ಸೆನ್ಸೆಕ್ಸ್ 595 & ನಿಫ್ಟಿ 181 ಪಾಯಿಂಟ್ ಏರಿಕೆ : ಷೇರು ಮಾರುಕಟ್ಟೆ
ಮುಂಬೈ: ಸೋಮವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ದಿನ ಮುಗಿಸಿವೆ. ಇಂದು ಬಿಎಸ್‌ಇ ಸೆನ್ಸೆಕ್ಸ್ 595 ಪಾಯಿಂಟ್ಸ್ ಅಥವಾ ಶೇಕಡಾ 0.92 ರಷ್ಟು ಏರಿಕೆ ಕಂಡು 64,959 ಕ್ಕೆ ತಲುಪಿದೆ.ಇಂದು ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿವೆ. ನಿಫ್ಟಿ-50 181 ಪಾಯಿಂಟ್ ಅಥವಾ ಶೇಕಡಾ 0.94 ರಷ್ಟು ಏರಿಕೆ ಕಂಡು 19,412 ರಲ್ಲಿ ಕೊನೆಗೊಂಡಿದೆ. ಬಿಎಸ್‌ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡಾ 1 ರಷ್ಟು ಏರಿಕೆಯಾಗುವುದರೊಂದಿಗೆ ವಿಶಾಲ ಮಾರುಕಟ್ಟೆಗಳು ಸಹ ಮಾನದಂಡಗಳಿಗೆ […]
ಎಚ್ಪಿಸಿಎಲ್ನೊಂದಿಗೆ ಒಪ್ಪಂದ : ದೇಶಾದ್ಯಂತ ಬ್ಯಾಟರಿ ಸ್ವ್ಯಾಪಿಂಗ್ ಕೇಂದ್ರ ಆರಂಭಿಸಲಿದೆ ಗೊಗೊರೊ
ಮುಂಬೈ: ನಾಸ್ಡಾಕ್ ಷೇರು ಮಾರುಕಟ್ಟೆಯಲ್ಲಿ ಲಿಸ್ಟೆಡ್ ಬ್ಯಾಟರಿ ವಿನಿಮಯ ಕಂಪನಿ ಗೊಗೊರೊ ಮುಂಬರುವ ವರ್ಷಗಳಲ್ಲಿ ದೇಶಾದ್ಯಂತ ಬ್ಯಾಟರಿ ವಿನಿಮಯ (battery swapping) ಕೇಂದ್ರಗಳನ್ನು ಸ್ಥಾಪಿಸಲು ಎಚ್ಪಿಸಿಎಲ್ ನೊಂದಿಗೆ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಸೋಮವಾರ ತಿಳಿಸಿದೆ.ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಸಂಸ್ಥೆಯಾದ ಎಚ್ಪಿಸಿಎಲ್ (ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) 21,000 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿದೆ.ಒಪ್ಪಂದದ ಭಾಗವಾಗಿ, ದೇಶಾದ್ಯಂತ ಎಚ್ಪಿಸಿಎಲ್ನ ಚಿಲ್ಲರೆ ಮಳಿಗೆಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸುವುದರೊಂದಿಗೆ ಗೊಗೊರೊ ಎಲೆಕ್ಟ್ರಿಕ್ ದ್ವಿಚಕ್ರ […]
ಈಗಲೇ ಮಾಲಿನ್ಯದಿಂದ ತತ್ತರಿಸಿರುವ ಜನತೆಯಲ್ಲಿ ಆತಂಕ :ದೆಹಲಿಯಲ್ಲಿ ಮತ್ತೆ ಪ್ರಬಲ ಭೂಕಂಪನದ ಅನುಭವ
ನವದೆಹಲಿ: ಪಶ್ಚಿಮ ನೇಪಾಳದಲ್ಲಿ ಸೋಮವಾರ ಮತ್ತೆ 5.6 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಪ್ರಬಲ ಕಂಪನದ ಅನುಭವವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.ಇಂದು ಸಂಜೆ 4:16ಕ್ಕೆ ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಾದ ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್, ಫರಿದಾಬಾದ್ ಸೇರಿದಂತೆ ಹಲವೆಡೆ ಭೂಕಂಪನದ ಅನುಭವವಾಗಿದೆ. ದೆಹಲಿಯಲ್ಲಿ ಮತ್ತೆ ಭೂಕಂಪನದ ಅನುಭವವಾಗಿದೆ. ನೇಪಾಳದಲ್ಲಿರುವ ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.6ರಷ್ಟಿತ್ತು ಎಂದು ತಿಳಿದು ಬಂದಿದೆ. ನೆರೆಯ […]
ಮಲಾಡ್ ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಮಲಾಡ್: ಮಲಾಡ್ ಕನ್ನಡ ಸಂಘ 4 ಬಿ 21 ಯುನಿಟಿ ಅಪಾರ್ಟ್ಮೆಂಟ್ ಮಾರ್ವೆ ರೋಡ್, ಮಲಾಡ್ ಪಶ್ಚಿಮ ಇದರ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ. 5ರಂದು ಸಂಘದ ಕಚೇರಿಯ ರಮನಾಥ ಪಯ್ಯಡೆ ಸ್ಮಾರಕ ಕಿರು ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು. ಸದಸ್ಯೆ ಸುಜಾತ ಅಮೀನ್ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನ್ಯಾಯವಾದಿ ಜಗದೀಶ್ ಎಸ್ ಹೆಗ್ಡೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.ಇಂಡಿಯನ್ ಆಯಿಲ್ ಕಂಪನಿ ನಿವೃತ್ತ ಅಧಿಕಾರಿ ದಾಮೋದರ ಶೆಟ್ಟಿಗಾರ್ ಉಪಸ್ಥಿತರಿದ್ದರು. ಕರ್ನಾಟಕ […]
ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವೀಡಿಯೋ ಹರಿದಾಟ: ಅಪಾಯಕಾರಿ ತಂತ್ರಜ್ಞಾನ ಎಂದ ಕೇಂದ್ರ ಸಚಿವ
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರ ಮುಖದ ಡೀಪ್ ಫೇಕ್ ವೀಡಿಯೊ ವೈರಲ್ ಆದ ನಂತರ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದು, ಡೀಪ್ ಫೇಕ್ ವೀಡಿಯೊಗಳು ಇತ್ತೀಚಿನ ಸಮಯದಲ್ಲಿ ಹೆಚ್ಚು “ಅಪಾಯಕಾರಿ ಮತ್ತು ಹಾನಿಕಾರಕ ತಪ್ಪು ಮಾಹಿತಿ” ನೀಡುವ ತಂತ್ರಜ್ಞಾನ ಎಂದು ಕರೆದಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ತಿಳಿಸಲಾದ ಐಟಿ ನಿಯಮಗಳ ಅಡಿಯಲ್ಲಿ ಪಾಲಿಸಬೇಕಾದ ತಮ್ಮ ಕಾನೂನು ಬಾಧ್ಯತೆಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸಚಿವರು ನೆನಪಿಸಿದ್ದಾರೆ. ಯಾವುದೇ ಬಳಕೆದಾರರಿಂದ […]