ಇಂಫಾಲದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ UFO? ಭಾರತೀಯ ವಾಯು ಸೇನೆಯಿಂದ ವಾಯು ರಕ್ಷಣಾ ಪ್ರತಿಕ್ರಿಯೆ

ಇಂಫಾಲ್: ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿರುವ ಬಿರ್ ಟಿಕೇಂದ್ರಜಿತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಂತ್ರಿತ ವಾಯುಪ್ರದೇಶವನ್ನು ಅಪರಿಚಿತ ಹಾರುವ ವಸ್ತು(UFO) ಕಂಡ ನಂತರ ಸುಮಾರು ಮೂರು ಗಂಟೆಗಳ ಕಾಲ ಮುಚ್ಚಲಾಗಿತ್ತು ಎಂದು ವರದಿಯಾಗಿದೆ. ಭಾನುವಾರ ಮಧ್ಯಾಹ್ನ 2.30 ಕ್ಕೆ ಇಂಫಾಲ್ ಏರ್ ಟ್ರಾಫಿಕ್ ಕಂಟ್ರೋಲ್ (ATC) ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ನಿಯಂತ್ರಣ ಕೊಠಡಿಯಿಂದ ಎಟಿಸಿ ಟವರ್ ಮೇಲೆ ಅಪರಿಚಿತ ಹಾರುವ ವಸ್ತು ಕಾಣಿಸಿಕೊಂಡಿದೆ ಎಂದು ಕರೆ ಬಂದಿದೆ. ಎಟಿಸಿ ಟವರ್‌ನ ಟೆರೇಸ್‌ನಿಂದ ವಸ್ತುವು ಗೋಚರಿಸಿದೆ; ಏರ್‌ಲೈನ್ಸ್ […]

ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಶ್ರೀ ವೆಂಕಟರಮಣ ಕಾಲೇಜು ವಿದ್ಯಾರ್ಥಿಗಳು ಪ್ರಥಮ

ಕುಂದಾಪುರ: ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆಸಿದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಶಾಶ್ವತ್ ಮತ್ತು ಪ್ರಥ್ವಿನ್ ಪ್ರಥಮ ಸ್ಥಾನ ಪಡೆದಿದ್ದಾರೆ. ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಧಾರಿಣಿ ಕೆ. ಎಸ್ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ್ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಡಾ. ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ- 2023

ಉಡುಪಿ: ಗ್ರಂಥಾಲಯಗಳು ವಿದ್ಯಾರ್ಥಿಗಳ ಕಲ್ಪನಾಶಕ್ತಿಯನ್ನು ಹೆಚ್ಚಿಸುತ್ತವೆ. ವಿವಿಧ ವಿಷಯಗಳನ್ನು ಹುಡುಕಲು ಮತ್ತು ತಿಳಿದುಕೊಳ್ಳಲು ಹೊಸ ಸ್ಪೂರ್ತಿ ನೀಡುತ್ತವೆ ಎಂದು ಅಪರ ಜಿಲ್ಲಾಧಿಕಾರಿ ಮಮತ ದೇವಿ ಜಿ. ಎಸ್ ಹೇಳಿದರು. ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿನ ಐಕ್ಯೂಎಸಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಕಾಲೇಜಿನ ಯು. ಜಿ. ಸಭಾಂಗಣದಲ್ಲಿ ನಡೆದ ಗ್ರಂಥಾಲಯದ ಯುಟ್ಯೂಬ್ ಮತ್ತು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ – 2023 […]

ಸೂರೆಬೆಟ್ಟು ವೆಂಕಟರಮಣ ಸಾಮಂತ್ ನಿಧನ

ಚೇರ್ಕಾಡಿ: ಗ್ರಾಮದ ಸೂರೆಬೆಟ್ಟು ನಿವೃತ್ತ ಶಿಕ್ಷಕ ವೆಂಕಟರಮಣ ಸಾಮಂತ್ (95) ವರ್ಷ. ನ.18 ರಂದು ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. ಬ್ರಹ್ಮಾವರ ಕಾಸ್ಮೋಪಾಲಿಟನ್ ಶಾಲೆಯಲ್ಲಿ 35 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು, ಚೇರ್ಕಾಡಿ ಆರ್.ಕೆ ಪಾಟ್ಕರ್ ಶಾಲೆಯ ಆಡಳಿತ ಮಂಡಳಿ ಸದಸ್ಯರಾಗಿ, ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿಯಾಗಿ, ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಳದ ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪರೋಪಕಾರಿಯಾಗಿ ಊರಿನಲ್ಲಿ ಜನಪ್ರಿಯರಾಗಿದ್ದ ಸಾಮಂತ್ ಅವರು ಪತ್ನಿ ನಿವೃತ್ತ ಶಿಕ್ಷಕಿ ಕಮಲಾ […]

11 ನೇ ವರ್ಷದ ಕಕ್ಯಪದವು ಸತ್ಯ-ಧರ್ಮ ಜೋಡುಕರೆ ಕಂಬಳದ ಫಲಿತಾಂಶ

ಕಕ್ಯಪದವು: ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯುವ 2023-24ರ ಸಾಲಿನ ಮೊದಲ ಕಂಬಳ ಕೂಟವು ಬಂಟ್ವಾಳ ತಾಲೂಕಿನ ಕಕ್ಯಪದವಿನಲ್ಲಿ ನಡೆಯಿತು. ಮೈರಾ ಉಳಿಗ್ರಾಮದಲ್ಲಿ ಶನಿವಾರ ಮತ್ತು ಭಾನುವಾರ ನಡೆದ ‘ಸತ್ಯ – ಧರ್ಮ’ ಜೋಡುಕರೆ ಕಂಬಳ ಕೂಟದಲ್ಲಿ 189 ಜೊತೆ ಕೋಣಗಳು ಭಾಗವಹಿಸಿದ್ದವು. 11ನೇ ವರ್ಷದ ಕಕ್ಯಪದವು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಐದು ಜೊತೆ ಕೋಣಗಳು, ಅಡ್ಡಹಲಗೆ ವಿಭಾಗದಲ್ಲಿ ಐದು ಜೊತೆ ಕೋಣಗಳು, ಹಗ್ಗ ಹಿರಿಯ ವಿಭಾಗದಲ್ಲಿ 19 ಜೊತೆ ಕೋಣಗಳು, ನೇಗಿಲು ಹಿರಿಯ ವಿಭಾಗದಲ್ಲಿ 28 […]