ನ.18ರಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಸಹಕಾರ ಸಪ್ತಾಹ ಉದ್ಘಾಟನೆ

ಉಡುಪಿ: ಉಭಯ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ಗಳ ನೇತೃತ್ವದಲ್ಲಿ ‘ಸಾರ್ವಜನಿಕ-ಖಾಸಗಿ-ಸಹಕಾರಿ ಸಹಭಾಗಿತ್ವವನ್ನು ಬಲಪಡಿಸುವುದು’ ಎಂಬ ವಿಷಯದೊಂದಿಗೆ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಮಂಗಳೂರಿನ ಉರ್ವಾ ಕ್ರಿಕೆಟ್ ಮೈದಾನದಲ್ಲಿ ನ. 18ರಂದು ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಸಹಕಾರ ಸಚಿವ ಕೆ.ಎನ್‌ ರಾಜಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. […]

ಉಡುಪಿ: ನ.14 ರಂದು ಕಸ ವಿಲೇವಾರಿ ಇಲ್ಲ

ಉಡುಪಿ: ಉಡುಪಿ ನಗರಸಭೆಯ ಎಲ್ಲಾ ಪೌರಕಾರ್ಮಿಕರಿಗೆ ಹಾಗೂ ವಾಹನ ಚಾಲಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 14 ರಂದು ರಜೆ ನೀಡಿದ್ದು, ದಿನದಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕಸ ವಿಲೇವಾರಿ ಇರುವುದಿಲ್ಲ. ಆದುದರಿಂದ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ

ಹೊಸದಿಲ್ಲಿ: ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷವು ತನ್ನ ಹೊಸ ರಾಜ್ಯಾಧ್ಯಕ್ಷರ ನೇಮಕ ಮಾಡಿದೆ. ಕಳೆದ ಕೆಲವು ತಿಂಗಳಿನಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪಕ್ಷದ ವರಿಷ್ಠ ನಾಯಕ ಯಡಯೂರಪ್ಪ ನವರ ಪುತ್ರ ಬಿ. ವೈ ವಿಜಯೇಂದ್ರ ಅವರ ನೇಮಕವಾಗಿದೆ. ಶಿಕಾರಿಪುರ ಶಾಸಕರಾಗಿರುವ ಯುವ ನಾಯಕ ಬಿ.ವೈ ವಿಜಯೇಂದ್ರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾಧ್ಯಕ್ಷರಾಗಿ ನೇಮಿಸಲಾಗಿದೆ. ರಾಜ್ಯ ವಿಧಾನಸಭೆ ಚುನಾವಣೆ ನಡೆದು ತಿಂಗಳುಗಳೇ ಕಳೆದರೂ ಹೊಸ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರ […]

ಉಡುಪಿ: ಹಸಿರು ಪಟಾಕಿ ಬಳಕೆಗೆ ಪೌರಾಯುಕ್ತರ ಸೂಚನೆ

ಉಡುಪಿ: ಸರ್ವೊಚ್ಚ ನ್ಯಾಯಾಲಯದ ಆದೇಶದಂತೆ ಪಟಾಕಿಗಳ ಮಾರಾಟ ಮತ್ತು ಬಳಕೆ ನಿಯಂತ್ರಿಸುವ ಸಲುವಾಗಿ ನಗರಸಭಾ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ, ಇತರೆ ಪಟಾಕಿಗಳ ಮಾರಾಟ ಮಾಡುವುದನ್ನು ಮತ್ತು ಸ್ಪೋಟಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಸ್ಪೋಟಕ ಕಾಯ್ದೆ ಅಡಿಯಲ್ಲಿ ಪಟಾಕಿ ಮಾರಾಟ ಮಾಡಲು ಪರವಾನಿಗೆಯನ್ನು ಪಡೆಯದೆ ಮಾರಾಟ ಮಾಡಿದಲ್ಲಿ, ನಿಷೇಧಿತ ಪಟಾಕಿಗಳ ಮಾರಾಟ, ಗಿಫ್ಟ್ ಬಾಕ್ಸ್ ಹಂಚಿಕೆ ಹಾಗೂ ಪಟಾಕಿ ಚೀಟಿ ನಡೆಸುವುದು (ಪಟಾಕಿ ಹಂಚುವುದು) ಕಂಡುಬಂದಲ್ಲಿ ಅಂತಹವರ ಮಾಹಿತಿಯನ್ನು ನಗರಸಭೆಗೆ ನೀಡಿದಲ್ಲಿ ಸದರಿರವರ […]

ಅಪರಿಚಿತ ವ್ಯಕ್ತಿಗಳ ಗುಂಡಿಗೆ ಮತ್ತೊಬ್ಬ ಭಯೋತ್ಪಾದಕ ಬಲಿ: ಎಲ್‌ಇಟಿ ಕಮಾಂಡರ್ ಹತ್ಯೆಗೈದ ಅಪರಿಚಿತ ಗನ್ ಮ್ಯಾನ್ ಗಳು

ಕರಾಚಿ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಅಕ್ರಮ್ ಖಾನ್ ಘಾಜಿಯನ್ನು ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಘಾಜಿ ಹತ್ಯೆಯ ತನಿಖೆಗಾಗಿ ಪಾಕಿಸ್ತಾನದ ಏಜೆನ್ಸಿಗಳು ಸ್ಥಳೀಯ ವಿರೋಧಿಗಳ ಪಾತ್ರವನ್ನು ಮತ್ತು ಎಲ್ಇಟಿಯೊಳಗಿನ ಜಗಳಗಳನ್ನು ಪರಿಶೀಲಿಸುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಘಾಜಿ ಎಲ್‌ಇಟಿಯ ಕೇಂದ್ರ ನೇಮಕಾತಿ ಸೆಲ್‌ನ ಪ್ರಮುಖ ಸದಸ್ಯನಾಗಿದ್ದ ಮತ್ತು ಕಾಶ್ಮೀರ ಕಣಿವೆಯೊಳಗೆ ಭಯೋತ್ಪಾದಕರನ್ನು ನುಸುಳಿಸುವ ಜವಾಬ್ದಾರಿಯನ್ನು ಹೊಂದಿದ್ದ ಎನ್ನಲಾಗಿದೆ. ಘಾಜಿಯ ಹತ್ಯೆಯು […]