ಕಾರ್ಕಳ: ವಿದ್ಯಾರ್ಥಿನಿ ನಾಪತ್ತೆ

ಉಡುಪಿ, ನ.08: ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಾವಿನಕಟ್ಟೆ ನಿವಾಸಿ ದೀಪಾ (21) ಎಂಬ ಯುವತಿಯು ನವೆಂಬರ್ 6 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 2 ಇಂಚು ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಸಂತೋಷ್ ರಾವ್ ಖುಲಾಸೆ ಆದೇಶ ಪ್ರಶ್ನಿಸಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ ಸಿಬಿಐ

ಬೆಂಗಳೂರು: 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂತೋಷ್‌ ರಾವ್‌ನನ್ನು ಖುಲಾಸೆಗೊಳಿಸಿದ ಕೇಂದ್ರೀಯ ತನಿಖಾ ದಳವು ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಸಂತೋಷ್‌ ರಾವ್‌ ನೈಜ ಆರೋಪಿ ಎನ್ನುವುದರ ಬಗ್ಗೆ ಪೂರ್ಣ ಸಾಕ್ಷ್ಯ ನೀಡಲು ವಿಫಲವಾಗಿದ್ದ ಸಿಬಿಐ ಮತ್ತೊಮ್ಮೆ ಪ್ರಕರಣವನ್ನು ಮುನ್ನಲೆಗೆ ತಂದಿದೆ. ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ಹೋರಾಟದ ಬಳಿಕ ರಾಜ್ಯ ಸರ್ಕಾರ ಸಿಬಿಐಗೆ ತನಿಖೆ ಜವಾಬ್ದಾರಿ ಒಪ್ಪಿಸಿ ಅದರಂತೆ ಸಂಸ್ಥೆಯು […]

ಸತ್ಯನಾಥ ಸ್ಟೋರ್ ಬ್ರಹ್ಮಾವರ, ತೀರ್ಥಹಳ್ಳಿ ಮತ್ತು ಕೊಪ್ಪದಲ್ಲಿ ದೀಪಾವಳಿ ಧಮಾಕ ವಿಶೇಷ ಆಫರ್!!

ಉಡುಪಿ : ಕರಾವಳಿ ಕರ್ನಾಟಕ ಮತ್ತು ಮಲೆನಾಡಿನಲ್ಲಿ ಮದುವೆ ಜವಳಿಗೆಂದೇ ಪ್ರಸಿದ್ಧವಾದ ಸತ್ಯನಾಥ ಸ್ಟೋರ್ ನ ಎಲ್ಲಾ ಮಳಿಗೆಯಲ್ಲಿ ದೀಪಾವಳಿ ಧಮಾಕ ವಿಶೇಷ ಆಫರ್ ಆರಂಭಗೊಂಡಿದೆ. ನ. 5 ರಿಂದ ಸತ್ಯನಾಥ ಸ್ಟೋರ್ ನ ಎಲ್ಲಾ ಮಳಿಗೆಯಲ್ಲಿ ಮಹಿಳೆಯರ, ಪುರುಷರ ಹಾಗೂ ಮಕ್ಕಳ ವಿವಿಧ ಬಗೆಯ ಮನ ಒಪ್ಪುವ ವಸ್ತ್ರಗಳಿಗೆ ವಿಶೇಷ ಕೊಡುಗೆಯಾಗಿ ಡಿಸ್ಕೌಂಟ್ ಘೋಷಿಸಿದೆ. ಎಲ್ಲಾ ವರ್ಗದ ಜನರ ವಸ್ತ್ರಗಳ ವಿಪುಲ ಸಂಗ್ರಹ ಒಂದೇ ಸೂರಿನಡಿ ಲಭ್ಯವಿದ್ದು, ಗ್ರಾಹಕರು ಈ ವಿಶೇಷ ರಿಯಾಯತಿಯ ದರ ಕಡಿತದ […]

ನ-18 ರಿಂದ ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು

ನೀಲಾವರ: ಮಹತೋಭಾರ ಶ್ರೀ ಮಹಿಷಮರ್ದಿನಿ ದೇವಸ್ಥಾನ ಶ್ರೀ ಕ್ಷೇತ್ರ ನೀಲಾವರದಲ್ಲಿ ವಿವಿಧ ಉತ್ಸವಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನ-18 ರಂದು ಮೊದಲೇ ಪಂಚಮಿ ತೀರ್ಥಸ್ನಾನಡಿ-2 ರಂದು ಎರಡನೇ ಪಂಚಮಿ ತೀರ್ಥಸ್ನಾನ, ರಂಗಪೂಜೆ ಮತ್ತು ದೀಪೋತ್ಸವಡಿ-18 ರಂದು ಷಷ್ಠಿ ರಥೋತ್ಸವಡಿ-23 ರಂದು ಶ್ರೀ ಕ್ಷೇತ್ರದಲ್ಲಿ ಪ್ರಥಮ ದೇವರ ಸೇವೆ ಆಟ ವಿ.ಸೂ: ಡಿ-2 ರ ಎರಡನೇ ಪಂಚಮಿ ತೀರ್ಥಸ್ನಾನದಂದು ರಾತ್ರಿ ಜರಗುವ ವಿಶೇಷ ದೀಪೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ಎಣ್ಣೆ ಬತ್ತಿಯನ್ನು ಸಲ್ಲಿಸಬಹುದು ಅಥವಾ ಕಾಣಿಕೆಯನ್ನು ಸೇವಾ ಕೌಂಟರಿನಲ್ಲಿ ಪಾವತಿಸಬಹುದು […]

ಸೌರ ಜ್ವಾಲೆಗಳ ಮೊದಲ ನೋಟವನ್ನು ಸೆರೆಹಿಡಿದ ಆದಿತ್ಯ-L1; ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ಇಸ್ರೋ

ಬೆಂಗಳೂರು: ಆದಿತ್ಯ- L1 ನಲ್ಲಿರುವ HEL1OS ಸೌರ ಜ್ವಾಲೆಗಳ ಮೊದಲ ಹೈ-ಎನರ್ಜಿ ಎಕ್ಸ್-ರೇ ನೋಟವನ್ನು ಅನ್ನು ಸೆರೆಹಿಡಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ(ISRO) ತಿಳಿಸಿದೆ. ರೆಕಾರ್ಡ್ ಮಾಡಲಾದ ಡೇಟಾವು NOAA ನ GOES ನಿಂದ ಒದಗಿಸಲಾದ ಎಕ್ಸ್-ರೇ ಬೆಳಕಿನ ವಕ್ರಾಕೃತಿಗಳೊಂದಿಗೆ ಸ್ಥಿರವಾಗಿದೆ. ಅಕ್ಟೋಬರ್ 27, 2023 ರಂದು ನಿಯೋಜಿಸಲಾಗಿರುವ HEL1OS ಪ್ರಸ್ತುತ ಮಿತಿಗಳು ಮತ್ತು ಮಾಪನಾಂಕ ನಿರ್ಣಯ ಕಾರ್ಯಾಚರಣೆಗಳ ಫೈನ್ ಟ್ಯೂನಿಂಗ್ ಗೆ ಒಳಗಾಗುತ್ತಿದೆ. ವೇಗದ ಸಮಯ ಮತ್ತು ಹೆಚ್ಚಿನ ರೆಸಲ್ಯೂಶನ್ ಸ್ಪೆಕ್ಟ್ರಾದೊಂದಿಗೆ ಸೂರ್ಯನ ಹೆಚ್ಚಿನ […]