ತೆಂಕುಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಾರದಾ ಮಾತೆ ಪ್ರತಿಷ್ಠಾಪನೆ

ತೆಂಕುಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶಾರದಾ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಶಾರದಾ ಮಾತೆಯ ಮೂರ್ತಿಯನ್ನು ಉಡುಪಿ ಕುಕ್ಕಿಕಟ್ಟೆಯಿಂದ ದೇವಾಲಯಕ್ಕೆ ಗುರುವಾರ ಸಂಜೆ ಮೆರವಣಿಗೆಯಲ್ಲಿ ತರಲಾಯಿತು. ದೇವಳದ ಅರ್ಚಕ ವಿನಾಯಕ್ ಭಟ್, ಧಾರ್ಮಿಕ ಪೂಜಾ ವಿಧಾನಗಳೊಂದಿಗೆ ಪ್ರತಿಷ್ಠಾಪನೆ ಹಾಗು ಮಹಾ ಮಂಗಳಾರತಿ ಬೆಳಗಿಸಿದರು. 6 ದಿನಗಳ ಕಾಲ ಶಾರದಾ ಪೂಜೆ ನಡೆಯಲಿದ್ದು, ನ. 25 ರ ಸಂಜೆ ಶೋಭಾಯಾತ್ರೆ ಜರುಗಲಿದೆ.
ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ನಾಪತ್ತೆ

ಪಡುಬಿದ್ರೆ: ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಶೃತಿನ್ ಶೆಟ್ಟಿ(35) ಎಂಬವರು ಅ.19 ರಿಂದ ನಾಪತ್ತೆಯಾಗಿರುವ ಪ್ರಕರಣ ನಡೆದಿದೆ. ಕಾಪು ಜನಾರ್ಧನ ದೇವಸ್ಥಾನ ಬಳಿಯ ಅಂಗಡಿ ಮನೆ ನಿವಾಸಿಯಾಗಿರುವ ಶೃತಿನ್, ಅ.16ರಂದು ಕಾರ್ಕಳಕ್ಕೆ ಕರ್ತವ್ಯಕ್ಕೆ ತೆರಳಿದ್ದರು. ಬಳಿಕ ಅ. 19 ರಂದು ಪತ್ನಿಗೆ ಫೋನ್ ಕರೆ ಮಾಡಿ ತಾನು ನಂದಿಕೂರಿನಲ್ಲಿದ್ದು ಮನೆಗೆ ಬರುವುದಾಗಿ ತಿಳಿಸಿದ್ದರು. ಆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ಪೂಜಾ […]
ಕಿನ್ನಿಮೂಲ್ಕಿ: 8ನೇ ವರ್ಷದ ಶಾರದಾ ಮಾತೆ ಪ್ರತಿಷ್ಠಾಪನೆ

ಕಿನ್ನಿಮೂಲ್ಕಿ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕಿನ್ನಿಮೂಲ್ಕಿ -ಕನ್ನರ್ಪಾಡಿಯ ಸ್ವಾಗತ ಗೋಪುರ ಬಳಿಯ ಮೈದಾನದಲ್ಲಿ 8ನೇ ವರ್ಷದ ಶಾರದಾಮಾತೆ ಪ್ರತಿಷ್ಠಾಪನೆ ಜರುಗಿತು. ನ. 23 ವರೆಗೆ ಶಾರದಾ ಮಹೋತ್ಸವ ನಡೆಯಲಿದ್ದು, ಶ್ರೀ ದೇವಿಯ ಸನ್ನಿಧಿಯಲ್ಲಿ ಚಂಡಿಕಾಯಾಗ ಜರಗಿತು. ಅರ್ಚಕ ಸುಬ್ರಮಣ್ಯ ಐತಾಳ ಧಾರ್ಮಿಕ ಪೂಜಾ ಕಾರ್ಯ ನೆಡೆಸಿಕೊಟ್ಟರು. ಸಮಿತಿ ಅಧ್ಯಕ್ಷ ಉದಯಕುಮಾರ್, ಜಯಪ್ರಕಾಶ್ ಕೆದ್ಲಾಯ, ದೇವದಾಸ್ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.
ಕುಂದಾಪುರ: ಬಾಲಕ ನಾಪತ್ತೆ

ಕುಂದಾಪುರ: ತಾಲೂಕಿನ ಹಕ್ಲಾಡಿ ಗ್ರಾಮದ ಕಟ್ಟಿನಮಕ್ಕಿ ನಿವಾಸಿ ಅರುಣ (15) ಎಂಬ ಬಾಲಕನು ಸೆಪ್ಟಂಬರ್ 20 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ದೂ.ಸಂಖ್ಯೆ: 08254-265333, ಮೊ.ನಂ: 9480805457 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ‘ಉಡುಪಿ ದಸರಾ’ಗೆ ಚಾಲನೆ

ಉಡುಪಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಉಡುಪಿ ವತಿಯಿಂದ ನ.23ರವರೆಗೆ ನಡೆಯಲಿರುವ 8ನೇ ವರ್ಷದ ಶ್ರೀ ಶಾರದೋತ್ಸವ ‘ಉಡುಪಿ ದಸರಾ’ಗೆ ಅಜ್ಜರಕಾಡು ಶ್ರೀಗೋವಿಂದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉದ್ಯಮಿ ಅಂಡಾರು ದೇವಿಪ್ರಸಾದ್ ಶೆಟ್ಟಿ, ಪ್ರಮುಖರಾದ ಗಣೇಶ್ ಕುಮಾರ್, ರಾಧಾಕೃಷ್ಣ ಮೆಂಡನ್, ಜ್ಯೋತಿ ದೇವಾಡಿಗ, ಸರೋಜಾ ಯಶವಂತ್, ಶೋಭಾ ಶೆಟ್ಟಿ , ಸಾಯಿರಾಧಾ […]