ಬದಲಾದ ಕಾಲಘಟ್ಟದಲ್ಲಿ ಬದಲಾದ ದೀಪಾವಳಿಯ ಆಚರಣೆಗಳು: ಡಾ. ಪರಶುರಾಮ ಕಾಮತ್

ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಸುಮಾರು ಎರಡು ದಶಕಗಳ ಹಿಂದಿನ ದೀಪಾವಳಿ ಆಚರಣೆಯ ಸೊಗಡು ಇಂದು ಎಲ್ಲೋ ಮಾಯವಾದಂತೆ ಕಾಣಿಸುತ್ತಿದೆ. ಅಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳಿದ್ದವು. ಹೀಗಾಗಿ ಮನೆ ತುಂಬಾ ಸದಸ್ಯರು, ಅವರೊಳಗಿನ ಅವಿನಾಭಾವ ಸಂಬಂಧ ಕುಟುಂಬದ ಒಗ್ಗಟ್ಟಿಗೆ ಸಹಕಾರಿಯಾಗಿತ್ತು. ದೀಪಾವಳಿಯಂದು ಮನೆಯವರೆಲ್ಲರೂ ಸಕ್ರಿಯವಾಗಿ ಭಾಗವಹಿಸುವ ಮೂಲಕ ಹಬ್ಬದ ಆಚರಣೆಗೆ ವಿಶೇಷ ಮೆರುಗನ್ನು ನೀಡುತ್ತಿದ್ದರು. ಇಂದಿನ ವಿಭಕ್ತ ಕುಟುಂಬಗಳಲ್ಲಿ ತಂದೆ ತಾಯಿ ಮತ್ತು ಮಕ್ಕಳು ಮಾತ್ರವಿರುವುದರಿಂದ ತಕ್ಕ ಮಟ್ಟಿನಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿದೆ. ವಿಪರ್ಯಾಸವೆಂದರೆ ಉದ್ಯೋಗವನ್ನರಸಿ […]

ಜ್ಞಾನದ ವಿಜಯಕ್ಕೆ ಮತ್ತೆ ಬೆಳಕಿನ ಚಿತ್ತಾರದ ಸಂಭ್ರಮ..

ದೀಪಾವಳಿ ಹಬ್ಬ ಆಚರಣೆಯ ಬಗ್ಗೆ ಪ್ರಿಯದರ್ಶಿನಿ ಅವರು ಬರೆದ ವಿಶೇಷ ಬರಹ..ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಹಬ್ಬಗಳೆಂದರೆ ಮೈ ಮನ ಸ್ವಚ್ಚಗೊಳಿಸುವುದು ಮತ್ತು ದಿನನಿತ್ಯವಲ್ಲದ ಹೊಸದೊಂದು ದಿನದ ಆಚರಣೆ. ಈ ಹಬ್ಬಗಳೇ ಬದುಕಿಗೆ ವಿಶೇಷ ಕಾರಣ, ನಮ್ಮ ದೈನಂದಿನ ಬದುಕಿಗೆ ಒಂದಷ್ಟು ವಿಶೇಷ ಆಚರಣೆಗಳ ಮೂಲಕ ಕಳೆ ತುಂಬುವ ಸಂಭ್ರಮ ವಿದು. ಹಾಗಾಗಿ ನಮ್ಮ ಅನೇಕ ಪ್ರಸಿದ್ಧ ಹಬ್ಬಗಳಲ್ಲಿ ದೀಪಾವಳಿಗೆ ವಿಶೇಷ ಮನ್ನಣೆಯಿದೆ. ಮುಂಗಾರು ಬೆಳೆ […]