ಡಾ.ಜಿ ರಾಮಕೃಷ್ಣ ಆಚಾರ್ ಅವರಿಗೆ ಹುಟ್ಟೂರ ಸನ್ಮಾನ

ಗುಡ್ಡೆಯಂಗಡಿ: ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ, ಎಸ್.ಕೆ.ಎಫ್ ಎಲಿಕ್ಸೆರ್ ಇಂಡಿಯಾ ಪ್ರೈ.ಲಿ ಇದರ ಅಧ್ಯಕ್ಷ ಡಾ.ಜಿ ರಾಮಕೃಷ್ಣ ಆಚಾರ್ ಇವರಿಗೆ ಹುಟ್ಟೂರ ಸನ್ಮಾನ ಸಮಾರಂಭವನ್ನು ನ.11 ರಂದು ಸಂಜೆ 5 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಡಾಡಿ-ಮತ್ಯಾಡಿ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪ್ರಖ್ಯಾತ ನಟ ರಮೇಶ್ ಅರವಿಂದ್ ಹಾಗೂ ನಿರೂಪಕಿ ಜಾಹ್ನವಿ ಭಾಗವಹಿಸಲಿದ್ದಾರೆ. ಸಮಾರಂಭದ ನಿಮಿತ್ತ ಶಾಲಾ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ, ಪುರಮೆರವಣಿಗೆ, ಸಂಗೀತ ರಸಮಂಜರಿ ನಡೆಯಲಿದೆ. ರಾತ್ರಿ […]

24ನೇ ರಾಜ್ಯಮಟ್ಟದ ಮಾಸ್ಟರ್ಸ್ ಸ್ವಿಮ್ಮಿಂಗ್ ಸ್ಪರ್ಧೆ: ಉಡುಪಿಯ ಶ್ರೀಧರ ಉಳಿತ್ತಾಯ ಇವರಿಗೆ ಚಿನ್ನದ ಪದಕ

ಉಡುಪಿ: ನ. 4 ಮತ್ತು 5 ರಂದು ಬೆಂಗಳೂರಿನ ವಿಜಯನಗರ ಸ್ವಿಮ್ಮಿಂಗ್ ಪೂಲ್ ನಲ್ಲಿ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಆಯೋಜಿಸಿರುವ 24ನೇ ರಾಜ್ಯಮಟ್ಟದ ಮಾಸ್ಟರ್ಸ್ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಬಾರಕೂರು ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಶ್ರೀಧರ ಉಳಿತ್ತಾಯ ಇವರು ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು 100 ಮೀಟರ್ ಬಟರ್ ಫ್ಲೈ ನಲ್ಲಿ ಚಿನ್ನದಪದಕ,100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಚಿನ್ನದ ಪದಕ, 50 […]

ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ ಹೃದಾಯಾಘಾತದಿಂದ ನಿಧನ

ಉಡುಪಿ: ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ (57) ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ. ಗುರವಾರ ಮುಂಜಾನೆ ಉಡುಪಿಯ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ನಗರದ ಆಸ್ಪತ್ರೆಗೆ ಸಾಗಿಸಲಾಗಿದೆ. ಹೃದಯಾಘಾತ ದೃಢಪಟ್ಟ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಹೆಮ್ಮಣ್ಣ ಅವರು ತೀವ್ರ ಅಸ್ವಸ್ಥಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಮ್ಮಣ್ಣ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. 1991 ರಲ್ಲಿ ಕುಂದಪ್ರಭ ಪತ್ರಿಕೆಯ ಮೂಲಕ ವೃತ್ತಿ ಜೀವನ ಅರಂಭಿಸಿದ ಶಶಿಧರ್ ಹೆಮ್ಮಣ್ಣ, […]

ಆದಿ ಉಡುಪಿ ಸಂತೆ ಮಾರುಕಟ್ಟೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಶ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಆದಿ ಉಡುಪಿ ಸಂತೆ ಮಾರುಕಟ್ಟೆಯಲ್ಲಿ ಬುಧವಾರ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ 81 ಕೆ.ಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು 12,400 ರೂ. ದಂಡ ವಿಧಿಸಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ಮರುಬಳಕೆಯ ವಸ್ತುಗಳನ್ನು ಬಳಸುವಂತೆ ಸೂಚಿಸಲಾಯಿತು. ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮನೆ, ಮದುವೆ ಹಾಲ್, ಹೊಟೇಲ್‌ಗಳಲ್ಲಿ ಸಮಾರಂಭ ಮಾಡುವಾಗ ಹಾಗೂ ರಸ್ತೆ ಬದಿ ಟೀ, ಕಾಫಿ, ತಿಂಡಿ ಮಾರಾಟ ಮಾಡುವವರು ರಾಜ್ಯ ಸರ್ಕಾರದ ನಿರ್ದೇಶನದಂತೆ ರೆಡ್ಯೂಸ್, […]

ರಾಷ್ಟ್ರೀಯ ಆಯುರ್ವೇದ ದಿನ-2023 ರ ಮುಖ್ಯ ಧ್ಯೇಯ ‘Ayurveda for One Health’

ಆಯುರ್ವೇದ ದಿನವನ್ನು 10ನೇ ನವೆಂಬರ್ 2023 ರಂದು ಆಚರಿಸಲಾಗುತ್ತದೆ.  ಆಯುರ್ವೇದ ದಿನ-2023 ರ ಮುಖ್ಯ ಧ್ಯೇಯ ‘Ayurveda for One Health’ ಎಂದು ನಿರ್ಧರಿಸಲಾಗಿದೆ. ಇದರ ಟ್ಯಾಗ್ ಲೈನ್ ‘Ayurveda for everyone on every day’ ಅಂದರೆ, ‘ಪ್ರತಿದಿನ ಎಲ್ಲರಿಗೂ ಆಯುರ್ವೇದ’. ಇದು ಪ್ರತಿ ಮಾನವ-ಪ್ರಾಣಿ-ಸಸ್ಯ-ಪರಿಸರವನ್ನು ಕೇಂದ್ರೀಕರಿಸುತ್ತದೆ. ಮಾನವೀಯತೆಯ ಮೂಲ ಆರೋಗ್ಯ ಸಂಪ್ರದಾಯವಾದ ಆಯುರ್ವೇದವು ಕೇವಲ ವೈದ್ಯಕೀಯ ವ್ಯವಸ್ಥೆಯಲ್ಲ, ಆದರೆ ಪ್ರಕೃತಿಯೊಂದಿಗಿನ ನಮ್ಮ ಸಹಜೀವನದ ಸಂಬಂಧದ ಅಭಿವ್ಯಕ್ತಿಯಾಗಿದೆ. ಇದು ಆರೋಗ್ಯ ರಕ್ಷಣೆಯ ಉತ್ತಮ ದಾಖಲಿತ ವ್ಯವಸ್ಥೆಯಾಗಿದೆ, […]