ಕನ್ನಡ ರಾಜ್ಯೋತ್ಸವ ಆಚರಿಸಿ ಕನ್ನಡ ಪ್ರೇಮ ಮೆರೆದ ನಟಿ ಪೂಜಾ ಗಾಂಧಿ

ಬೆಂಗಳೂರು: ಅನ್ಯ ರಾಜ್ಯದಿಂದ ನಟಿಯಾಗಿ ಕರ್ನಾಟಕಕ್ಕೆ ಆಗಮಿಸಿ ಪರಭಾಷಿಯಾಗಿದ್ದೂ ಸ್ಪಷ್ಟವಾಗಿ ಕನ್ನಡ ಮಾತನಾಡಲು, ಬರೆಯಲು ಕಲಿತು ಇತರರಿಗೂ ಕನ್ನಡ ಕಲಿಸುವ ಯೋಜನೆಯನ್ನು ಯಶಸ್ವಿಗೊಳಿಸಲು ಶ್ರಮವಹಿಸುತ್ತಿರುವ ನಟಿ ಪೂಜಾ ಗಾಂಧಿ ಇಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ಕನ್ನಡ ಪ್ರೇಮ ಮೆರೆದರು. ಪೂಜಾ ಗಾಂಧಿ ಕನ್ನಡಭಿಮಾನಿಯಾಗಿರುವ ಜೊತೆಗೆ ಕಾವೇರಿ ಹೋರಾಟದಲ್ಲಿಯೂ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಇವರ ಕನ್ನಡ ಪ್ರೀತಿಗೆ ಕನ್ನಡಿಗರು ಋಣಿಯಾಗಿದ್ದಾರೆ.

ಕೋಟ: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಘಟಕ ಸ್ಥಾಪನೆಗಾಗಿ ಸಹಾಯಧನ ಲಭ್ಯ

ಕೋಟ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ, ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟ ಪಡುಕೆರೆ ಕಾಲೇಜಿನಲ್ಲಿ ಆಯೋಜಿಸಲಾದ ಮತ್ಸ್ಯ ಮೇಳ-2023 ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಘಟಕದ 500 ಹೊಸ ಘಟಕವನ್ನು ಸ್ಥಾಪಿಸಲು ಹಾಗೂ ಚಾಲ್ತಿಯಲ್ಲಿರುವ ಘಟಕಕ್ಕೂ ಸಹಾಯಧನ ಪಡೆಯುವ ಬಗ್ಗೆ ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್. ಪ್ರಸ್ತಾಪಿಸಿರುತ್ತಾರೆ. ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಘಟಕದಲ್ಲಿ “ಒಂದು ಜಿಲ್ಲೆ ಒಂದು ಉತ್ಪನ್ನ” ಎಂಬ ಆಶಯದಡಿ ಮೀನಿನ ಮೌಲ್ಯವರ್ಧಿತ […]

ಕನ್ನಡ ರಾಜ್ಯೋತ್ಸವದಂದು ರಾಜ್ಯದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ

ನವದೆಹಲಿ: ರಾಜ್ಯವು ಇಂದು 67 ನೇ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣ X ನಲ್ಲಿ “ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ” ಎಂದು […]

ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ

ಉಡುಪಿ: ರಕ್ತದಾನದಿಂದ ಪ್ರಾಣಾಪಾಯದಲ್ಲಿರುವ ಇನ್ನೊಬ್ಬರ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ಡಾ.ಟಿ.ಎಂ.ಎ ಪೈ ಪಾಲಿಟೆಕ್ನಿಕ್‌ನ ನಿರ್ದೇಶಕ ಟಿ. ರಂಗ ಪೈ ಹೇಳಿದರು. ಮಂಗಳವಾರ ನಗರದ ಮಣಿಪಾಲ ಎಂ.ಐ.ಟಿ ಕ್ಯಾಂಪಸ್‌ನ ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಸಭಾಂಗಣದಲ್ಲಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ರಕ್ತನಿಧಿ ಕೇಂದ್ರ ಕೆ.ಎಂ.ಸಿ ಮಣಿಪಾಲ […]

ನ.12-13 ಲಕ್ಷ್ಮೀಪೂಜೆ, ಬಲೀಂದ್ರ ಪೂಜೆ

ನ.1 ರಂದು ಸಂಕಷ್ಟ ಹರ ಚತುರ್ಥಿ, ನವೆಂಬರ 9 ರಂದು ಏಕಾದಶಿ, ನೀರು ತುಂಬುವ ಹಬ್ಬ ನರಕಚತುರ್ದಶಿ ನ.11, ದೀಪಾವಳಿ ಧನಲಕ್ಷ್ಮಿ ಪೂಜೆ ನ. 12, ಬಲೀಂದ್ರ ಪೂಜೆ ಹಾಗೂ ಗೋ ಪೂಜೆ ನ.13, ದ್ವಾದಶಿ ತುಳಸೀ ಪೂಜೆ ನ. 24. ನವೆಂಬರ್ 13 ಸೋಮವಾರ ಅಮಾವಾಸ್ಯೆ ಮಧ್ಯಾಹ್ನ 2.30ವರೆಗೆ ಇರುತ್ತದೆ. ಮಾಹಿತಿ: ಮೊಗೇರಿ ಪಂಚಾಗ