ದೊಡ್ಡಣ್ಣಗುಡ್ಡೆ: ಜೋಡಿ ಚಂಡಿಕಾಯಾಗ ಸಂಪನ್ನ; ನಾಳೆ ಲಲಿತಾ ಸಹಸ್ರ ಕದಳೀಯಾಗ

ದೊಡ್ಡಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಧರ್ಮದರ್ಶಿ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ವೇ|ಮೂ| ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಮಂಗಳವಾರ ಜೋಡಿ ಚಂಡಿಕಾಯಾಗ, ದುರ್ಗಾನಮಸ್ಕಾರ ಪೂಜೆ, ಕಲ್ಪೋಕ್ತ ಪೂಜೆ ಸಹಿತ ರಂಗಪೂಜೆಯು ಅನ್ನಪ್ರಸಾದ ವಿತರಣೆಯೊಂದಿಗೆ ನೆರವೇರಿತು. ಮಂಗಳೂರಿನ ಉದ್ಯಮಿ ಶರೂನ್‌ ಮತ್ತು ಶ್ವೇತಾ ದಂಪತಿ ಹಾಗೂ ಮಣಿಪಾಲ ಎಂಐಟಿಯ ರೀತು ಕೇಯೂರು ಅವರ ಸೇವಾರ್ಥ ಜೋಡಿ ಚಂಡಿಕಾಯಾಗ, ಕ್ಷೇತ್ರದ ವತಿಯಿಂದ ಕುಬೇರ ಲಕ್ಷ್ಮೀ ಸಾನ್ನಿಧ್ಯದಲ್ಲಿ ಮಹಾಲಕ್ಷ್ಮೀ ಸಹಸ್ರನಾಮ ಯಾಗ, ದೊಡ್ಡಣಗುಡ್ಡೆಯ […]

ಪರ್ಕಳ: ಡಿವೈಡರ್ ಗೆ ಹೊಡೆದ ಬೈಕ್; ಸವಾರ ಮೃತ್ಯುವಶ

ಪರ್ಕಳ: ಉಡುಪಿ ಮಣಿಪಾಲದ ಪರ್ಕಳ ಹೆದ್ದಾರಿಯ ಬಿ.ಎಂ.ಸ್ಕೂಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬೈಕೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ. ಹಿರಿಯಡ್ಕ ನಿವಾಸಿ ಅಕ್ಷಯ ಭಟ್(26) ಮೃತ ಯುವಕ. ಬಾಣಸಿಗನಾಗಿದ್ದ ಅಕ್ಷಯ್ ಭಟ್, ಇಂದ್ರಾಳಿಯ ದೇವಸ್ಥಾನವೊಂದರಲ್ಲಿ ನವರಾತ್ರಿಯ ಸಾರ್ವಜನಿಕ ಅನ್ನಸಂತರ್ಪಣೆಯ ಅಡುಗೆ ಕೆಲಸ ನಿರ್ವಹಿಸಲು ಮುಂಜಾನೆ ಮನೆಯಿಂದ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ […]

ತುಲಾ ರಾಶಿಯಲ್ಲಿ ಸೂರ್ಯ ಸಂಚಾರ: ಈ ನಾಲ್ಕು ರಾಶಿಯವರಿಗೆ ಕ್ರೂರ ತ್ರಿಗ್ರಹ ಯೋಗ

ಸೂರ್ಯ ಸಂಕ್ರಮಣ 2023: ಅಕ್ಟೋಬರ್ 18 ರಂದು ಸೂರ್ಯನು ತುಲಾ ರಾಶಿಯಲ್ಲಿ ಸಾಗುತ್ತಾನೆ ಮತ್ತು ಈ ಸಂಕ್ರಮಣದಲ್ಲಿ ‘ತ್ರಿಗ್ರಹ’ ಯೋಗವು ರೂಪುಗೊಳ್ಳುತ್ತದೆ. ಸೂರ್ಯ ಇಂದು ಮಧ್ಯಾಹ್ನ 01:18 ಕ್ಕೆ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ತುಲಾ ರಾಶಿಯಲ್ಲಿ ಕೇತು ಮತ್ತು ಮಂಗಳ ಇರುವುದರಿಂದ ತ್ರಿಗ್ರಹ ಯೋಗವು ರೂಪುಗೊಳ್ಳುತ್ತಿದೆ. ಸೂರ್ಯನು ತುಲಾ ರಾಶಿಗೆ ಪ್ರವೇಶಿಸಿದಾಗ ಹನ್ನೆರಡು ರಾಶಿಚಕ್ರದ ಚಿಹ್ನೆಗಳಲ್ಲಿ ನಾಲ್ಕು ರಾಶಿಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಈ ನಾಲ್ಕು ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಜನಿಸಿದ ಜನರಿಗೆ ಇದು ಕಷ್ಟಕರವಾದ […]

ಹಿರಿಯಡ್ಕ: ಬೆಂಗಳೂರಿಗೆ ತೆರಳಿದ ವ್ಯಕ್ತಿ ನಾಪತ್ತೆ

ಹಿರಿಯಡ್ಕ: ಹಿರಿಯಡ್ಕ ನಿವಾಸಿ ರವೀಂದ್ರ ಶೆಟ್ಟಿ (55) ಎಂಬ ವ್ಯಕ್ತಿಯು ಅಕ್ಟೋಬರ್ 14 ರಂದು ರಾತ್ರಿ 10.30 ರ ಸುಮಾರಿಗೆ ಮನೆಯಿಂದ ಬೆಂಗಳೂರಿಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 8 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು, ಹಿಂದಿ, ಇಂಗ್ಲೀಷ್ ಹಾಗೂ ತಮಿಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಡಿಕೇರಿ: ತಲಕಾವೇರಿಯಲ್ಲಿ ಕಾವೇರಿ ಮಾತೆಯ ತೀರ್ಥೋದ್ಬವವನ್ನುಕಣ್ತುಂಬಿಕೊಂಡ ಸಹಸ್ರಾರು ಭಕ್ತರು

ಮಡಿಕೇರಿ: ತಾಲೂಕಿನ ತಲಕಾವೇರಿಯಲ್ಲಿ ಮಧ್ಯರಾತ್ರಿ 1.27 ಕ್ಕೆ ಕಾವೇರಿ ತೀರ್ಥೋದ್ಭವವನ್ನು ಸಹಸ್ರಾರು ಜನರು ನೋಡಿ ಕೃತಾರ್ಥರಾದರು. ಕರ್ಕಾಟಕ ಲಗ್ನ ತುಲಾ ಸಂಕ್ರಮಣ ಪುಣ್ಯಗಳಿಗೆಯಲ್ಲಿ ಬ್ರಹ್ಮಕುಂಡಿಕೆಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ನೆರೆದ ಭಕ್ತರಿಗೆ ದರ್ಶನ ನೀಡಿದಳು. ಹಲವಾರು ಅರ್ಚಕರ, ಪಂಡಿತರ ಮಂತ್ರಘೋಷದ ನಡುವೆ ತೀರ್ಥೋದ್ಭವ ಸಂಭವಿಸಿತು. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ನಟಿ ಹರ್ಷಿಕಾ ಮತ್ತು ಭುವನ್ ಈ ಸಂದರ್ಭದಲ್ಲಿ ಹಾಜರಿದ್ದು ತೀರ್ಥೋದ್ಭವದ ಪುಣ್ಯಸಂದರ್ಭವನ್ನು ಕಣ್ತುಂಬಿಕೊಂಡರು.