ಅನುಮತಿ ಮೀರಿದ ಬ್ಯಾನರ್ ಹಾಗೂ ಕಟೌಟ್ ತೆರವುಗೊಳಿಸಲು ಸೂಚನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾದ ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳು ಅವಧಿ ಮೀರಿರುವುದು ಕಂಡು ಬಂದಿದ್ದು, ಅಂತಹ ಬ್ಯಾನರ್‌ಗಳನ್ನು ಸಂಬಂಧಪಟ್ಟವರು ಕೂಡಲೇ ತೆರವುಗೊಳಿಸಬೇಕು. ಬ್ಯಾನರ್ ಮತ್ತು ಕಟೌಟ್ ಇತರೆ ಅಳವಡಿಸುವ ಪೂರ್ವದಲ್ಲಿ ಕರ್ನಾಟಕ ಮುನಿಸಿಪಲ್ ಆಕ್ಟ್ ಅನುಸಾರ ನಗರಸಭೆ ಕಛೇರಿಯಿಂದ ಅನುಮತಿ ಪಡೆದುಕೊಂಡು ಪ್ರಾರಂಭ ದಿನಾಂಕ, ಮುಕ್ತಾಯ ದಿನಾಂಕ ಹಾಗೂ ಅನುಮತಿ ಪತ್ರ ಸಂಖ್ಯೆಯನ್ನು ನಮೂದಿಸಿ ಅಳವಡಿಸಬೇಕು ಹಾಗೂ ಗೋಡೆಗಳ ಮೇಲೆ ಸಾರ್ವಜನಿಕ ಭಿತ್ತಿಪತ್ರಗಳನ್ನು ಅಂಟಿಸಬಾರದು. ಅಂತಹ ಭಿತ್ತಿಪತ್ರಗಳನ್ನು ಅಂಟಿಸುವ ಮೊದಲು ಸೂಕ್ತ ಸ್ಥಳ ಗುರುತಿಸಿ ಅನುಮತಿ […]

ಸಾಕು ನಾಯಿಗಳನ್ನು ಬೀದಿಗೆ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದಲ್ಲಿ ಕ್ರಮ: ನಗರಸಭೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಸಾರ್ವಜನಿಕರು ಸಾಕು ನಾಯಿಗಳನ್ನು ಹೊರಗೆ ಬಿಡದೇ ಮನೆಯಲ್ಲಿ ಕಟ್ಟಿ ಹಾಕಿ ಸಾಕಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳದಲ್ಲಿ ನಾಯಿಗಳನ್ನು ಬಿಡದೇ ಸಂರಕ್ಷಣೆ ಮಾಡುವುದು ಇವರ ಕರ್ತವ್ಯವಾಗಿದೆ. ಸಾಕು ನಾಯಿ ಮರಿಗಳನ್ನು ರಸ್ತೆಯಲ್ಲಿ ಬಿಡುವುದು ಕಂಡುಬಂದಿದ್ದು, ಸಾಕುನಾಯಿಗಳಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅವುಗಳಿಗೆ ಕಾಲಕಾಲಕ್ಕೆ ವ್ಯಾಕ್ಸಿನ್ ಹಾಕಿಸುವುದು ಮಾಲೀಕರ ಜವಾಬ್ದಾರಿಯಾಗಿರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿ, ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಮನೆಯ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತರು […]

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 100 ಪದಕಗಳ ಗಡಿ ದಾಟಿ ಇತಿಹಾಸ ರಚಿಸಿದ ಭಾರತ

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ಭಾರತ 100 ಪದಕಗಳ ಗಡಿಯನ್ನು ಮುಟ್ಟಿದೆ. ಭಾರತೀಯ ಕ್ರೀಡಾಪಟುಗಳ ಅಸಾಧಾರಣ ಪ್ರತಿಭೆ, ಸಮರ್ಪಣೆ ಮತ್ತು ಪರಿಶ್ರಮವು ಈ ಯಶಸ್ಸಿಗೆ ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಮೈಲಿಗಲ್ಲನ್ನು ಶ್ಲಾಘಿಸಿದ್ದಾರೆ.

ನಿರ್ಮಾಣ ಹಂತದ ಕಟ್ಟಡಗಳ ಎದುರು ಅನುಮೋದಿತ ನಕ್ಷೆ ಪ್ರದರ್ಶನ ಕಡ್ಡಾಯ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಮಾಲೀಕರು, ಕಟ್ಟಡದ ನಕ್ಷೆಗೆ ಅನುಮೋದನೆ ಪಡೆದು ಕಟ್ಟಡದ ಮುಂದೆ ಅನುಮೋದಿತ ನಕ್ಷೆಯನ್ನು ಪ್ರದರ್ಶನ ಮಾಡಬೇಕು. ಇದರಿಂದ ಕಟ್ಟಡದ ಸ್ವರೂಪ, ವಿಸ್ತೀರ್ಣ, ಕಟ್ಟಡದ ಮಾದರಿ, ಇತರೆ ವಿಷಯಗಳು ಸಾರ್ವಜನಿಕರ ಗಮನಕ್ಕೆ ಬಂದು ಸಾರ್ವಜನಿಕರಲ್ಲಿ ಉಂಟಾಗುವ ಅನುಮಾನ ನಿವಾರಣೆಯಾಗಲಿದೆ. ಆದ್ದರಿಂದ ಪ್ರತಿ ಕಟ್ಟಡದ ಮಾಲೀಕರು ಕಟ್ಟಡ ಪ್ರಾರಂಭಿಸುವ ಮೊದಲು ಮಂಜೂರಾದ ನಕ್ಷೆಯನ್ನು ಕಟ್ಟಡದ ಎದುರು ಪ್ರದರ್ಶನ ಮಾಡಿ ಕಟ್ಟಡ ರಚನೆ ಮಾಡಬೇಕು. ಯಾವುದೇ ಬದಲಾವಣೆ ಅಥವಾ ಪರಿಷ್ಕರಣೆ ಮಾಡುವುದಿದ್ದಲ್ಲಿ ಸಂಬಂಧಿಸಿದ […]

ದಸರಾ ಜಂಬೂ ಸವಾರಿ ಮೆರವಣಿಗೆ: ಹೆಗ್ಗುಂಜೆ ಜಾನಪದ ಕಲಾ ಸಂಘಕ್ಕೆ ಪ್ರಥಮ ಸ್ಥಾನ

ಉಡುಪಿ: ದಸರಾ ಮಹೋತ್ಸವ 2023 ರ ಅಂಗವಾಗಿ ಅಕ್ಟೋಬರ್ 24 ರಂದು ಮೈಸೂರಿನಲ್ಲಿ ನಡೆದ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ ಜಿಲ್ಲೆಯ ಸಿ. ಚಂದ್ರನಾಯ್ಕ್ ನೇತೃತ್ವದ ಹೆಗ್ಗುಂಜೆ ಶ್ರೀ ಮಲ್ಲಿಕಾರ್ಜುನ ಕುಡುಬಿ ಹೋಳಿ ಜಾನಪದ ಕಲಾಸಂಘವು ಗುಮಟೆ ನೃತ್ಯ ಪ್ರದರ್ಶಿಸಿ, ಪ್ರಥಮ ಸ್ಥಾನ ಪಡೆದು 15,000 ರೂ. ನಗದು ಬಹುಮಾನ ಪಡೆದಿರುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.