ಅಬಾಕಸ್‌ ಇಂಟರ್‌ ನ್ಯಾಶನಲ್: ಅತ್ಯುತ್ತಮ ಶ್ರೇಣಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ಮಣಿಪಾಲ: ಶ್ರೀ ಶಾರದ ಟೀಚರ್‌ ಟ್ರೈನಿಂಗ್‌ ಇನ್ಸ್ಟಿಟ್ಯೂಟ್, ಮಣಿಪಾಲ ಇದರ ಅಂಗಸಂಸ್ಥೆಯಾದ ಸುಲಭ್ ಸೂತ್ರ್ – ಅಬಾಕಸ್ ಮತ್ತು ವೇದಗಣಿತ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ರಾಬಾ ಇಂಟರ್‌ ನ್ಯಾಶನಲ್‌ ಕಲ್ಚರಲ್‌ ಅಕಾಡೆಮಿ ಚೆನೈ ಇವರ ಆಶ್ರಯದಲ್ಲಿ ನಡೆಸಿದ ಅಬಾಕಸ್‌ ಇಂಟರ್‌ ನ್ಯಾಶನಲ್ ಲೆವಲಿನಲ್ಲಿಅತ್ಯುತ್ತಮ ಶ್ರೇಣಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಪುರಸ್ಕಾರ ಸಮಾರಂಭವು ನ.18 ರಂದು ಕ್ರಿಸ್ಟಲ್ ಬಿಜ್ಹ್ ಹಬ್‌ನಲ್ಲಿ, ಚಂದ್ರಕಲಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಣಿಪಾಲ ಠಾಣೆಯ ಪೊಲೀಸ್ […]

ಯುವಜನರ ಪ್ರತಿಭೆ ಅನಾವರಣಗೊಳಿಸಲು ಯುವಜನೋತ್ಸವ ಉತ್ತಮ ವೇದಿಕೆ: ಯಶ್ ಪಾಲ್ ಸುವರ್ಣ

ಉಡುಪಿ: ಯುವ ಜನರು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಯುವಜನೋತ್ಸವ ಒಂದು ಉತ್ತಮ ವೇದಿಕೆಯಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಯಶ್‌ಪಾಲ್ ಸುವರ್ಣ ಕರೆ ನೀಡಿದರು. ನಗರದ ಅಮೃತ್ ಗಾರ್ಡನ್‌ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಲಯನ್ಸ್ ಅಮೃತ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವ ಜನೋತ್ಸವ ಕಾರ್ಯಕ್ರಮಗಳನ್ನು ಸರ್ಕಾರ ಪ್ರತೀ ವರ್ಷವು […]

ಇಂದು ಹಾಗೂ ನಾಳೆ ಕಾರ್ಮಿಕ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಉಡುಪಿ: ಕರ್ನಾಟಕ ಸರಕಾರದ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ನವೆಂಬರ್ 19 ಮತ್ತು 20 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನ. 19 ರಂದು ರಾತ್ರಿ 8 ಕ್ಕೆ ಕುಂದಾಪುರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಉಡುಪಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ನ. 20 ರಂದು ನಗರದ ಪರಿವೀಕ್ಷಣಾ ಮಂದಿರದಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ, 10 ಕ್ಕೆ ಸ್ಥಳೀಯ ಕಾರ್ಯಕ್ರಮ, 11 ಕ್ಕೆ ನಗರದ ಮಣಿಪಾಲ […]

ಕುಂದಾಪುರ: ಶ್ರೀ ವೆಂಕಟರಮಣ ಪಿ.ಯು ಕಾಲೇಜಿನಲ್ಲಿ ‘ಬಿಸ್ ನೆಸ್ ಡೇ -2023’

ಕುಂದಾಪುರ: ದೇಶದ ಆರ್ಥಿಕತೆ ಬೆಳೆಯುವಲ್ಲಿ ಯುವ ಪೀಳಿಗೆಯ ಕೌಶಲ್ಯ ಅಗತ್ಯ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ವಾಣಿಜ್ಯ ಕೌಶಲ್ಯ ಉಳಿದ ಎಲ್ಲಾ ಕಡೆಗಳಿಗಿಂತ ಭಿನ್ನ ಮತ್ತು ವಿಶೇಷ. ವಿದ್ಯಾರ್ಥಿಗಳಿಗೆ ಕಾಲೇಜು ಕ್ಯಾಂಪಸ್‌ ಒಂದರಲ್ಲಿ ವಾಣಿಜ್ಯ ಮೇಳವೊಂದನ್ನು ಇಷ್ಟು ಸೃಜನಾತ್ಮಕವಾಗಿ ಆಯೋಜಿಸುತ್ತಿರುವುದು ಸ್ತುತ್ಯಾರ್ಹ ಎಂದು ಕೆನರಾ ಬ್ಯಾಂಕ್ ಮಣಿಪಾಲ ಇದರ ಜನರಲ್ ಮ್ಯಾನೇಜರ್ ಎಂ. ಜಿ. ಪಂಡಿತ್ ಅಭಿಪ್ರಾಯಪಟ್ಟರು. ಅವರು ಶನಿವಾರದಂದು ಶ್ರೀ ವೆಂಕಟರಮಣ ಪಿ.ಯು ಕಾಲೇಜಿನಲ್ಲಿ ‘ಬಿಸ್ ನೆಸ್ ಡೇ -2023’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ […]