ಕುಂಡರ ಜಾನಿ ಮಲಯಾಳಂ ಪ್ರಸಿದ್ಧ ಖಳ ನಟ ಹೃದಯಾಘಾತದಿಂದ ನಿಧನ

ಕೊಲ್ಲಂ(ಕೇರಳ) : ಮಲಯಾಳಂ ಚಿತ್ರರಂಗದ ಖ್ಯಾತ ನಟ ಕುಂಡರ ಜಾನಿ ಮಂಗಳವಾರ ನಿಧನರಾಗಿದ್ದಾರೆ. ಇವರಿಗೆ 71 ವರ್ಷ ವಯಸ್ಸಾಗಿತ್ತು. ಮಂಗಳವಾರ ಸಂಜೆ ಹೃದಯಾಘಾತ ಉಂಟಾಗಿ ಅವರನ್ನು ಕೊಲ್ಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮಲಯಾಳಂ ಚಿತ್ರರಂಗ ಪ್ರಸಿದ್ಧ ಖಳನಟ ಕುಂಡರ ಜಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಾನಿ ಮೃತಪಟ್ಟಿದ್ದಾರೆ. ನಾಲ್ಕು ದಶಕಗಳ ವೃತ್ತಿ ಜೀವನ : ಜಾನಿ ತಮ್ಮ ಸಿನಿಮಾ ವೃತ್ತಿ ಜೀವನವನ್ನು 1979ರಲ್ಲಿ ಆರಂಭಿಸಿದರು. ಇವರು ಐವಿ ಸಸಿ ಅವರ ನಿರ್ದೇಶನದಲ್ಲೇ 30ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. […]

ಅ. 29 ರಂದು ಡಾ.ವಿರೂಪಾಕ್ಷ ದೇವರಮನೆ ವಿರಚಿತ ಕಣ್ಣಿಗೆ ಕಾಣುವ ದೇವರು ಹಾಗೂ ಡಿಡ್ ಯೂ ಟಾಕ್ ಟು ಯುವರ್ ಚೈಲ್ಡ್ ಟುಡೇ ಪುಸ್ತಕ ಲೋಕಾರ್ಪಣೆ

ಉಡುಪಿ: ಅ.29 ರಂದು ಸಂಜೆ 5 ಗಂಟೆಗೆ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಡಾ.ವಿರೂಪಾಕ್ಷ ದೇವರಮನೆ ವಿರಚಿತ ‘ಕಣ್ಣಿಗೆ ಕಾಣುವ ದೇವರು’ ಹಾಗೂ ‘ಡಿಡ್ ಯೂ ಟಾಕ್ ಟು ಯುವರ್ ಚೈಲ್ಡ್ ಟುಡೇ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಯಂಡಮೂರಿ ವೀರೇಂದ್ರನಾಥ್, ಡಾ.ಎ.ವಿ ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ರೂಬಿಕ್ಸ್ ಕ್ಯೂಬ್ ಗ್ರಾಂಡ್ ಮಾಸ್ಟರ್ ಆಫಾನ್ ಕುಟ್ಟಿ, ವನ್ ಗುಡ್ ಸ್ಟೆಪ್ ನ ಟ್ರಸ್ಟಿ ಅಮಿತಾ ಪೈ, ಸಾವಣ್ಣ ಪ್ರಕಾಶನದ […]

76 ಮಂದಿ ನಾಪತ್ತೆ : ಸಿಕ್ಕಿಂ ಮೇಘಸ್ಪೋಟ ಮೃತರ ಸಂಖ್ಯೆ 40ಕ್ಕೆ ಏರಿಕೆ

ಗ್ಯಾಂಗ್ಟಕ್ (ಸಿಕ್ಕಿಂ) : ಸಿಕ್ಕಿಂನಲ್ಲಿ ಉಂಟಾಗಿದ್ದ ಮೇಘಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.ಸಿಕ್ಕಿಂನಲ್ಲಿ ಉಂಟಾಗಿರುವ ಮೇಘಸ್ಫೋಟದಿಂದಾಗಿ ಇದುವರೆಗೆ 40 ಮಂದಿ ಸಾವನ್ನಪ್ಪಿದ್ದಾರೆ. 76 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಿಕ್ಕಿಂ ಸರ್ಕಾರ ಹೇಳಿದೆ.ಈ ಬಗ್ಗೆ ಮಾಹಿತಿ ನೀಡಿರುವ ಸಿಕ್ಕಿಂ ಸರ್ಕಾರ, ಸದ್ಯ 76 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದೆ. ಕಳೆದ ಅಕ್ಟೋಬರ್​ 2ರಂದು ಸಿಕ್ಕಿಂನಲ್ಲಿ ಮೇಘಸ್ಫೋಟ ಉಂಟಾಗಿತ್ತು. ಮೇಘಸ್ಫೋಟದಿಂದಾಗಿ ಇಲ್ಲಿನ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಅಪಾರ ಪ್ರಮಾಣ […]

500 ಜನ ಬಲಿ : ಗಾಜಾದ ಅಲ್-ಅಹ್ಲಿ ಸಿಟಿ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ

ಜೆರುಸಲೇಂ: ಗಾಜಾದಲ್ಲಿ ಭಯಾನಕ ಘಟನೆಯೊಂದು ಜರುಗಿದೆ.ಇಸ್ರೇಲ್ ವೈಮಾನಿಕ ದಾಳಿ ಮಾಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹಮಾಸ್ ಗುಂಪು ಆರೋಪಿಸಿದೆ. ಗಾಜಾ ನಗರದ ಅಲ್ ಅಹ್ಲಿ ಆಸ್ಪತ್ರೆ ಮೇಲೆ ಈ ದಾಳಿ ನಡೆದಿದೆ. ದಶಕಗಳಿಂದ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಲ್ಲಿ ಇದು ಅತ್ಯಂತ ಭೀಕರ ಘಟನೆಯಾಗಿದೆ. ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಪರಿಣಾಮ 500 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಗಾಜಾ ಅಲ್-ಅಹ್ಲಿ ಸಿಟಿ ಆಸ್ಪತ್ರೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಕನಿಷ್ಠ 500 ಜನರು ಸಾವನ್ನಪ್ಪಿದ್ದಾರೆ. ”ಗಾಜಾದಲ್ಲಿನ ಆಸ್ಪತ್ರೆಯ ಮೇಲೆ […]

ಟಾಸ್​ ಗೆದ್ದ ಆಫ್ಘಾನ್‌​ ಬೌಲಿಂಗ್​ ಆಯ್ಕೆ : ಅಫ್ಘಾನಿಸ್ತಾನ – ನ್ಯೂಜಿಲ್ಯಾಂಡ್ ವಿಶ್ವಕಪ್‌ನಲ್ಲಿ ಮುಖಾಮುಖಿ

  ಚೆನ್ನೈ (ತಮಿಳುನಾಡು): ವಿಶ್ವಕಪ್​ ಟೂರ್ನಿಯ 16ನೇ ಪಂದ್ಯ ಇದಾಗಿದ್ದು ಚೆನ್ನೈನ ಎಂಎ ಚಿದಂಬರಂ ಮೈದಾನದ ಆತಿಥ್ಯ ವಹಿಸಿಕೊಂಡಿದೆ. ಏಕದಿನ ವಿಶ್ವಕಪ್ ಪಂದ್ಯಾವಳಿಗಳ ಭಾಗವಾಗಿ ಇಂದು ನ್ಯೂಜಿಲ್ಯಾಂಡ್‌ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಆವೃತ್ತಿಯಲ್ಲಿ ನ್ಯೂಜಿಲ್ಯಾಂಡ್‌ ಆಡಿರುವ ಮೂರು ಪಂದ್ಯಗಳನ್ನು ವಶಕ್ಕೆ ಪಡೆದುಕೊಂಡರೆ, ಅಫ್ಘಾನಿಸ್ತಾನ ಒಂದು ಪಂದ್ಯವನ್ನು ಗೆದ್ದು ಎರಡು ಪಂದ್ಯಗಳನ್ನು ಕೈಚೆಲ್ಲಿದೆ. ಭಾನುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸಿರುವ ಅಫ್ಘಾನಿಸ್ತಾನ, ಇದೀಗ ಕಿವೀಸ್​ ಮೇಲೆ ಕಣ್ಣಿಟ್ಟಿದೆ. ಕಿವೀಸ್ ಕೂಡ ಪೂರ್ವ ಸಿದ್ಧತೆಯಿಂದಲೇ […]