ಬಂಟ್ವಾಳ: ಮಡಿವಾಳ ಯುವ ಬಳಗ ಅಧ್ಯಕ್ಷರಾಗಿ ಸಂದೇಶ್ ಕೊಯಿಲ ಆಯ್ಕೆ
ಬಂಟ್ವಾಳ: ಮಡಿವಾಳ ಯುವ ಬಳಗ ಇದರ ನೂತನ ಅಧ್ಯಕ್ಷರಾಗಿ ಸಂದೇಶ್ ಕೊಯಿಲ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಿತಿನ್ ಕೆಲಿಂಜ, ಪ್ರಧಾನ ಕಾರ್ಯದರ್ಶಿಯಾಗಿ ವಕ್ಷೀತ್ ಇನೋಳಿ, ಜತೆ ಕಾರ್ಯದರ್ಶಿಯಾಗಿ ತಿಲಕ್ ಮಡಿವಾಳಪಡ್ಪು, ಕೋಶಾಧಿಕಾರಿಯಾಗಿ ಗಣೇಶ್ ಅಬೀರಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ: ಹೆಸರಾಂತ ಬಟ್ಟೆ ಮಳಿಗೆ ಮತ್ತು ಆಟೋ ಚಾಲಕರ ಮಧ್ಯೆ ಮಾತಿನ ಚಕಮಕಿ; ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ
ಉಡುಪಿ: ಬನ್ನಂಜೆಯಲ್ಲಿ ನೂತನವಾಗಿ ಆರಂಭವಾಗಿರುವ ಹೆಸರಾಂತ ಬಟ್ಟೆ ಮಳಿಗೆ ಸಿಬ್ಬಂದಿಗಳಿಂದ ಆಟೋ ಚಾಲಕರ ಮೇಲೆ ನಿರಂತರ ದಬ್ಬಾಳಿಕೆ, ಹಲ್ಲೆಗಳು ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಇದೀಗ ಮತ್ತೊಮ್ಮೆ ಆಟೋ ಚಾಲ್ಕರ ಮತ್ತು ಮಳಿಗೆಯ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ವರದಿಯಾಗಿದೆ. ಮಳಿಗೆಗೆ ಬರುವ ಗ್ರಾಹಕರನ್ನು ಗಮ್ಯ ಸ್ಥಾನಕ್ಕೆ ಕೊಂಡೊಯ್ಯಲು ಆಟೋ ಸವಾರರು ಮಳಿಗೆಯ ಮುಂದೆ ಆಟೋ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನ್ನುವ ದೂರು ಒಂದು ಕಡೆಯಾದರೆ, ಆಟೋ ಚಾಲಕರ ಕೀ ತೆಗೆದುಕೊಳ್ಳುವುದು, […]
ಕರ್ನಾಟಕ ಬ್ಯಾಂಕ್ ಶತಮಾನೋತ್ಸವ ಸಂಭ್ರಮ: ಕೆಬಿಎಲ್ ಕಾರ್ ಲೋನ್ ಮೇಳಕ್ಕೆ ಚಾಲನೆ
ಉಡುಪಿ: ಕರ್ಣಾಟಕ ಬ್ಯಾ೦ಕ್ ಉಡುಪಿ ಪ್ರಾದೇಶಿಕ ಕಚೇರಿಯ ವತಿಯಿ೦ದ ನ.8 ರ೦ದು ‘ಕೆಬಿಎಲ್ ಕಾರ್ ಲೋನ್’ ಮೇಳಕ್ಕೆ ಕರ್ಣಾಟಕ ಬ್ಯಾ೦ಕ್‌ನ ಪ್ರಾದೇಶಿಕ ಕಛೇರಿಯ ಆವರಣದಲ್ಲಿ ಚಾಲನೆ ನೀಡಲಾಯಿತು. ಕರ್ಣಾಟಕ ಬ್ಯಾ೦ಕ್ ತನ್ನ ಶತಮಾನೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ‘ಕೆಬಿಎಲ್ ಉತ್ಸವ’ವನ್ನು ಆಚರಿಸುತ್ತಿದ್ದು ಗೃಹ, ಕಾರು, ಚಿನ್ನ ಹಾಗೂ ಕೃಷಿ ಸಾಲಗಳ ಮೇಲೆ ಆಕರ್ಷಕ ಬಡ್ಡಿದರ, ತ್ವರಿತ ಮಂಜೂರಾತಿ, ಸಂಸ್ಕರಣಾ ಶುಲ್ಕ ರಿಯಾಯಿತಿ ಸೇರಿ ಹಲವು ಪ್ರಯೋಜನಗಳನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಅಭಿಯಾನದ ಅಂಗವಾಗಿ ಆಯೋಜಿಸಿದ ‘ಕೆಬಿಎಲ್ […]
ನ.11 ರಂದುಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದತ್ತಿ ಉಪನ್ಯಾಸ
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಸಹಕಾರದಲ್ಲಿ ದಿ. ಪುಳಿಮಾರು ಎಂ. ಕೃಷ್ಣ ಶೆಟ್ಟಿ ಸ್ಮಾರಕ ದತ್ತಿ ಉಪನ್ಯಾಸ ಹಾಗೂ ಯಕ್ಷಪ್ರೇಮಿ ನಾರಾಯಣ ಸ್ಮಾರಕ ದತ್ತಿ ಪುರಸ್ಕಾರ ಸಮಾರಂಭವನ್ನು ನವೆಂಬರ್ 11, ಶನಿವಾರದಂದು 10.30ಕ್ಕೆ ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡಿನಲ್ಲಿ ನಡೆಸಲಾಗುವುದು. ಪ್ರಸಿದ್ಧ ಉರಗ […]