ಪ್ರಧಾನಿ ನರೇಂದ್ರ ಮೋದಿ ಬರೆದ ‘ಗಯೇ ತೆನೋ ಗರ್ಬೋ’ ಹಾಡಿನ ವಿಡಿಯೋ ಬಿಡುಗಡೆ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ‘ಗಯೇ ತೆನೋ ಗರ್ಬೋ’ ಹಾಡನ್ನು ಗಾಯಕಿ ಧ್ವನಿ ಭಾನುಶಾಲಿ ಮತ್ತು ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಹಾಡಾಗಿ ಪರಿವರ್ತಿಸಿದ್ದಾರೆ. ನಟ ಮತ್ತು ಚಲನಚಿತ್ರ ನಿರ್ಮಾಪಕ ಜಾಕಿ ಭಗ್ನಾನಿ ಮತ್ತು ಜಸ್ಟ್ ಮ್ಯೂಸಿಕ್ ನಿರ್ಮಿಸಿದ ಗಾರ್ಬಾ ವಿಡಿಯೋ ಹಾಡು ನರೇಂದ್ರ ಮೋದಿಯವರು ಬರೆದ ಸಾಹಿತ್ಯಕ್ಕೆ ಜೀವ ತುಂಬಿದೆ. ಹಾಡಿನ ಕ್ಲಿಪ್ ಅನ್ನು ಹಂಚಿಕೊಂಡಿರುವ ಗಾಯಕಿ ಧ್ವನಿ ಭಾನುಶಾಲಿ X ನಲ್ಲಿ, “ಆತ್ಮೀಯ ನರೇಂದ್ರ ಮೋದಿ ಜೀ, ತನಿಷ್ಕ್ ಬಾಗ್ಚಿ ಮತ್ತು […]

ಅ.15-24: ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅ. 15 ರಿಂದ 24ರ ವರೆಗೆ ಪಾಡಿಗಾರ ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಅ.15 ರಿಂದ ಪ್ರತಿ ದಿನ ಬೆಳಿಗ್ಗೆ 05:30 ಸುಪ್ರಭಾತ ಚಂಡಿಕಾ ಯಾಗ ರಾತ್ರಿ 7.30 ಕ್ಕೆ ಮಹಾಪೂಜೆ, ಹೂವಿನ ಪೂಜೆ, ರಾತ್ರಿ 8.00ಕ್ಕೆ ಕಲ್ಪೋಕ್ತಪೂಜೆ, ನವರಾತ್ರಿ ಉತ್ಸವ, ರಥೋತ್ಸವ. ಅ.16 ರಂದು ಬೆಳಿಗ್ಗೆ 7ಕ್ಕೆ ಕದಿರು ಕಟ್ಟುವುದು, ಅ.19 ರಂದು ಲಲಿತಾ ಪಂಚಮಿ, ಅ.20 ರಂದು ಶಾರದಾ ಪೂಜೆ ಆರಂಭ, ಅ. 22ರಂದು […]

ಪಡುಬಿದ್ರೆ: ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

ಪಡುಬಿದ್ರೆ: ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅ. 15 ರಿಂದ 24 ರವರೆಗೆ ಪ್ರತೀ ವರ್ಷದಂತೆ ಭಕ್ತಾದಿಗಳ ಆಸ್ತಿಕರ ಸಹಕಾರದೊಂದಿಗೆ ವೈಭವದಿಂದ ನಡೆಯಲಿರುವುದು. ಭಕ್ತಾದಿಗಳು ಈ ಪರ್ವ ಕಾಲದಲ್ಲಿ ಶ್ರೀ ದೇವಿಯ ದರ್ಶನ ಮಾಡಿ ಶ್ರೀ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಿಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಾಣೆ ತಿಳಿಸಿದೆ. ನವರಾತ್ರಿ ಕಾರ್ಯಕ್ರಮಗಳು ಪ್ರತೀದಿನ ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ರಾತ್ರಿ ಗಂಟೆ 8.00ಕ್ಕೆ ನವರಾತ್ರಿ ಪೂಜೆ ನಡೆಯಲಿರುವುದು. 15/10/2023 […]

ಉಡುಪಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ಹುದ್ದೆಗಳಿಗೆ ಅ.19 ರಂದು ನೇರ ಸಂದರ್ಶನ

ಉಡುಪಿ: ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ನಮ್ಮ ಕ್ಲಿನಿಕ್‌ನಲ್ಲಿ ಖಾಲಿ ಇರುವ ಹೆರಿಗೆ ತಜ್ಞರು -03 ಹುದ್ದೆ (ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ), ಜಿಲ್ಲಾ ಆಸ್ಪತ್ರೆಯಲ್ಲಿ ಪೆಥಾಲಾಜಿಸ್ಟ್-1 ಹುದ್ದೆ, ವೈದ್ಯಾಧಿಕಾರಿಗಳು-05 ಹುದ್ದೆ (ಕುಂದಾಪುರದ ಖಾರ್ವಿಕೇರಿ ಹಾಗೂ ಕಾರ್ಕಳದ ಮರೀನಾಪುರದ ನಮ್ಮ ಕ್ಲಿನಿಕ್, ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಉಡುಪಿಯ ಜಿಲ್ಲಾ ಆಸ್ಪತ್ರೆ), ಆಡಿಯೋಮೆಟ್ರಿಕ್ ಅಸಿಸ್ಟೆಂಟ್ -01 ಹುದ್ದೆ, ಯಂಗ್ ಹಿಯರಿಂಗ್ […]

ಮುಕ್ತಾಂಜಲಿ ಡ್ಯಾನ್ಸ್ ಗ್ರೂಪ್ ಹಾಗೂ ಹೋಟೆಲ್ ಆಶ್ಲೇಷ್ ಪ್ರಸ್ತುತಪಡಿಸುತ್ತಿದೆ ದಾಂಡಿಯಾ ಮಸ್ತಿ-2023

ಮಣಿಪಾಲ: ಮುಕ್ತಾಂಜಲಿ ಡ್ಯಾನ್ಸ್ ಗ್ರೂಪ್ ಹಾಗೂ ಹೋಟೆಲ್ ಆಶ್ಲೇಷ್ ಸಹಯೋಗದಲ್ಲಿ ಎಲ್ಲಾ ವಯೋವರ್ಗದವರಿಗೆ ಅ.20 ರಂದು ಸಂಜೆ 5.30 ರಿಂದ 9.30 ರವರೆಗೆ ದಾಂಡಿಯಾ ಮಸ್ತಿ-2023 ಅನ್ನು ಆಶ್ಲೇಷ್ ಬಿಲ್ಡಿಂಗ್ ನ ವಜ್ರ ಹಾಲ್ ನಲ್ಲಿ ಆಯೋಜಿಸಲಾಗಿದೆ. ಟಿಕೆಟ್ ಗಳು ಲಭ್ಯವಿದೆ. ಸ್ಪರ್ಧೆಗಳು: ದಾಂಡಿಯಾ, ಘರ್ಬಾ ಅಥವಾ ಯಾವುದೇ ಸಾಂಪ್ರದಾಯಿಕ ನೃತ್ಯ( ಇಬ್ಬರು) ಅತ್ಯುತ್ತಮ ಉಡುಗೆ: ಮಹಿಳೆ, ಪುರುಷ, ಹುಡುಗ, ಹುಡುಗಿ, ಮಕ್ಕಳು( ಸಾಂಪ್ರದಾಯಿಕ ಉಡುಗೆ) ಅತ್ಯುತ್ತಮ ನೃತ್ಯ ಪಟು: ಮಹಿಳೆ ಮತ್ತು ಪುರುಷ, ಹುಡುಗ ಮತ್ತು […]