ಕಡಿಯಾಳಿ ಮಹಿಷ ಮರ್ದಿನಿ ದೇವಿಯ ತುಳು ಭಕ್ತಿ ಗೀತೆ ‘ಕರಿಯ ಕಲ್ಲ ಬಿಂಬ’ ಬಿಡುಗಡೆ

ಉಡುಪಿ: ಕುಸುಮ್ಯ ಕಾರ್ಕಳ ಸಾಹಿತ್ಯದಲ್ಲಿ ರಾಜೇಶ್ ಮುಡಿಪು ಹಾಗೂ ಪೂಜಾ ಸನಿಲ್ ಸುಮಧುರ ಕಂಠದಲ್ಲಿ ಮೂಡಿ ಬಂದಿರುವ ಕಡಿಯಾಳಿ ಮಹಿಷ ಮರ್ದಿನಿ ದೇವಿ ಸ್ತುತಿಯ ತುಳು ಭಕ್ತಿ ಗೀತೆ ‘ಕರಿಯ ಕಲ್ಲ ಬಿಂಬ’ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಕಡೆಶಿವಾಲಯ ಕ್ರಿಯೇಷನ್ ಸಂಕಲನ ಹೊಂದಿರುವ ಗೀತೆಗೆ ನರೇಶ್ ವಿಡಿಯೋಗ್ರಫಿ ಮಾಡಿದ್ದಾರೆ. ಹಾಡಿಗೆ ಮನೀಶ್ ಪೂಜಾರಿ ಕುರ್ಕಾಲ್ ಮತ್ತು ದೇವಸ್ಥಾನದ ಆಡಳಿತ ಮಂಡಳಿಯು ಬೆಂಬಲ ನೀಡಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ಸರಕಾರಿ ಜಿಲ್ಲಾಸ್ಪತ್ರೆ ಇವರ ಸಹಯೋಗದಲ್ಲಿ ಅ 20 ರಂದು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರವು ನಡೆಯಿತು. ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಆಯೋಜನೆಗೊಂಡ ಈ ರಕ್ತದಾನ ಶಿಬಿರವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ನವರಾತ್ರಿಯ ಶುಭಾಶಯವನ್ನು ತಿಳಿಸಿ ರಕ್ತದಾನ ಎಂಬ ಪುಣ್ಯದ ಕೆಲಸದಿಂದ ಹಲವರ ಜೀವ ಉಳಿಸಬಹುದು […]