ವಿಜ್ಞಾನಿಗಳ ಪಟ್ಟಿಯಲ್ಲಿ ವಿಶ್ವದ ಉತ್ತಮ ಪ್ರಾಧ್ಯಾಪಕರಿಗೆ ಜಾರ್ಖಂಡ್​ನ​ 47 ಸ್ಥಾನ

ರಾಂಚಿ (ಜಾರ್ಖಂಡ್‌): ವಿಶ್ವದ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಜಾರ್ಖಂಡ್​ನ​ ಹೆಚ್ಚಿನ ಸಂಖ್ಯೆಯ ಪ್ರಾಧ್ಯಾಪಕರು ಹೆಸರು ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿದ ವಿಶ್ವದ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಜಾರ್ಖಂಡ್​ನ​ 47 ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ. ರಾಜ್ಯದ ವಿವಿಧ ಸಂಸ್ಥೆಗಳ 47 ಪ್ರಾಧ್ಯಾಪಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಒಟ್ಟಾರೆ ಈ ಪಟ್ಟಿಯಲ್ಲಿರುವ ವಿಜ್ಞಾನಿಗಳಲ್ಲಿ ಶೇ.2ರಷ್ಟು ಜಾರ್ಖಂಡ್​ನಿಂದಲೇ ಪ್ರತಿನಿಧಿಸುತ್ತಿದ್ದಾರೆ ಎಂಬುವುದೇ ಗಮನಾರ್ಹವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಪಟ್ಟಿಯಲ್ಲಿ ಜಾರ್ಖಂಡ್‌ನಿಂದ 47 ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ. […]

ದಸರಾ : ಆಹಾರ ದಸರಾದಲ್ಲಿ ಬುಡಕಟ್ಟು ಜನಾಂಗದ ‘ಬಂಬೂ ಬಿರಿಯಾನಿ’ ಘಮ

ಮೈಸೂರು: ದಸರಾ ಆಹಾರ ಮೇಳದಲ್ಲಿ ಬುಡಕಟ್ಟು ಜನಾಂಗದ ಬಂಬೂ ಬಿರಿಯಾನಿ ಜನರ ಗಮನ ಸೆಳೆಯುತ್ತಿದೆ. ಇದು ಆರೋಗ್ಯಕ್ಕೆ ಹೇಗೆ ಉಪಕಾರಿ ಎಂಬ ಬಗ್ಗೆ ಬುಡಕಟ್ಟು ಜನಾಂಗದ ಕೃಷ್ಣಯ್ಯ ಬುಡಕಟ್ಟು ಜನಾಂಗದ ಮೂಲ ಆಹಾರ ಬಂಬೂ ಬಿರಿಯಾನಿ. ಹೇಗೆ ತಯಾರು ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ. ಬಂಬೂ ಬಿರಿಯಾನಿ ತಯಾರಿಕೆ: ರೆಡಿ ಮಾಡಿಕೊಂಡ ಬಿದಿರಿನ ಬಂಬನ್ನು ಸ್ವಚ್ಛವಾಗಿ ತೊಳೆದಕೊಳ್ಳಬೇಕು. ಅಕ್ಕಿ, ಚಿಕನ್, ಮಾಸಾಲೆ, ಕಾಡು ಅರಿಶಿಣ, ಕಾಡು ಶುಂಠಿ, ಕಾಡು ಕೊತ್ತಂಬರಿ, ಕಾಡು ಕರಿಬೇವಿನಸೊಪ್ಪು ಮಿಶ್ರಣ ಮಾಡಬೇಕು. ನಂತರ […]

ಯಂಗ್​, ಲ್ಯಾಥಮ್​, ಫಿಲಿಫ್ಸ್​ ಅರ್ಧಶತಕದಾಟ: ಆಫ್ಘನ್ನರಿಗೆ 289 ರನ್​ಗಳ ಗುರಿ : ವಿಶ್ವಕಪ್​ ಕ್ರಿಕೆಟ್

ಚೆನ್ನೈ (ತಮಿಳುನಾಡು): ಇಂಗ್ಲೆಂಡ್​​ ವಿರುದ್ಧ ಪ್ರಬಲ ಬೌಲಿಂಗ್​ ದಾಳಿಯಿಂದ ಗೆಲುವು ದಾಖಲಿಸಿದ್ದ ಅಫ್ಘಾನ್​ ಚೆನ್ನೈನ ಚೆಪಾಕ್​ ಪಿಚ್​ನಲ್ಲಿ ಕಿವೀಸ್​ಗೆ ಆರಂಭಿಕ ಆಘಾತ ನೀಡಿತು.ಇಂಗ್ಲೆಂಡ್​ ಮಣಿಸಿದ ಅಫ್ಘಾನಿಸ್ತಾನ ಚೆನ್ನೈನ ಚೆಪಾಕ್​ ಸ್ಪಿನ್​ ಟ್ರ್ಯಾಕ್​ನಲ್ಲಿ ನ್ಯೂಜಿಲ್ಯಾಂಡ್​ ಎದುರಿಸಿದ್ದು, ಮೊದಲು ಬ್ಯಾಟ್​ ಮಾಡಿದ ಕಿವೀಸ್​ 288 ರನ್​ ಗಳಿಸಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಕಿವೀಸ್​ಗೆ ಉತ್ತಮ ಆರಂಭ ಸಿಗಲಿಲ್ಲ. ಬೌಲಿಂಗ್​ ಶಕ್ತಿಯಿಂದ ಇಂಗ್ಲೆಂಡ್​ ಮಣಿಸಿದ್ದ ಅಫ್ಘಾನಿಸ್ತಾನದ ಬೌಲರ್​ಗಳ ಅದೇ ಆತ್ಮವಿಶ್ವಾಸದಲ್ಲಿ ಕಾಣಿಸಿಕೊಂಡರು. ವಿಶ್ವಕಪ್​ನ ಉದ್ಘಾಟನಾ ಪಂದ್ಯದಲ್ಲಿ ಶತಕ ಗಳಿಸಿದ್ದ […]

ದೊಡ್ಡಣ್ಣಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ವೈಭವ

ದೊಡ್ಡಣ್ಣಗುಡ್ಡೆ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಜಾನಪದ ಭಾವಗೀತೆ ಸಂಗೀತ ಗಾನ, ಸಾಂಸ್ಕೃತಿಕ ನೃತ್ಯ ಕಲಾ ಬಳಗ ಕುಂಜಿಬೆಟ್ಟು ಅವರಿಂದ ಕರಗ ನೃತ್ಯ, ಯಕ್ಷ ನೃತ್ಯ, ಜಾನಪದ ನೃತ್ಯ ಹಾಗೂ ವಿಶೇಷ ಪಟ ನೃತ್ಯ, ಕೊರವಂಜಿ ನೃತ್ಯ ಜೊತೆಗೆ ಸ್ಥಳೀಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಿತು. ಕಲಾ ಪ್ರಕಾರಗಳ ಸಂಸ್ಥೆ ಕಲಾ ನಿಧಿ ತಂಡದ ದಶಮಾನೋತ್ಸವ ಅಂಗವಾಗಿ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ […]

ಹಲವು ಗಣ್ಯರು ಭಾಗಿ : ಪವಿತ್ರ ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಂಡ ಭಕ್ತಗಣ

ಕೊಡಗು : ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಕ್ಷಣಕ್ಕೆ ಸಾಕ್ಷಿಯಾದರು.ಕೊಡಗಿನ ಕುಲದೇವಿ, ನಾಡಿನ ಜೀವನದಿ ಕಾವೇರಿ ನಿಗದಿಯಂತೆ ಕರ್ಕಾಟಕ ಲಗ್ನದಲ್ಲಿ ರಾತ್ರಿ 1 ಗಂಟೆ 26 ನಿಮಿಷಕ್ಕೆ ತೀರ್ಥರೂಪಿಣಿಯಾಗಿ ನೆರೆದಿದ್ದ ಭಕ್ತರಿಗೆ ದರ್ಶನ ನೀಡಿದಳು.ಕೊಡಗಿನ ತಲಕಾವೇರಿಯಲ್ಲಿ ಸಾವಿರಾರು ಭಕ್ತರು ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜ್, ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ.ಮಂಥರ್ ಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ವೆಂಕಟರಾಜ, ಜಿ. […]