ಮಂಗಳೂರು: ಕುದ್ರೋಳಿ ದೇವಸ್ಥಾನಕ್ಕೆ ಭೇಟಿದ ರೆ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ

ಮಂಗಳೂರು: ಕುದ್ರೋಳಿ ದೇವಸ್ಥಾನಕ್ಕೆ ಬಿಷಪ್ ಮೋಸ್ಟ್ ರೆ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಭೇಟಿ ನೀಡಿದರು. ಅ. 23 ಸೋಮವಾರದಂದು ದಸರಾ ಹಬ್ಬದ ನಿಮಿತ್ತ ದೇವಸ್ಥಾನ ಪದ್ಮರಾಜ್ ಆರ್ ಅವರ ಆಹ್ವಾನದ ಮೇರೆಗೆ ಧಾರ್ಮಿಕ ಸಾಮರಸ್ಯದ ಸಂಕೇತವಾಗಿ ಈ ಭೇಟಿಯನ್ನು ಆಯೋಜಿಸಲಾಗಿತ್ತು. ಬಿಷಪ್ ಅವರು ತಮ್ಮ ಸಂದೇಶದಲ್ಲಿ ಕುದ್ರೋಳಿ ದೇವಸ್ಥಾನದ ಸಂಸ್ಥಾಪಕ ನಾರಾಯಣ ಗುರುಗಳ ಉಪದೇಶದಂತೆ ಕ್ಷೇತ್ರ ಸಮಾಜದಲ್ಲಿ ಸಾಮರಸ್ಯದ ಅಗತ್ಯವನ್ನು ಎತ್ತಿ ತೋರಿಸಿ ಶ್ಲಾಘಿಸಿದರು. ಮೈಸೂರು ದಸರಾದಂತೆ ಮಂಗಳೂರು ದಸರಾ ಎಂದು ಕರೆಯಲ್ಪಡುವ ಕುದ್ರೋಳಿ ಹಬ್ಬವು […]

ಮಂಜೇಶ್ವರ: ಕುಟುಂಬದೊಂದಿಗೆ ಪುನರ್ಮಿಲನ ಕಂಡ ಮಾನಸಿಕ ಅಸ್ವಸ್ಥ ಮಹಿಳೆ

ಮಂಜೇಶ್ವರ: ಒಂದು ಹೃದಯಸ್ಪರ್ಶಿ ಘಟನೆಯಲ್ಲಿ, ಮಾರಿಮುತ್ತು ಎಂಬ ವ್ಯಕ್ತಿಯು ನೋವಿನ ಬೇರ್ಪಡಿಕೆಯ ನಂತರ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿದ್ದಾರೆ. ಅಕ್ಟೋಬರ್ 14ರಂದು ಮಾರಿ ಮುತ್ತು ಎಂಬ ಸುಮಾರು 47ವರ್ಷ ಪ್ರಾಯದ ಮಹಿಳೆಯನ್ನು ಕಾಸರಗೋಡಿನ ಪಿಂಕ್ ಪೋಲಿಸರು, ಕಾಸರಗೋಡು ಸರ್ಕಾರಿ ಬಸ್ಸು ನಿಲ್ದಾಣದ ಬಳಿಯಿಂದ ರಕ್ಷಿಸಿ, ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು. ಆಕೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಅತಿಯಾದ ಮಾತು ಮತ್ತು ಆಕ್ರಮಣಕಾರಿ ನಡುವಳಿಕೆಯಂತಹ ಸ್ವಭಾವವನ್ನು ಹೊಂದಿದ್ದಳು. ಸ್ನೇಹಾಲಯದ ಸಿಬ್ಬಂದಿಯ ನಿರಂತರ ಬದ್ಧತೆ ಮತ್ತು […]

ಅ. 27 ರಂದು ಪುಳಿಮುಂಚಿ ಚಿತ್ರ ಬಿಡುಗಡೆ

ಮಂಗಳೂರು: ತ್ರಿಜಯ್ ಪ್ರೊಡಕ್ಷನ್ ಮತ್ತು ಎಚ್‌ಪಿಆರ್ ಫಿಲಂಸ್ ಬ್ಯಾನರ್ ನಡಿ ತಯಾರಾದ ‘ಪುಳಿಮುಂಚಿ’ ತುಳು ಸಿನೆಮಾ ಅ.27ರಂದು ಕರಾವಳಿಯಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ ತಿಳಿಸಿದ್ದಾರೆ. ಈಗಾಗಲೇ ದುಬೈ- ಬೆಹರೈನ್ ಸಹಿತ ವಿದೇಶಗಳಲ್ಲಿ ಪುಳಿಮುಂಚಿ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ತುಳುವರು ಚಿತ್ರವನ್ನು ಮೆಚ್ಚಿದ್ದಾರೆ. ಈಗಾಗಲೇ ಬುಕ್ ಮೈ ಶೋನಲ್ಲಿ ಚಿತ್ರದ ಬುಕ್ಕಿಂಗ್ ಆರಂಭಗೊಂಡಿದೆ. ಸಿನಿಮಾಸ್‌ ಸಹಿತಕರಾವಳಿಯಮಲ್ಟಿಪ್ಲೆಕ್ಸ್, ಸಿಂಗಲ್‌ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ತುಳುವರು ಇಷ್ಟ ಪಟ್ಟು ಸಿನಿಮಾ ನೋಡುವ ಮೂಲಕ ತುಳು […]

ಹುಲಿವೇಷ ಕುಣಿತದ ವೇಳೆ ಆಯತಪ್ಪಿ ಬಿದ್ದ ಯುವಕ: ಅಪಾಯದಿಂದ ಪಾರು

ಮಂಗಳೂರು: ನವರಾತ್ರಿಯ ಹುಲಿವೇಷ ಕುಣಿತದ ವೇಳೆ ದುರ್ಘಟನೆಯೊಂದು ಸಂಭವಿಸಿದೆ. ಹುಲಿವೇಷ ಕುಣಿತದ ವೇಳೆ ಆಯತಪ್ಪಿ ಬಿದ್ದು ಯುವಕ ಗಾಯಗೊಂಡಿರುವ ಘಟನೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನಡೆದಿದೆ. ಕುಣಿತದ ವೇಳೆ ಹುಲಿವೇಷಧಾರಿಯೊಬ್ಬ ರಿವರ್ಸ್ ಪಲ್ಟಿ ಹೊಡೆಯುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾನೆ. ಯುವಕನ ತಲೆ ನೆಲಕ್ಕೆ ಬಡಿದು ಕತ್ತು ಉಳುಕಿದ ಪರಿಣಾಮ ಹುಲಿವೇಷಧಾರಿ ಗಾಯಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಯುವಕನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಸಣ್ಣ ಗಾಯಗಳೊಂದಿಗೆ ಯುವಕ ಪ್ರಯಾಪಾಯದಿಂದ ಪಾರಾಗಿದ್ದಾನೆ.

ವಿಜಯ್ ಕೊಡವೂರು ಅವರ ಸಾಮಾಜಿಕ ಸೇವಾ ಕಾರ್ಯಗಳು ಶ್ಲಾಘನೀಯ: ಯಶ್ ಪಾಲ್ ಸುವರ್ಣ

ಉಡುಪಿ: ದಿವ್ಯಾಂಗ ರಕ್ಷಣಾ ಸಮಿತಿ ಕೊಡುವೂರು, ಅಪ್ಪು ಅಭಿಮಾನಿಗಳ ಬಳಗ ಉಡುಪಿ ಮತ್ತು ಲಯನ್ಸ್ & ಲಿಯೋ ಕ್ಲಬ್ ಪರ್ಕಳ ಇವರ ಜಂಟಿ ಆಶ್ರಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯ ಕ್ಷಯ ಮುಕ್ತ ಭಾರತದ ಯೋಜನೆ ಅಂಗವಾಗಿ ಕ್ಷಯ ಮುಕ್ತ ಉಡುಪಿ ನಗರಕ್ಕಾಗಿ ಉಡುಪಿ ನಗರದಲ್ಲಿನ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ, ದಿವ್ಯಾಂಗರಿಗೆ ಧನ ಸಹಾಯ, ಗಾಲಿಕುರ್ಚಿ ವಿತರಣೆ, ವಾಕರ್ ವಿತರಣೆ ಕಾರ್ಯಕ್ರಮವು ಉಡುಪಿಯ ಟೌನ್ ಹಾಲ್ ನಲ್ಲಿ ಅ.23 ರಂದು ನಡೆಯಿತು. ಕಾರ್ಯಕ್ರಮವನ್ನು […]