ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಯ ಹತ್ಯೆ ಪ್ರಕರಣ: ಮಾಜಿ ಕಾರು ಚಾಲಕನ ಬಂಧನ

ಬೆಂಗಳೂರು: ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮಾಜಿ ಚಾಲಕನನ್ನು ಸೋಮವಾರ ಬಂಧಿಸಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿ ಪ್ರತಿಮಾ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಿರಣ್ ಎಂದು ಗುರುತಿಸಲಾದ ವ್ಯಕ್ತಿ ಮೊದಲು ಕಾಣೆಯಾಗಿದ್ದ. ಇತ್ತೀಚೆಗೆ ಕಿರಣ್ ನನ್ನು ಇಲಾಖೆಯ ಕೆಲಸದಿಂದ ತೆಗೆದುಹಾಕಲಾಗಿತ್ತು ಮತ್ತು ಅವರ ಬದಲಿಗೆ ಇನ್ನೊಬ್ಬ ಚಾಲಕನನ್ನು ನೇಮಿಸಲಾಗಿತ್ತು. ಘಟನೆಯ ನಂತರ ಕಿರಣ್ ನ ಮೊಬೈಲ್ ಫೋನ್ […]

ನ.17 ರಂದು ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಮನೆಗೊಂದು ದೀಪ ರಂಗಪೂಜೆ

ಕಾರ್ಕಳ: ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೊರಂಗ್ರಪಾಡಿ ವಾದಿರಾಜ ತಂತ್ರಿಗಳ ನೇತೃತ್ವದಲ್ಲಿ ಕಾರ್ತಿಕ ದೀಪೋತ್ಸವ ಮನೆಗೊಂದು ದೀಪ ರಂಗಪೂಜೆ ನ.17 ರಂದು ಸಂಜೆ 6.30 ರಿಂದ ನಡೆಯಲಿರುವುದು. ಈ ಪುಣ್ಯ ದೀಪೋತ್ಸವ ಕಾರ್ಯದಲ್ಲಿ ಸಾರ್ವಜನಿಕರು ಭಾಗವಹಿಸಿ ದೇವರ ಗಂಧ ಪ್ರಸಾದ ಸ್ವೀಕರಿಸಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅರ್ಚಕ ರಂಗನಾಥ್ ಭಟ್ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವರಾಮ ಜಿ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೀಪಾವಳಿ ಸಂಭ್ರಮವನ್ನು ಆನಂದಿಸಿ ಬಳ್ಳಾಲ್ ಮೊಬೈಲ್ಸ್ ನ “ದಿ ಗ್ರೇಟ್ ಫೆಸ್ಟಿವಲ್ಸ್ ಸೆಲ್ಸ್”ನಲ್ಲಿ: ಪ್ರತಿ ಖರೀದಿಗೂ ಕಾದಿದೆ ಭರ್ಜರಿ ಕೊಡುಗೆಗಳು..

ಉಡುಪಿ: ಉಡುಪಿ‌ ನಗರದ ಕಲ್ಪನಾ ಚಿತ್ರಮಂದಿರ ಬಳಿಯ ಒರಾಯನ್ ಕಟ್ಟಡದಲ್ಲಿ ಹೆಸರಾಂತ ಮೊಬೈಲ್ ಶೋರೂಮ್ ಆದ “ಬಳ್ಳಾಲ್ ಮೊಬೈಲ್ಸ್” ನಲ್ಲಿ ಇದೀಗ ಗ್ರಾಹಕರಿಗೆ ಅ.15 ರಿಂದ ಜ.26ರ ವರೆಗೆ “ದಿ ಗ್ರೇಟ್ ಫೆಸ್ಟಿವಲ್ ಸೇಲ್ಸ್” ನಡೆಯುತ್ತಿದ್ದು, ಗ್ರಾಹಕರಿಂದ ಒಳ್ಳೆಯ ಬೆಂಬಲ ದೊರಕಿದೆ. ಕಳೆದ 38 ವರ್ಷದಿಂದ ಗ್ರಾಹಕರ ವಿಶ್ವಾಸವನ್ನು ಗೆದ್ದು, ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯನ್ನು ಸಲ್ಲಿಸುತ್ತಿರುವ, ಗ್ರಾಹಕರ ನಂಬಿಕೆಗೆ ಹೆಸರುವಾಸಿಯಾಗದ ಬಳ್ಳಾಲ್ ಮೊಬೈಲ್ಸ್ ನಲ್ಲಿ ಗ್ರಾಹಕರ ಪ್ರತಿ ಮೊಬೈಲ್ ಫೋನ್ ಖರೀದಿಗೆ ಸ್ಕ್ರಾಚ್ & ವಿನ್ ಭರ್ಜರಿ […]

ಪುತ್ತಿಗೆ ಮಠದ ಪರ್ಯಾಯ‌ ಮಹೋತ್ಸವದ ನಿಮಿತ್ತ ಹೊರೆಕಾಣಿಕೆ ಸಮಿತಿ ಸಭೆ

ಉಡುಪಿ: ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಪುತ್ತಿಗೆ ಮಠದ ಪರ್ಯಾಯ‌ ಮಹೋತ್ಸವದ ಹೊರೆಕಾಣಿಕೆ ಸಮಿತಿ ಸಭೆ ಪುತ್ತಿಗೆ ಮಠದ ಸಭಾಂಗಣದಲ್ಲಿ ಭಾನುವಾರದಂದು ನಡೆಯಿತು. ಹೊರೆಕಾಣಿಕೆ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ, ಸುಮಾರು 50 ಕಡೆ ಹೊರೆಕಾಣಿಕೆ ಸಮಿತಿಯನ್ನು ಮಾಡಲಿದ್ದೇವೆ. ಅಲ್ಲಲ್ಲಿ ಸಭೆಗಳನ್ನು ನಡೆಸಿ ಹೊರೆಕಾಣಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಮಾರ್ಗದರ್ಶನ ನೀಡಲಾಗುತ್ತಿದೆ. ವಿಶ್ವಮಟ್ಟದ ಪರ್ಯಾಯ ಇದಾಗಿದ್ದು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೇವೆ ಎಂದರು. ಸಮಿತಿಯ ಪ್ರಧಾನ‌ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಉಭಯ ಜಿಲ್ಲೆಯ ಸಹಕಾರಿಗಳು […]

ಪುಟಾಣಿಗಳ ಯಕ್ಷಗಾನದ ಮೇಲೂ ರಾಜಕೀಯದ ಕರಿ ನೆರಳು: ಪ್ರದರ್ಶನ ಅರ್ಧದಲ್ಲೇ ಮೊಟಕು; ಸಾರ್ವಜನಿಕರಿಂದ ಆಕ್ರೋಶ

ಹೇರಿಕುದ್ರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಯಕ್ಷ ಹಬ್ಬ ಹೇರಿಕುದ್ರು-2023 ಶ್ರೀ ಕೃಷ್ಣ ಲೀಲಾಮೃತ ಯಕ್ಷಗಾನವನ್ನು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯು ಅಯೋಜಿಸಿದ್ದು, ಪುಟಾಣಿಗಳು ಯಕ್ಷಗಾನ ಪ್ರದರ್ಶನದಲ್ಲಿ ನಿರತರಾಗಿದ್ದಾಗ ಪ್ರದರ್ಶನವನ್ನು ಮಧ್ಯದಲ್ಲಿಯೇ ನಿಲ್ಲಿಸಿದ ಪ್ರಸಂಗ ನಡೆದಿದ್ದು ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣದ ವಿಡಿಯೋ ವೈರಲ್ ಆಗಿದೆ. ಆನಗಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಪೂಜಾರಿ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪೊಲೀಸರು ಮಕ್ಕಳ ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಬಗ್ಗೆ […]