ಕವಿತ ಎಸ್ ವಿರಚಿತ ಕವನ ಸಂಕಲನ ಭಾವ ಲಹರಿ ಬಿಡುಗಡೆ

ಮಂಗಳೂರು: ಅ.29 ರಂದು ಪುರಭವನದಲ್ಲಿ ನಡೆದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನ ಸಂಸ್ಥೆಯ 16ನೇ ವಾರ್ಷಿಕೋತ್ಸವದಂದು 50 ಕೃತಿಗಳ ಲೋಕಾರ್ಪಣೆಯ ಸಂದರ್ಭದಲ್ಲಿ ಕವಯಿತ್ರಿ ಕವಿತ ಎಸ್ ಇವರ ಚೊಚ್ಚಲ ಕವನ ಸಂಕಲನ “ಭಾವ ಲಹರಿ ” ಲೋಕಾರ್ಪಣೆಗೊಂಡಿತು. ಕವಿತ ಅವರ ತಾಯಿ ಅರ್ಚನಾ, ಗಣ್ಯರು ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.

ಡಾ.ಟಿ.ಎಂ.ಎ.ಪೈ ಆಸ್ಪತ್ರೆಯಲ್ಲಿ ಎರಡನೇ ಬುಧವಾರದಂದು ಖ್ಯಾತ ನರರೋಗ ತಜ್ಞ ಡಾ. ರೋಹಿತ್ ಪೈ ಸಮಾಲೋಚನೆಗೆ ಲಭ್ಯ

ಉಡುಪಿ: ಡಾ. ಟಿಎಂಎ ಪೈ ಆಸ್ಪತ್ರೆಯು ತನ್ನ ಗೌರವಾನ್ವಿತ ಆರೋಗ್ಯ ತಜ್ಞರ ತಂಡಕ್ಕೆ ಹೊಸ ತಜ್ಞರ ಸೇರ್ಪಡೆಯನ್ನು ಪ್ರಕಟಿಸಿದೆ. ನವೆಂಬರ್ 8 ರಿಂದ ಮಂಗಳೂರು ಕೆಎಂಸಿ ಆಸ್ಪತ್ರೆಯ ಖ್ಯಾತ ನರರೋಗ ತಜ್ಞ ಡಾ. ರೋಹಿತ್ ಪೈ ಅವರು ಉಡುಪಿಯ ಡಾ. ಟಿ.ಎಂ.ಎ.ಪೈ ಆಸ್ಪತ್ರೆಯಲ್ಲಿ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಅವರು ತಿಳಿಸಿದ್ದಾರೆ. ಈ ವ್ಯವಸ್ಥೆಯು ಉಡುಪಿಯ ಸಮುದಾಯಕ್ಕೆ ಡಾ. ರೋಹಿತ್ ಅವರ ತಜ್ಞ ನರವಿಜ್ಞಾನದ ಆರೈಕೆ ಸೇವೆ ಪಡೆಯಲು ಅನುವು […]