ಫೆಬ್ರವರಿಯೊಳಗೆ ವಾರಾಹಿ ಕಾಮಗಾರಿ ಪೂರ್ಣಗೊಳಿಸಿ: ಯಶ್ ಪಾಲ್ ಸುವರ್ಣ

ಉಡುಪಿ: ನಗರಕ್ಕೆ ಕುಡಿಯುವ ನೀರು ಪೂರೈಸುವ ವಾರಾಹಿ ಯೋಜನೆ ಕಾಮಗಾರಿ ಫೆಬ್ರವರಿಯೊಳಗೆ ಪೂರ್ಣಗೊಳಿಸಲು ಶಾಸಕ ಯಶ್​ಪಾಲ್​ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೋಮವಾರದಂದು ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಿಳಂಬಗತಿಯ ಕಾಮಗಾರಿ ಸಹಿಸುವುದಿಲ್ಲ, ಕಾಮಗಾರಿ ಮುಗಿಸಿ ನೀರು ಪೂರೈಸಬೇಕು ಎಂದು ತಾಕೀತು ಮಾಡಿದರು. ಕೆಯುಡಿಐಎಫ್​ಸಿ ಎಇಇ ಅರಕೇಶ್​ ಮಾಹಿತಿನೀಡಿ, ಪ್ರಸ್ತುತ ಒಟ್ಟು 38 ಕಿ. ಮೀ. ಮುಖ್ಯ ಪೈಪ್​ಲೈನ್​ ಸಂಪರ್ಕದಲ್ಲಿ 31 ಕಿ. ಮೀ. ಪೈಪ್​ಲೈನ್​ ಪೂರ್ಣಗೊಳಿಸಲಾಗಿದೆ. ಹಾಲಾಡಿ ಮತ್ತು ಭರತ್​ಕಲ್​ ಡಬ್ಲೂಟಿಪಿ […]

ಮಣಿಪಾಲ ಮ್ಯಾರಥಾನ್‌ 2024- ಸದಾಶಯದ ಓಟ; ದಾಖಲೆಯ 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ

ಮಣಿಪಾಲ: ಮಣಿಪಾಲ್‌ ಅಕಾಡೆಮಿ ಹೈಯರ್‌ ಎಜುಕೇಶನ್‌ ನಡೆಸುವ ಪ್ರತಿಷ್ಠಿತ ‘ಮಣಿಪಾಲ್‌ ಮ್ಯಾರಥಾನ್‌’ 6ನೇ ಆವೃತ್ತಿಗೆ ನೋಂದಣಿಯನ್ನು ಆರಂಭಿಸಲಾಗಿದೆ. ಭಾರತದಲ್ಲಿ ವಿದ್ಯಾರ್ಥಿ- ಆಯೋಜಿತ ಅಥ್ಲೆಟಿಕ್ಸ್‌ನಲ್ಲಿ ಅತ್ಯಂತ ಬೃಹತ್‌ ಎಂಬ ಖ್ಯಾತಿಗೆ ಪಾತ್ರವಾದ ಮಣಿಪಾಲ್‌ ಮ್ಯಾರಥಾನ್‌ ಉಡುಪಿ ಜಿಲ್ಲೆಯ ಮಣಿಪಾಲವೆಂಬ ಸುಂದರವಾದ ಪಟ್ಟಣದಲ್ಲಿ ನಡೆಯತ್ತಿದೆ. ಈ ವರ್ಷದ ಮ್ಯಾರಥಾನ್‌ ಕೇವಲ ವೈಯಕ್ತಿಕ ಸಾಧನೆಗೆ ಸೀಮಿತವಾಗಿಲ್ಲ; ಓಟಗಾರರ ಪರಸ್ಪರ ಸೌಹಾರ್ದ ಸಂಬಂಧ ಏರ್ಪಡುವುದಕ್ಕಷ್ಟೇ ಮೀಸಲಾಗಿಲ್ಲ. ಇದು ‘ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳ ಆರೈಕೆಯ ವಿಶ್ರಾಂತಿ ಗೃಹದ [ಹಾಸ್ಪೈಸ್‌ ಕೇರ್‌] ಕುರಿತ ಅರಿವನ್ನು ಸಮಾಜದಲ್ಲಿ […]

ಕಟಪಾಡಿ: ನ.9ರಂದು ಆಯುಷ್ ಆರೋಗ್ಯ ಶಿಬಿರ; ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಉಚಿತ ಚಿಕಿತ್ಸೆ

ಕಟಪಾಡಿ: ಆಯುಷ್‌ ಇಲಾಖೆ, ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಪತಂಜಲಿ ಯೋಗ ಸಮಿತಿ ಉಡುಪಿ ಕಟಪಾಡಿ ಕಕ್ಷೆ, ಕಟಪಾಡಿ ಗ್ರಾಮ ಪಂಚಾಯತ್, ಎಸ್.ವಿ.ಎಸ್. ಹಳೆ ವಿದ್ಯಾರ್ಥಿ ಸಂಘ ಕಟಪಾಡಿ, ಮಹಿಳಾ ಮಂಡಲ ಕಟಪಾಡಿ, ಕೋಟೆ ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಕಟಪಾಡಿ, ಸೃಷ್ಠಿ ಫೌಂಡೇಶನ್ ಕಟಪಾಡಿ, ಎಸ್.ವಿ.ಎಸ್.ವಿದ್ಯಾವರ್ಧಕ ಸಂಘ ಕಟಪಾಡಿ ಇವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಆಯುರ್ವೇದ ಆಸ್ಪತ್ರೆ ಉಡುಪಿ ಇದರ ರಾಷ್ಟ್ರೀಯ ಅಯುಷ್‌ ಅಭಿಯಾನದ ಯೋಜನೆಯಡಿ ನ.9ರಂದು ಬೆಳಗ್ಗೆ 9.30 ರಿಂದ 12.30 ರ ವರೆಗೆ […]

ನಗರ ಕೇಂದ್ರ ಗ್ರಂಥಾಲಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ

ಉಡುಪಿ: ಉಡುಪಿ ನಗರ ಕೇಂದ್ರ ಗ್ರಂಥಾಲಯದ ಶಾಖೆ ಕವಿ ಮುದ್ದಣ ಮಾರ್ಗ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹ- 2023 ಇದರ ಅಂಗವಾಗಿ ನ. 07 ರಂದು ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಮತ್ತು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಉಡುಪಿ ನಗರಸಭೆಯ ಪೌರಾಯುಕ್ತ ರಾಯಪ್ಪ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಬಳಸಿ ಅತೀ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ವ್ಯಯಿಸಿ ಗತ ಕಾಲದ ಇತಿಹಾಸ, ವಿಜ್ಙಾನ, ಆತ್ಮಚರಿತ್ರೆ, […]

ಹೆಮ್ಮಾಡಿ: ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ-ಖೇಲೋ ಜನತಾ 2023

ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಖೇಲೋ ಜನತಾ ವಾರ್ಷಿಕ ಕ್ರೀಡಾಕೂಟ 2023 ಅನ್ನು ಆಯೋಜಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಇವರು ವಹಿಸಿ ಪ್ರಾಸ್ತಾವಿಕವಾಗಿ ಕಾಲೇಜಿನ ಕ್ರೀಡಾ ಚಟುವಟಿಕೆಗಳ ಕುರಿತು ಮಾತನಾಡಿದರು‌. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಮಂಜುನಾಥ್ ಶೆಟ್ಟಿ ಗೌರವ ರಕ್ಷೆ ಸ್ವೀಕರಿಸಿ, ಕ್ರೀಡಾಜ್ಯೋತಿಯನ್ನು ಬೆಳಗಿಸಿ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಕ್ರೀಡಾಕೂಟಗಳು ಅದ್ಭುತವಾದ ವೇದಿಕೆಯಾಗಿದೆ ಎಂದು ಜನತಾ ಪದವಿ ಪೂರ್ವ ಕಾಲೇಜಿನ ಕ್ರೀಡಾ […]