ರಾಜ್ಯ ಮಟ್ಟದ 70 ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಪ್ರಚಾರ ರಥಕ್ಕೆ ಚಾಲನೆ
ಉಡುಪಿ: ರಾಜ್ಯ ಮಟ್ಟದ 70 ನೇ ಅಖಿಲ ಭಾರತ ಸಹಕಾರಿ ಸಪ್ತಾಹ ನವೆಂಬರ್ 14 ರಿಂದ 21 ರವರೆಗೆ ನಡೆಯಲಿದ್ದು, ಸಹಕಾರಿ ಸಪ್ತಾಹದ ಅಂಗವಾಗಿ ಮಂಗಳವಾರ ಉಡುಪಿ ಲಿಕೋ ಬ್ಯಾಂಕ್ ಆವರಣದಲ್ಲಿ ಸಹಕಾರ ಪ್ರಚಾರ ರಥಕ್ಕೆ ಸಹಕಾರಿ ಯೂನಿಯನ್ ನಿರ್ದೇಶಕ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಇವರು ಸಹಕಾರಿ ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಎಲ್ ಐ ಸಿ […]
ಉಡುಪಿ ಎಕ್ಸ್ ಪ್ರೆಸ್ “ಅಮ್ಮ ವಿತ್ ಕಂದಮ್ಮ ಸೀಸನ್-4” ನ ಬಹುಮಾನ ವಿಜೇತ ಅಮ್ಮ-ಮಕ್ಕಳಿವರು
ಉಡುಪಿ: ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾದ ನಿಮ್ಮ ಉಡುಪಿ ಎಕ್ಸ್ ಪ್ರೆಸ್ ಪ್ರತಿ ಬಾರಿಯಂತೆಯೆ ಈ ಬಾರಿಯೂ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದಮ್ಮಗಳ ಜೊತೆ ತಾಯಂದಿರ ಫೋಟೋ ಸ್ಪರ್ಧೆ “ಅಮ್ಮ ವಿದ್ ಕಂದಮ್ಮ-ಸೀಸನ್ 4” ಅನ್ನು ಏರ್ಪಡಿಸಿದ್ದು, ಸತತ ನಾಲ್ಕನೇ ವರ್ಷವೂ ಅಮ್ಮಂದಿರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ ವಿಶೇಷವಾಗಿ ಕನ್ನಡದ ಜನಮೆಚ್ಚಿದ ನಟಿ ಪೂಜಾ ಗಾಂಧಿಯವರು ತೀರ್ಪುಗಾರರಾಗಿ ಅತ್ಯುತ್ತಮ ಫೋಟೋಗಳನ್ನು ಆಯ್ಕೆ ಮಾಡಿ ವಿಜೇತರನ್ನು ಘೋಷಿಸಿದ್ದಾರೆ. ಪೂಜಾ ಗಾಂಧಿ ಅವರು ವಿವಿಧ ಆಯಾಮಗಳಲ್ಲಿ ಫೋಟೋಗಳ […]
ನೇಜಾರ್ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಆರೋಪಿ ಪತ್ತೆಗೆ ತಂಡ ರಚಿಸಿದ ಪೊಲೀಸರು
ಉಡುಪಿ : ನಗರದ ಮಲ್ಪೆ ಸಮೀಪದ ನೇಜಾರ್‌ನ ತೃಪ್ತಿ ನಗರದಲ್ಲಿ ಭಾನುವಾರ ಬೆಳಗ್ಗೆ ನಡೆದ ಮಹಿಳೆ ಮತ್ತು ಆಕೆಯ ಮೂವರು ಮಕ್ಕಳ ಹತ್ಯೆ ಪ್ರಕರಣದಲ್ಲಿ ಉಡುಪಿ ಪೊಲೀಸರಿಗೆ ಇನ್ನೂ ಪ್ರಗತಿ ಸಿಕ್ಕಿಲ್ಲ. ಮನೆಯವರಿಗೆ ಗೊತ್ತಿರುವ ವ್ಯಕ್ತಿಯೇ ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸ್ ತಂಡಗಳು ಹಸೀನಾ ಮತ್ತು ಇತರ ವ್ಯಕ್ತಿಗಳ ಕಾಲ್ ದಾಖಲೆಗಳನ್ನು ಪರಿಶೀಲಿಸುತ್ತಿವೆ. ಮನೆಯ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಹತ್ಯೆಯನ್ನು ಭೇದಿಸಲು ಐದು ತಂಡಗಳನ್ನು ರಚಿಸಲಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು […]
ಗಂಗೊಳ್ಳಿ: ಮೀನುಗಾರಿಕಾ ಬೋಟ್ ಅಗ್ನಿ ದುರಂತ; 50 ಲಕ್ಷ ಪರಿಹಾರ ನೀಡಲು ಶಾಸಕ ಯಶ್ಪಾಲ್ ಸುವರ್ಣ ಆಗ್ರಹ
ಕುಂದಾಪುರ: ಗಂಗೊಳ್ಳಿ ಬಂದರು ಪ್ರದೇಶದಲ್ಲಿ ನಿಲ್ಲಿಸಿದ್ದ 9 ಬೋಟ್ ಗಳು ಅಗ್ನಿ ಅವಘಡದಿಂದ ಹಾನಿಗೀಡಾಗಿದ್ದು ಘಟನಾ ಸ್ಥಳಕ್ಕೆ ಶಾಸಕ ಯಶ್ ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ, ಅಗ್ನಿ ಅವಘಡದಿಂದ ಸುಮಾರು 10 ಕೋಟಿಯಷ್ಟು ನಷ್ಟ ಉಂಟಾಗಿದ್ದು, ರಾಜ್ಯ ಸರಕಾರ ಕೂಡಲೇ ಬೋಟ್ ಮಾಲೀಕರಿಗೆ ತಲಾ 50 ಲಕ್ಷ ಪರಿಹಾರ ನೀಡಿ ಸಂಕಷ್ಟಕ್ಕೀಡಾದ ಮೀನುಗಾರರಿಗೆ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡಬೇಕು ಎಂದಿದ್ದಾರೆ. […]