ನ. 19 ರಂದು ಜಿಲ್ಲಾ ಬಾಲಭವನದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆ

ಉಡುಪಿ: ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ನವೆಂಬರ್ 19 ರಂದು ಬೆಳಗ್ಗೆ 10 ಗಂಟೆಗೆ 9 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಸೃಜನಾತ್ಮಕ ಪ್ರದರ್ಶನ ಕಲೆ (ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದಿ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ), ವಿಜ್ಞಾನದಲ್ಲಿ ನೂತನ ಆವಿಷ್ಕಾರ, ಚಿತ್ರಕಲಾ ಸ್ಪರ್ಧೆ, ವಾದ್ಯ ಸಂಗೀತ (ತಬಲಾ, ಮೃದಂಗ, ಕೀಬೋರ್ಡ್, ಕೊಳಲು, ಡೊಳ್ಳು ಮತ್ತು ನಗಾರಿ) ಹಾಗೂ ಅಂಗವಿಕಲ/ ಬುಡಕಟ್ಟು […]
ಅರೆಹೊಳೆ ಪ್ರತಿಷ್ಠಾನ ಏರ್ಪಡಿಸುತ್ತಿರುವ ನಾಟಕೋತ್ಸವ: ಡಿ.3 ರಿಂದ 5 ರವರೆಗೆ ನಾಟಕಗಳ ಹಬ್ಬ

ಕುಂದಾಪುರ: ಅರೆಹೊಳೆ ಪ್ರತಿಷ್ಠಾನ ರಂಗಪಯಣ ಬೆಂಗಳೂರು, ಮಂದಾರ(ರಿ) ಬೈಕಾಡಿ ಹಾಗೂ ಜನಪ್ರತಿನಿಧಿ ಕುಂದಾಪುರ ವತಿಯಿಂದ ಡಿ.3 ರಿಂದ 5 ರವರೆಗೆ ಸಂಜೆ 6.30 ಕ್ಕೆ ಡಾ. ಹಂದಟ್ಟು ಹರೀಶ್ ಹಂದೆ ರಂಗಮಂದಿರದಲ್ಲಿ ನಾಟಕೋತ್ಸವ ನಡೆಯಲಿದೆ. ಡಿ.3 ರಂದು ಫೂಲನ್ ದೇವಿ, ಡಿ.4 ರಂದು ಶರೀಫ, ಡಿ.5 ರಂದು ಬಿದ್ದೂರಿನ ಬಿಗ್ ಬೆನ್ ನಾಟಕಗಳ ಪ್ರದರ್ಶನವಿರಲಿದೆ. ಡಿ.5 ರಂದು ಕಾರ್ತಿಕ ಬ್ರಹ್ಮಾವರ ನೆನಪಿನ ಕಾರ್ತಿಕ ನಮನ ಮಡೆಯಲಿದೆ. ಕಾರ್ತಿಕ್ ನೆನಪಿನ ರಂಗ ಪ್ರಶಸ್ತಿಯನ್ನು ಕಲಾವಿದೆ ಲಿಖಿತಾ ಶೆಟ್ಟಿ ಇವರಿಗೆ […]
ಹೆಬ್ರಿ: ನ.19 ರಂದು ‘ವಾಯ್ಸ್ ಆಫ್ ಚಾಣಕ್ಯ-2023’ ಸಂಗೀತ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ

ಹೆಬ್ರಿ: ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಹೆಬ್ರಿಯ ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಇವರ ನೇತೃತ್ವದಲ್ಲಿ ನಡೆಯುವ ‘ವಾಯ್ಸ್ ಆಫ್ ಚಾಣಕ್ಯ-2023’ ಸಂಗೀತ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆಯು ಹೆಬ್ರಿ ಸರಕಾರಿ ಪ್ರೌಢಶಾಲೆಯ ಸಹಕಾರದೊಂದಿಗೆ ನ.19 ರಂದು ಬೆಳಿಗ್ಗೆ 10 ಗಂಟೆಗೆ ಹೆಬ್ರಿ ಸರಕಾರಿ ಪ.ಪೂ.ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಉಡುಪಿ,ದ.ಕ ಹಾಗೂ ಶಿವಮೊಗ್ಗ ಜಿಲ್ಲೆಯವರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಸಹಕಾರ ಸಂಘಗಳಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಜಾರಿಗೆ ತನ್ನಿ: ರಾಯಪ್ಪ

ಉಡುಪಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ. ಉಡುಪಿ , ಉಡುಪಿ ಇಂಡಸ್ಟ್ರಿಯಲ್ ಕೋ – ಆಪರೇಟಿವ್ ಸೊಸೈಟಿ ಲಿ. ಕಿನ್ನಿಮೂಲ್ಕಿ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ನಡೆದ 70 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ 4 ನೇ ದಿನದ ಸಹಕಾರ ಸಮಾವೇಶವು ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ್ ಸಭಾ ಭವನದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಉಡುಪಿ […]
ಮಂಗಳೂರು: ಕೊಡಿಯಾಲ್ ಗುತ್ತಿನಲ್ಲಿ ನ. 19 ರಿಂದ 25 ರವರೆಗೆ ವಿಶ್ವ ಪರಂಪರೆಯ ಸಪ್ತಾಹ

ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ನ ಮಂಗಳೂರು ವಿಭಾಗವು 2023 ರ ನವೆಂಬರ್ 19 ರಿಂದ ನವೆಂಬರ್ 25 ರವರೆಗೆ ವಿಶ್ವ ಪರಂಪರೆಯ ಸಪ್ತಾಹವನ್ನು ಮಂಗಳೂರಿನ ಕೊಡಿಯಾಲ್ ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆಚರಿಸಲಿದೆ. ನವೆಂಬರ್ 19 ರಂದು ಭಾನುವಾರ ಬೆಳಿಗ್ಗೆ 10:30 ಕ್ಕೆ ಮಂಗಳೂರಿನ ಜಿಲ್ಲಾ ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಶಪ್ಪ ಅವರು “ಕೆಡಹುವಿಕೆ ತೀರ್ಪಿನಿಂದ ಬದುಕುಳಿದ ಉಡುಪಿ ಉಪ ಕಾರಾಗೃಹ” ಎಂಬ ವಸ್ತುಪ್ರದರ್ಶನವನ್ನು ಉದ್ಘಾಟಿಸುವುದರೊಂದಿಗೆ […]