ಕೇರಳದ ‘ಕಲಾಮೇಳ್ತ್’ ಕಲಾ ಪ್ರಕಾರದಲ್ಲಿ ಮೂಡಿಬಂದ ‘ಭದ್ರಕಾಳಿ’

ಮಣಿಪಾಲ: ಕೇರಳದ ಕಲಾಪ್ರಕಾರವಾದ ‘ಕಲಾಮೇಳ್ತ್’ ಇದರ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸವನ್ನು ತ್ರಿಶೂರಿನ ಹಿರಿಯ ಕಲಾವಿದ ವೇಣುಗೋಪಾಲ್ ಇವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಶನಿವಾರ ಸಂಜೆ ನಡೆಸಿಕೊಟ್ಟರು. ಬಿಳಿ, ಹಸಿರು, ಕಪ್ಪು, ಹಳದಿ, ಕಡು ಕಂದು- ಈ ಐದು ನೈಸರ್ಗಿಕ ಬಣ್ಣಗಳನ್ನು ಬಳಸಿ, ‘ಭದ್ರಕಾಳಿ’ಯ ಚಿತ್ರವನ್ನು ಮೂಡಿಸುವುದರ ಮೂಲಕ ತಮ್ಮ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಿದರು. ಕೇರಳದ ದೇವಸ್ಥಾನಗಳಲ್ಲಿ ಪ್ರಚಲಿತವಾಗಿರುವ ಈ ಕಲೆಯ ಸಂದರ್ಭ ಹಾಗೂ ಒಟ್ಟು ಸ್ವರೂಪವನ್ನು ವಿವರಿಸಿದರು. ನಂತರ […]

ಟೆಕ್ ತತ್ತ್ವ -23 ದೇಶದ ತಂತ್ರಜ್ಞಾನ ಯುಗವನ್ನು ರೂಪಿಸುವ ಸಾಮರ್ಥ್ಯ ಹೊಂದಿದೆ: ರಾಜೀವ್ ಚಂದ್ರಶೇಖರ್

ಮಣಿಪಾಲ: ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ  ಆಯೋಜಿಸಿರುವ ತಾಂತ್ರಿಕ ಉತ್ಸವದಲ್ಲಿ ಭಾಗವಹಿಸಿದ್ದು ಸಂತೋಷದ ವಿಚಾರ.  ಈ ಸಂಸ್ಥೆಯನ್ನು ವ್ಯಾಪಿಸಿರುವ ಶಕ್ತಿ, ಸ್ವಂತಿಕೆ ಮತ್ತು ಬುದ್ಧಿವಂತಿಕೆಯು ಸ್ಪೂರ್ತಿದಾಯಕವಾಗಿದೆ. ಈ ರೀತಿಯ ಕಾರ್ಯಕ್ರಮಗಳು ಆವಿಷ್ಕಾರವನ್ನು ಒಂದು ತಂಡವಾಗಿ ಕೆಲಸ ಮಾಡಲು ಉತ್ತೇಜಿಸುತ್ತದೆ ಮತ್ತು ಇದರಿಂದ ಮುಂದಿನ ಪೀಳಿಗೆಯ ಎಂಜಿನಿಯರ್‌ಗಳು ಮತ್ತು ಆವಿಷ್ಕಾರಕರನ್ನು ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸಲು ಮಾತ್ರವಲ್ಲದೆ ಭವಿಷ್ಯದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರಿಗೂ ಹೊಸ ಆಲೋಚನೆಗಳನ್ನು ಅನ್ವೇಷಿಸಲು, ಅಧ್ಯಯನ ಮಾಡಲು ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸುವುದಕ್ಕೆ ನಾನು […]

ಉಲ್ಬಣಗೊಂಡ ಇಸ್ರೇಲ್ – ಪ್ಯಾಲೆಸ್ಟೈನ್ ಸಂಘರ್ಷ: ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟಕ್ಕೆ 500 ಬಲಿ

ಟೆಲ್ ಅವಿವ್: ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷವು ಉಲ್ಬಣಗೊಳ್ಳುತ್ತಲೇ ಇದ್ದು, ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ ನಂತರ ನೂರಾರು ಜನರು ಸಾವನ್ನಪ್ಪಿದ್ದು ಸಾವಿರಾರು ಜನ ಸ್ಥಳಾಂತರಗೊಂಡಿದ್ದಾರೆ. ಮಂಗಳವಾರ ಗಾಜಾದ ಆಸ್ಪತ್ರೆಯಲ್ಲಿ ಸ್ಫೋಟ ಸಂಭವಿಸಿದ್ದು ಸುಮಾರು 500 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಭೀಕರ ದಾಳಿಗಳನ್ನು ವಿಶ್ವವೇ ಖಂಡಿಸಿದೆ. ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ಸ್ಫೋಟಗಳಿಗೆ ಇಸ್ರೇಲಿನ ನಿರ್ದಯ ಪ್ರತೀಕಾರವನ್ನು ದೂಷಿಸಿದ್ದರೆ, ಇಸ್ರೇಲ್ ಇದು ಹಮಾಸ್ ನಿಂದ ಗುರಿತಪ್ಪಿದ ದಾಳಿ ಎಂದಿದೆ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ […]

ಮೋಹಿನಿ ಅಲಂಕಾರದಲ್ಲಿ ಮನಮೋಹನ ಕೃಷ್ಣ!!

ಉಡುಪಿ: ನವರಾತ್ರಿಯ ಪ್ರಯುಕ್ತ ಶ್ರೀಕೃಷ್ಣ ದೇವರಿಗೆ ‘ಮೋಹಿನಿ’ ವಿಶೇಷ ಅಲಂಕಾರವನ್ನು ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಸ್ವಾಮೀಜಿಯವರು ನೆರವೇರಿಸಿ, ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು.

ವಿದ್ಯಾಲಕ್ಷ್ಮೀ ಸಮೂಹ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮ

ಬ್ರಹ್ಮಾವರ: ಕಾನೂನು ಅರಿವಿನಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎನ್ನುವ ದೃಷ್ಟಿಕೋನದಿಂದ ವಿದ್ಯಾಲಕ್ಷ್ಮೀ ಸಮೂಹ ಸಂಸ್ಥೆ ಬ್ರಹ್ಮಾವರ ಇಲ್ಲಿನ ಆ್ಯಂಟಿ ರ್‍ಯಾಗಿಂಗ್ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಮತ್ತು ಜಿಲ್ಲಾ ವಕೀಲರ ಸಂಘ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಜಾಗೃತಿ ಕುರಿತಾಗಿ ಮಾಹಿತಿ ನೀಡಿದರು. ಉಡುಪಿ ಮಾನವ ಹಕ್ಕು […]