ಉಡುಪಿ: ಶ್ರೀಕೃಷ್ಣಾಪುರ ಮಠದ ಗುರು ಪರಂಪರೆ ಕೃತಿ ಲೋಕಾರ್ಪಣೆ

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಸ್ವಾಮೀಜಿ “ಉಡುಪಿ ಶ್ರೀಕೃಷ್ಣಾಪುರ ಮಠದ ಗುರು ಪರಂಪರೆ” (ಪರ್ಯಾಯ ಕ್ರಮ ಪರಿಚಯದೊಂದಿಗೆ) ಎಂಬ ಕೃತಿ ಕುಸುಮವನ್ನು (ಪರಿಷ್ಕೃತ ಮುದ್ರಣ) ಲೋಕಾರ್ಪಣೆಗೊಳಿಸಿ ಅನುಗ್ರಹಿಸಿದರು. ಡಾ.ಸಬಿತಾ ಆಚಾರ್ಯ ಮತ್ತು ಡಾ.ಭಾಸ್ಕರ ಆಚಾರ್ಯ ಇವರ ಎನ್.ಆರ್.ಎ.ಎಮ್.ಎಚ್ ಪ್ರಕಾಶನ ಕೋಟೇಶ್ವರ ಇವರಿಂದ ಪ್ರಕಟಿತವಾಗಿದೆ. ವಿದ್ವಾನ್ ಗೋಪಾಲಕೃಷ್ಣ ಉಪಾಧ್ಯಾಯ ನಿರೂಪಿಸಿದರು.
ಉಡುಪಿ: ಅಗ್ನಿಶಾಮಕದಳದ ಪ್ರಧಾನ ಕಚೇರಿಯಲ್ಲಿ ಆಯುಧ ಪೂಜೆ

ಉಡುಪಿ: ಅಗ್ನಿಶಾಮಕದಳದ ಪ್ರಧಾನ ಕಚೇರಿಯಲ್ಲಿ ಜಿಲ್ಲಾ ಮುಖ್ಯಸ್ಥ ವಿನಾಯಕ ಕೆ. ಮಾರ್ಗದರ್ಶನದಲ್ಲಿ ಆಯುಧ ಪೂಜೆ, ಗಣಹೋಮ , ಶಾರದಾ ಪೂಜೆ ನಡೆಯಿತು. ಠಾಣಾಧಿಕಾರಿ ಸತೀಶ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.