ಆದಿತ್ಯ ನೌಕೆ : ಜನವರಿಯಲ್ಲಿ ಎಲ್​1 ಪಾಯಿಂಟ್​ಗೆ ಆದಿತ್ಯ ನೌಕೆ

ಮಧುರೈ (ತಮಿಳುನಾಡು): ಭಾರತದ ಮಹತ್ವಾಕಾಂಕ್ಷೆಯ ಆದಿತ್ಯ ಎಲ್​ 1 ಯೋಜನೆ ಕುರಿತು ಇಸ್ರೋ ಅಧ್ಯಕ್ಷ ಎಸ್​ ಸೋಮನಾಥ್ ಅವರು ಮಾಹಿತಿ ಹಂಚಿಕೊಂಡಿದ್ದು, ಜನವರಿ ತಿಂಗಳ ಮಧ್ಯದಲ್ಲಿ ಆದಿತ್ಯ ಎಲ್​ 1 ನೌಕೆಯು ಲಾಂಗ್ರೇಜ್​ ಪಾಯಿಂಟ್​ನ್ನು ತಲುಪಲಿದೆ ಎಂದು ಹೇಳಿದ್ದಾರೆ.ಇದಕ್ಕೂ ಮುನ್ನ ಇಸ್ರೋ, ನೌಕೆಯು ನಿಗದಿತ ಪಥದಲ್ಲಿ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯವು ಯಶಸ್ವಿಯಾಗಿದೆ ಎಂದು ಹೇಳಿತ್ತು. ಜನವರಿ ತಿಂಗಳ ಮಧ್ಯದಲ್ಲಿ ಆದಿತ್ಯ ಎಲ್​ 1 ನೌಕೆಯು ಲಾಂಗ್ರೇಜ್​ ಪಾಯಿಂಟ್​ನ್ನು ತಲುಪಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್​ […]

ಪತಂಜಲಿ ಯೋಗ ಸಮಿತಿ ವತಿಯಿಂದ ಉಚಿತ ಪ್ರಾಣ ಯೋಗ ಶಿಬಿರ ಉದ್ಘಾಟನೆ

ಉಡುಪಿ: ಪತಂಜಲಿ ಯೋಗ ಸಮಿತಿ ಉಡುಪಿ ಹಾಗೂ ಎಸ್ ವಿ ಎಸ್ ಹಳೆ ವಿದ್ಯಾರ್ಥಿ ಸಂಘ (ರಿ) ಕಟಪಾಡಿ ಇವರ ಸಹಯೋಗದಲ್ಲಿ ಆ.15 ರಿಂದ 24ರ ವರೆಗೆ 10 ದಿನಗಳ ಕಾಲ “ಉಚಿತ ಪ್ರಾಣ ಯೋಗ ಶಿಬಿರ” ವನ್ನು ಕಟಪಾಡಿಯ ಮಹಿಳಾ ಮಂಡಲದ ಸಭಾ ಭವನದಲ್ಲಿ ಭಾನುವಾರ ದೀಪ ಪ್ರಜ್ವಲಿಸಿ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಉಡುಪಿ ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕ ರಾಘವೇಂದ್ರ ಭಟ್ , ವೆಂಕಟೇಶ್ ಮೇಹಂದಲೆ ಹಾಗೂ ಜಗದೀಶ್ ಕುಮಾರ್ ಇವರು ಉಪಸ್ಥಿತರಿದ್ದರು. […]

ಕೆನರಾ ರಿಟೈಲ್ ಎಕ್ಸ್ ಪೊ-2023 ಉದ್ಘಾಟನೆ

ಉಡುಪಿ: ಗೃಹ ಮತ್ತು ವಾಹನಗಳ ಬೃಹತ್ ಸಾಲಮೇಳ ಕೆನರಾ ರಿಟೈಲ್ ಎಕ್ಸ್ ಪೊ-2023 ಅನ್ನು ಇಲ್ಲಿನ ಎಂಜಿಎಂ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದು, ಶಾಸಕ ಯಶ್ ಪಾಲ್ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಗೌರವ ಅತಿಥಿಯಾಗಿ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕೆನರಾ ಬ್ಯಂಕಿನ ಜನರಲ್ ಮ್ಯಾನೇಜರ್ ಎಂಜಿ ಪಂಡಿತ್ ವಹಿಸಿದ್ದರು. ಡಿವಿಷನ್ ಮ್ಯಾನೇಜರ್ ಉಮೇಶ್ ಕೆ.ಆರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಶೀಬಾ ಸಹಾಜನ್, ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಂಗಳೂರು: ರಾಜ್ಯದ ಆರು ಜೆಸ್ವಿಟ್ ಉಪಯಾಜಕರಿಗೆ ಗುರುದೀಕ್ಷೆ

ಮಂಗಳೂರು: ಶಿವಮೊಗ್ಗಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀ ವಂದನೀಯ ಫ್ರಾನ್ಸಿಸ್ ಸೆರಾವೊ ಇವರು ಮಂಗಳೂರಿನ ಫಾತಿಮಾ ಧ್ಯಾನ ಮಂದಿರದಲ್ಲಿ ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಆರು ಉಪಯಾಜಕರಿಗೆ ಯಾಜಕ ದೀಕ್ಷೆ ನೀಡಿದರು. ಯಾಜಕ ದೀಕ್ಷೆಯನ್ನು ಪಡೆದ ನವಯಾಜಕರು: ಆಶ್ವಿನ್ ಡಿ’ಸಿಲ್ವಾ ಮೂಡಬಿದ್ರೆಯ ಸಂಪಿಗೆ, ವಿಶಾಲ್‌ ಪಿಂಟೋ ಕಿನ್ನಿಗೋಳಿ, ಜೈಸನ್‌ ಲೋಬೊ ಸಿದ್ದಕಟ್ಟೆ, ವಿನೋದ್‌ ಸಲ್ಡಾನ್ಹಾ ವಿರಾಜ್‌ಪೇಟೆ, ಆರ್ವಿನ್‌ ಪಾಯ್ಸ್ ಮಡಂತ್ಯಾರು ಮತ್ತು ಲೆಸ್ಟನ್‌ ಲೋಬೊ ಮೂಡುಬೆಳ್ಳೆ. ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾದ ಫಾ. ಡಯನೀಶಿಯಸ್ ವಾಸ್, ಫಾತಿಮಾ ಧ್ಯಾನ ಮಂದಿರದ […]

ಉದ್ಯಮಿ ನೀರೆ ಸುಭಾಷ್ ಶೆಟ್ಟಿ ಹೃದಯಾಘಾತದಿಂದ ನಿಧನ

ಕಾರ್ಕಳ: ಬೆಂಗಳೂರು ಹೋಟೆಲ್ ಉದ್ಯಮಿ ನೀರೆ ಗ್ರಾಮದ ಸುಭಾಷ್ ಶೆಟ್ಟಿ(50) ಇವರು ಅ.14 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕಾರ್ಯಕ್ರಮ ನಿಮಿತ್ತ ಮುಂಬೈ ತೆರಳಿದ್ದ ಸುಭಾಷ್ ಶನಿವಾರ ಸಂಜೆ ವಿಮಾನ ಮೂಲಕ ಬೆಂಗಳೂರು ವಾಪಾಸಾಗಬೇಕಿತ್ತು. ಆದರೆ ಶನಿವಾರ ಬೆಳಿಗ್ಗೆ ಸಂಬಂಧಿಕರ ಮನೆಗೆ ಹೋಗುವ ದಾರಿಯಲ್ಲಿ ಕುಸಿದು ಬಿದ್ದು, ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.