ರೋಟರಿ ಕ್ಲಬ್ – ಮಾಹೆ ಮಣಿಪಾಲ್ ಮ್ಯಾರಥಾನ್ ದತ್ತಿನಿಧಿ ಹಸ್ತಾಂತರ: ಬಡ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಆರ್ಥಿಕ ನೆರವು
ಮಣಿಪಾಲ: ಸಕಾಲದಲ್ಲಿ ಮತ್ತು ಸಮರ್ಪಕವಾಗಿ ಚಿಕಿತ್ಸೆ ನೀಡಿದರೆ ಮಕ್ಕಳ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಫೆಬ್ರವರಿ 12 ರಂದು ಆಯೋಜನೆಗೊಂಡ ಮಣಿಪಾಲ್ ಮ್ಯಾರಥಾನ್-2023, ‘ಸಾಕಷ್ಟು ಮೊದಲೇ ರೋಗ ಪತ್ತೆ; ಪ್ರಾಣ ಉಳಿಸಬಹುದು ಮತ್ತೆ! ನಾನು ಬದುಕುಳಿಯುವೆ’ ಎಂಬ ಬಾಲ್ಯದ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಜಾಗೃತಿ ಆಶಯವನ್ನು ಹೊಂದಿತ್ತು. ಈ ಮ್ಯಾರಥಾನ್ ನಲ್ಲಿ ಜಗತ್ತಿನ ಹಲವಾರು ದೇಶಗಳ ಸುಮಾರು 11,000 ಮಂದಿ ಭಾಗವಹಿಸಿದ್ದರು. ರೋಟರಿ ಕ್ಲಬ್ ಮಣಿಪಾಲ ಟೌನ್, ಮಣಿಪಾಲ್ ಮ್ಯಾರಥಾನ್ 2023 ಆಯೋಜನೆಯ ಬಳಗದೊಂದಿಗೆ ಕೈಜೋಡಿಸಿತ್ತು […]
ಪಾಕಿಸ್ತಾನದ ವಾಯುಪಡೆ ತರಬೇತಿ ನೆಲೆಯ ಮೇಲೆ ಭಯೋತ್ಪಾದಕ ದಾಳಿ; ವಿಮಾನಗಳಿಗೆ ಹಾನಿ
ಇಸ್ಲಾಮಾಬಾದ್: ಶನಿವಾರ ಬೆಳಗ್ಗೆ ಪಂಜಾಬ್‌ನ ಮಿಯಾನ್‌ವಾಲಿಯ ಮಧ್ಯ ಪಾಕಿಸ್ತಾನದ ಪ್ರದೇಶದಲ್ಲಿರುವ ವಾಯುಪಡೆಯ ತರಬೇತಿ ನೆಲೆಯ ಮೇಲೆ ಆರು ಉಗ್ರರು ದಾಳಿ ನಡೆಸಿದ್ದಾರೆ. ರಾಯಿಟರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಮೂವರು ಉಗ್ರಗಾಮಿಗಳು ನೆಲೆಯನ್ನು ಪ್ರವೇಶಿಸುವ ಮೊದಲೆ ಕೊಲ್ಲಲ್ಪಟ್ಟರು ಮತ್ತು ಇತರ ಮೂವರನ್ನು ಬಂಧಿಸಲಾಯಿತು. ಭಯೋತ್ಪಾದಕ ದಾಳಿಯಲ್ಲಿ ಮೂರು ವಿಮಾನಗಳು ಮತ್ತು ಇಂಧನ ತುಂಬುವ ಟ್ಯಾಂಕರ್ ಹಾನಿಗೊಳಗಾಗಿವೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ತೆಹ್ರೀಕ್-ಎ ಜಿಹಾದ್ (ಟಿಟಿಪಿ) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿದೆ. ಪ್ರದೇಶವನ್ನು ತೆರವುಗೊಳಿಸಲು […]
ಡೇ-ನಲ್ಮ್ ಅಭಿಯಾನದಡಿ ಸ್ವಯಂ ಉದ್ಯೋಗ- ವ್ಯಾಪಾರಕ್ಕಾಗಿ ಸಾಲ ಸೌಲಭ್ಯ
ಉಡುಪಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಪ್ರಸಕ್ತಸಾಲಿನಲ್ಲಿ ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ (ಡೇ-ನಲ್ಮ್) ಸ್ವಯಂ ಉದ್ಯೋಗಕೈಗೊಳ್ಳುವ ಸಲುವಾಗಿ ಸಾಲ ಸೌಲಭ್ಯ ಪಡೆಯಲು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ವಯಂ ಉದ್ಯೋಗ/ವ್ಯಾಪಾರ (ವೈಯಕ್ತಿಕ ಹಾಗೂ ಗುಂಪು ಚಟುವಟಿಕೆ) ಕೈಗೊಳ್ಳಲು ಬಡ್ಡಿ ಸಹಾಯಧನ ಯೋಜನೆ; ಈಗಾಗಲೇ ರಚಿಸಲಾಗಿರುವ – ಕಾರ್ಯ ನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪಗಳಿಗೆ ಸುತ್ತುನಿಧಿ, ಬ್ಯಾಂಕ್ ಸಾಲ (ಕ್ರೆಡಿಟ್ ಲಿಂಕೇಜ್) ಮತ್ತು ಹೊಸದಾಗಿ […]
ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ
ಉಡುಪಿ: ನಾಡಿನ ರಾಜ್ಯ ಭಾಷೆ ಕನ್ನಡದ ಉಳಿವಿಗಾಗಿ ಮತ್ತು ನಮ್ಮ ಸಂಸ್ಕೃತಿ ತಿಳಿದುಕೊಳ್ಳುವ ಸಲುವಾಗಿಉಡುಪಿ ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗಡಿ, ಮುಂಗಟ್ಟು, ಹೋಟೆಲ್, ಕಂಪನಿಗಳು ಕನ್ನಡದ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಇತರೆ ಭಾಷೆಯ ನಾಮಫಲಕಕ್ಕಿಂತ ಕನ್ನಡದ ನಾಮಫಲಕವನ್ನು ದೊಡ್ಡದಾಗಿ ಅಳವಡಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
ಉಡುಪಿ: ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ, ಕ್ರೈಸ್ಟ್ ಶಾಲೆಗಳು ಹಾಗೂ ಆಶ್ರಮ ಶಾಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ ರೇಜು ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅವರು ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳ ಕೊಠಡಿ, ಅಡುಗೆ ಮನೆ, ಆಹಾರ ವಸ್ತುಗಳ ದಾಸ್ತಾನು ಕೇಂದ್ರ, ಸ್ನಾನಗೃಹ, ಶೌಚಾಲಯ, ವಿದ್ಯಾರ್ಥಿಗಳು ತಂಗುವ ಕೊಠಡಿ ಸೇರಿದಂತೆ ಅಲ್ಲಿನ ಸುತ್ತಮುತ್ತ ಪರಿಸರವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ […]