ಮೊಬೈಲ್ ಕಂಟೆಂಟ್ ಗಳನ್ನು 100-ಇಂಚಿನ ಸ್ಕ್ರೀನ್ ನಲ್ಲಿ ನೋಡಿ ಆನಂದಿಸಲು ಮಾರುಕಟ್ಟೆಗೆ ಬರಲಿದೆ JioGlass

ನವದೆಹಲಿ: JioGlass ಇದು ಭಾರತೀಯ ಕಂಪನಿಯಿಂದ ತಯಾರಾದ ಅತ್ಯಾಕರ್ಷಕ ಉತ್ಪನ್ನಗಳಲ್ಲಿ ಒಂದಾಗಿದೆ. ಇದು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಸಂಪರ್ಕಿಸುವ ಒಂದು ಜೋಡಿ ಸ್ಮಾರ್ಟ್ ಗ್ಲಾಸ್ ಆಗಿದೆ. ಮೊಬೈಲ್ ನಲ್ಲಿರುವ ಕಂಟೆಂಟ್ ಗಳನ್ನು 100-ಇಂಚಿನ ವರ್ಚುವಲ್ ಸ್ಕ್ರೀನ್ ಆಗಿ ಪರಿವರ್ತಿಸುತ್ತದೆ. JioGlass 2019 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸ್ವಾಧೀನಪಡಿಸಿಕೊಂಡ ಡೀಪ್-ಟೆಕ್ ಸ್ಟಾರ್ಟಪ್ ‘ಟೆಸ್ಸೆರಾಕ್ಟ್‌’ನ ಉತ್ಪನ್ನವಾಗಿದೆ. ಕ್ಯಾಮೆರಾಗಳು, ಹೆಡ್‌ಸೆಟ್‌ಗಳು ಮತ್ತು ಸ್ಮಾರ್ಟ್ ಗ್ಲಾಸ್‌ಗಳಂತಹ ವಿವಿಧ ಉತ್ಪನ್ನಗಳಿಗೆ ಆಗ್ಮೆಂಟೆಡ್ ರಿಯಾಲಿಟಿ (ಎಆರ್) ಮತ್ತು ವರ್ಚುವಲ್ ರಿಯಾಲಿಟಿ (ವಿಆರ್) ತಂತ್ರಜ್ಞಾನವನ್ನು […]

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ತೀವ್ರ ಕೋವಿಡ್ ನಿಂದ ಬಳಲಿದವರು ಶ್ರಮದಾಯಕ ವ್ಯಾಯಾಮದಿಂದ ದೂರವಿರಲು ಸೂಚನೆ

ನವದೆಹಲಿ: ಇತ್ತೀಚಿನ ತಿಂಗಳುಗಳಲ್ಲಿ ಯುವಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು ತೀವ್ರವಾದ ಕೋವಿಡ್ -19 ಸೋಂಕಿನಿಂದ ಬಳಲಿದ್ದವರು ವ್ಯಾಯಾಮ ಮಾಡುವಾಗ ಹೆಚ್ಚು ಶ್ರಮಪಡಬಾರದು ಮತ್ತು ಸ್ವಲ್ಪ ಸಮಯದವರೆಗೆ ಕಠಿಣ ಪರಿಶ್ರಮದಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ. ಗುಜರಾತ್‌ನ ಭಾವನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಂಡವಿಯಾ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ವಿಷಯದ ಬಗ್ಗೆ […]

ಮುಂಬೈ ರಸ್ತೆಗಳಿಂದ ಮಾಯವಾಗಲಿದ್ದಾಳೆ ‘ಪ್ರೀಮಿಯರ್ ಪದ್ಮಿನಿ’ : ಇತಿಹಾಸದ ಪುಟ ಸೇರಲಿವೆ ಕಪ್ಪು-ಹಳದಿ ಕಾರುಗಳು

ಮುಂಬೈ: ಆರು ದಶಕಗಳಿಂದ ಮುಂಬೈಯ ಜೀವನಾಡಿಯಾಗಿದ್ದ, ಪ್ರಯಾಣಿಕರನ್ನು ಸುರಕ್ಷಿತವಾಗಿ ತಮ್ಮ ಗಮ್ಯ ಸ್ಥಾನಕ್ಕೆ ತಲುಪಿಸುತ್ತಿದ್ದ ಕಪ್ಪು ಹಳದಿ ಬಣ್ಣದ ‘ಪ್ರೀಮಿಯರ್ ಪದ್ಮಿನಿ’ ಕಾರುಗಳು ಇನ್ನು ಮುಂದೆ ಇತಿಹಾಸದ ಪುಟ ಸೇರಲಿವೆ. ಇತ್ತೀಚೆಗೆ ಮುಂಬೈ ಸಾರಿಗೆ ಇಲಾಖೆಯು ಮಹಾನಗರದಲ್ಲಿ ಓಡುತ್ತಿರುವ ಟ್ಯಾಕ್ಸಿಗಳನ್ನು ತೆಗೆದುಹಾಕಲು ಆದೇಶವನ್ನು ಹೊರಡಿಸಿದೆ. 20 ವರ್ಷ ಅಥವಾ ಅದಕ್ಕಿಂತ ಹಿಂದಿನ ನೋಂದಣಿ ಇರುವ ಟ್ಯಾಕ್ಸಿಗಳನ್ನು ತೆಗೆದುಹಾಕಲು ಈ ಆದೇಶವನ್ನು ನೀಡಲಾಗಿದೆ. 2008 ರಲ್ಲಿ, ಮಹಾರಾಷ್ಟ್ರ ಸರ್ಕಾರವು ಕ್ಯಾಬ್ ಗಳ ವಯಸ್ಸಿನ ಮಿತಿಯನ್ನು 25 ವರ್ಷಗಳಿಗೆ ನಿಗದಿಪಡಿಸಿತು, […]

ಪಾಪ್ ಅಪ್ ಮಾರ್ಕೆಟ್ ಮಂಗಳೂರು ವತಿಯಿಂದ ದೀಪಾವಳಿ ಶಾಪಿಂಗ್ ಆಯೋಜನೆ

ಮಂಗಳೂರು: ಪಾಪ್ ಅಪ್ ಮಾರ್ಕೆಟ್ ಮಂಗಳೂರು ವತಿಯಿಂದ ಅಕ್ಟೋಬರ್ 28-29 ರಂದು ಬೆಂದೂರಿನ ಸೇಂಟ್ ಸೆಬಾಸ್ಟಿಯನ್ ಹಾಲ್‌ನಲ್ಲಿ ಜನಪ್ರಿಯ ದೀಪಾವಳಿ ಶಾಪಿಂಗ್ ಮಾರುಕಟ್ಟೆಯನ್ನು ಆಯೋಜಿಸಲಾಗಿತ್ತು. ಇದು ವಾರ್ಷಿಕ ಫ್ಲಿಯಾ ಮಾರುಕಟ್ಟೆಯ 6ನೇ ಆವೃತ್ತಿಯಾಗಿತ್ತು. ಲಕ್ಷ್ಮೀ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಮಾರುಕಟ್ಟೆ ಸ್ಥಳವು 50+ ಸ್ಟಾಲ್ ಗಳೊಂದಿಗೆ ಬಟ್ಟೆ, ಫ್ಯಾಷನ್ ಪರಿಕರಗಳು, ಚಿತ್ರಕಲೆ, ಮಕ್ಕಳ ಉಡುಪುಗಳು, ಮನೆಯ ಅಲಂಕಾರಿಕ ವಸ್ತುಗಳು, ಬೇಕರಿ, ಆಹಾರ ಮಳಿಗೆಗಳು ಹಾಗೂ ಮಕ್ಕಳಿಗಾಗಿ ಆಕ್ಟಿವಿಟಿ ಜೋನ್ ಗಳು, ರೊಬೋಟಿಕ್ ಮತ್ತು ಸೈನ್ಸ್ ಏರಿಯಾಗಳನ್ನು ಒಳಗೊಂಡಿದ್ದು, […]

ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಪ್ರಥಮ ವರ್ಷದ ವಾರ್ಷಿಕ ಸಾಮಾನ್ಯ ಸಭೆ ಸಂಪನ್ನ

ಉಡುಪಿ: ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಪ್ರಥಮ ವರ್ಷದ ವಾರ್ಷಿಕ ಸಾಮಾನ್ಯ ಸಭೆಯು ಅ.29 ಭಾನುವಾರದಂದು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ವ ಸ್ವಾಮ್ಯದ ವಾಹನ ವಿತರಕರ ಸಂಘದ ಅಧ್ಯಕ್ಷ, ಉಡುಪಿ ಕಾರ್ಸ್ ನ ಮೊಹಮ್ಮದ್ ಅಶ್ರಫ್ ಇವರು ವಹಿಸಿದ್ದರು. ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ಕಾರ್ಯದರ್ಶಿ ವರದಿ ವಾಚಿಸಿದರು. ಕೋಶಾಧಿಕಾರಿ ಮಂಡಳಿ ಸಭೆಯ ವರದಿ ನೀಡಿದರು. ಸಂಘದ ಗೌರವಾಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ […]