ವರ್ಷದ ಕೊನೆಯ ಚಂದ್ರಗ್ರಹಣ ಗೋಚರ ಮೋಕ್ಷದ ನಂತರ ದೇವಾಲಯಗಳ ಶುದ್ಧೀಕರಣ, ವಿಶೇಷ ಪೂಜೆ

ನವದೆಹಲಿ: 2023ರ ಕೊನೆಯ ಚಂದ್ರಗ್ರಹಣ ಶನಿವಾರ ರಾತ್ರಿ ಸಂಭವಿಸಿತು.ಖಂಡಗ್ರಾಸ ಗ್ರಹಣವು ಒಟ್ಟು 3 ಗಂಟೆ 7 ನಿಮಿಷಗಳ ಕಾಲ ನಡೆಯಿತು. ಅಕ್ಟೋಬರ್ 29ರ ಮಧ್ಯರಾತ್ರಿ 1 ಗಂಟೆ 05 ನಿಮಿಷಕ್ಕೆ ಆರಂಭವಾದ ಗ್ರಹಣವು 2 ಗಂಟೆ 24 ನಿಮಿಷಕ್ಕೆ ಕೊನೆಗೊಂಡಿದೆ. 2023ರ ಕೊನೆಯ ಚಂದ್ರಗ್ರಹಣ ಕೊನೆಗೊಂಡಿದೆ. ಗ್ರಹಣ ಮೋಕ್ಷದ ನಂತರ ದೇಶದ ವಿವಿಧ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯ ನಡೆಯಿತು. ಜಗತ್ತಿನ ಹಲವೆಡೆ ಜನರು ಆಗಸದಲ್ಲಿ ಸಂಭವಿಸಿದ ಕೌತುಕ ವೀಕ್ಷಿಸಿದರು. ಉಜ್ಜಯಿನಿ ಮಹಾಕಾಲ ದೇವಾಲಯದಲ್ಲಿ ಶುದ್ಧೀಕರಣ: ದೇಶದ ಪ್ರಸಿದ್ಧ […]