಿಯೇಟ್ ಹುದ್ದೆ ಖಾಲಿ ಇದ್ದು ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು ಹುದ್ದೆ: 8424ಅರ್ಜಿ ಸಲ್ಲಿಸಲು ಕೊನೆ ದಿನ: 7-ಡಿಸೆಂಬರ್ -2023 ಹೆಚ್ಚಿನ ಮಾಹಿತಿಗೆ: https:/bank.sbi.career/current-openings>RECRUITMENT OF JUNIOR ASSOCIATES ಭೇಟಿ ನೀಡಿ
ವಿಶಾಖಪಟ್ಟಣಂ ಮೀನುಗಾರಿಕಾ ಬಂದರಿನಲ್ಲಿ ಅಗ್ನಿ ದುರಂತ: 35 ಮೀನುಗಾರಿಕಾ ದೋಣಿಗಳು ಸುಟ್ಟು ಕರಕಲು
ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೀನುಗಾರಿಕಾ ಬಂದರಿನಲ್ಲಿ ಭಾನುವಾರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡು ಸುಮಾರು 35 ಮೀನುಗಾರಿಕಾ ದೋಣಿಗಳು ಸುಟ್ಟು ಕರಕಲಾಗಿವೆ. ಉಪ ಪೊಲೀಸ್ ಆಯುಕ್ತ ಆನಂದ್ ರೆಡ್ಡಿ ಮಾತನಾಡಿ, ಬೆಂಕಿಯು ಮೊದಲು ಒಂದು ದೋಣಿಯಲ್ಲಿ ಕಾಣಿಸಿಕೊಂಡಿತು ಮತ್ತು ನಂತರ ಮಧ್ಯರಾತ್ರಿ ಸುಮಾರಿಗೆ 35 ಫೈಬರ್-ಯಾಂತ್ರೀಕೃತ ದೋಣಿಗಳಿಗೆ ವ್ಯಾಪಿಸಿತು ಎಂದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ತಕ್ಷಣ ಕಾರ್ಯಪ್ರವೃತ್ತರಾದರು. ಬೆಂಕಿಯನ್ನು ಹತೋಟಿಗೆ ತರಲಾಯಿತು. […]
ಅಂತರ್ಜಲ ಮಟ್ಟವು ಶೇ. 24 ರಷ್ಟು ಕುಸಿತ; ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ: ಡಾ. ವಿದ್ಯಾಕುಮಾರಿ ಕೆ.
ಉಡುಪಿ: ಜಿಲ್ಲೆಯಾದ್ಯಂತ ಮುಂಬರುವ ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಂದಿರುವ ಹಿನ್ನೆಲೆ, ಅಂತರ್ಜಲ ಮಟ್ಟವು ಶೇ. 24 ರಷ್ಟು ಕುಸಿದಿದೆ. ಇದರಿಂದ […]
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ
ಉಡುಪಿ: ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆದಿತ್ಯವಾರ ಮುಂಜಾನೆ ವಿಶ್ವರೂಪ ದರ್ಶನ ಜರಗಿತು. ಸಾವಿರಾರು ಹಣತೆ ದೀಪಗಳ ನಡುವೆ ಮೂಡಿಬಂದ “ಭಾರತ್ ” ಹೂವಿನ ರಂಗವಲ್ಲಿ ಭಕ್ತರ ಮನ ಸೆಳೆಯಿತು. ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು ಆಡಳಿತ ಮೊಕ್ತೇಸರ ಕೆ. ಅನ೦ತಪದ್ಮನಾಭ ಕಿಣಿ, ಅರ್ಚಕ ಜಯದೇವ ಭಟ್, ಗಣಪತಿ ಭಟ್ ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಮತ್ತು ಜಿ ಎಸ್ ಬಿ ಸಭಾ […]
ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ 15 ಅಡಿ ಉದ್ದದ ಅಯೋಧ್ಯಾ ರಾಮ ಮಂದಿರದ ರಂಗೋಲಿ
ಉಡುಪಿ: ಅಂಬಾಗಿಲು ವೈಶವಾಣಿ ಸಮಾಜದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಪಕ್ಷ್ಮೀ ಜಾಗರಣೆಯ ಪ್ರಯುಕ್ತ ಆದಿತ್ಯವಾರ ಮುಂಜಾನೆ 5 ಗಂಟೆಗೆ ಸಾವಿರಾರು ಹಣತೆ ದೀಪಗಳಿಂದ ವಿಶ್ವರೂಪ ದರ್ಶನ ನಡೆಯಿತು. ಈ ಸಂದರ್ಭದಲ್ಲಿ 15 ಅಡಿ ಉದ್ದದ ಅಯೋಧ್ಯಾ ರಾಮ ಮಂದಿರದ ಮಾದರಿಯ ರಂಗೋಲಿಯು ಭಕ್ತಾಧಿಗಳ ಗಮನ ಸೆಳೆಯಿತು. ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ, ದೀಪಾರಾಧನೆ, ಭಜನಾ ಕಾರ್ಯಕ್ರಮ ನಡೆಯಿತು. ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು. ವೈಶವಾಣಿ ಸಮಾಜದ ದೇವಳದ ಆಡಳಿತ ಮಂಡಳಿ ಸದಸ್ಯರು […]