ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನ: ಇಂದು ಶರನ್ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ
ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅ.15 ಆದಿತ್ಯವಾರದಿಂದ ಅ.24 ಮಂಗಳವಾರದವರೆಗೆ ನಡೆಯಲಿದೆ. ಇದರ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ನಾಳೆ ಸಂಜೆ 6 ಗಂಟೆಗೆ ನಡೆಯಲಿದೆ. ಉದ್ಘಾಟಕರು: ಶ್ರೀಮತಿ ಕೆ. ಬೇಬಿ ಅಧ್ಯಕ್ಷರು ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷತೆ: ಶ್ರೀ ಎನ್. ರಘುರಾಮ ಮಧ್ಯಸ್ಥ ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ಮುಖ್ಯ ಅತಿಥಿಗಳು: ಶ್ರೀ ರಮೇಶ ಪೂಜಾರಿ ಉಪಾಧ್ಯಕ್ಷರು ನೀಲಾವರ ಗ್ರಾಮ ಪಂಚಾಯತ್ ಶ್ರೀ ಮಹೇಂದ್ರ ಕುಮಾರ್ ನಿಕಟಪೂರ್ವ ಅಧ್ಯಕ್ಷರು ಶ್ರೀಮತಿ ಸುಮ ದೇವಾಡಿಗ ಸದಸ್ಯರು, […]
5 ವರ್ಷಗಳ ಬಳಿಕ ತಮಿಳುನಾಡಿಗೆ ಆಗಮಿಸಿದ ಸೋನಿಯಾ ಗಾಂಧಿ: ಡಿಎಂಕೆ ಸಮಾವೇಶ
ಚೆನ್ನೈ (ತಮಿಳುನಾಡು): ಶುಕ್ರವಾರ ಚೆನ್ನೈಗೆ ಆಗಮಿಸಿದ್ದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಚೆನ್ನೈ ವಿಮಾನ ನಿಲ್ದಾಣ ಸ್ವಾಗತಿಸಿದರು.ಮಹಿಳಾ ಹಕ್ಕುಗಳ ಸಮಾವೇಶಕ್ಕಾಗಿ ತಮಿಳುನಾಡಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಆಗಮಿಸಿದ್ದು ಸಿಎಂ ಸ್ಟಾಲಿನ್ ಪುಸ್ತಕ ನೀಡಿ ಸ್ವಾಗತಿಸಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಟಿ.ಎನ್.ಕರುಣಾನಿಧಿ ಅವರ ಶತಮಾನೋತ್ಸವದ ನಿಮಿತ್ತ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಮಹಿಳಾ ತಂಡದ ವತಿಯಿಂದ ಇಂದು ನಂದನಂ ವೈಎಂಸಿಎ ಮೈದಾನದಲ್ಲಿ ‘ಮಹಿಳಾ ಹಕ್ಕುಗಳ ಸಮಾವೇಶ’ […]
ಅ.16 ಕ್ಕೆ ಮೈಸೂರು ದಸರಾ ಚಲನಚಿತ್ರೋತ್ಸವ ಉದ್ಘಾಟನೆ : ನಟಿ ಮಿಲನ ನಾಗರಾಜ್ರಿಂದ
ಮೈಸೂರು: ಮೈಸೂರು ದಸರಾ ಚಲನಚಿತ್ರೋತ್ಸವ ಉಪಸಮಿತಿಯಿಂದ ಅಕ್ಟೋಬರ್ 16 ರಂದು ಬೆಳಗ್ಗೆ 9:30ಕ್ಕೆ ನಗರದ ಮಾಲ್ ಆಫ್ ಮೈಸೂರ್ನ ಐನಾಕ್ಸ್ನಲ್ಲಿ ಚಲನಚಿತ್ರೋತ್ಸವನ್ನು ಚಂದನವನದ ನಟಿ ಮಿಲನ ನಾಗರಾಜ್ ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 16 ರಂದು ಬೆಳಗ್ಗೆ 9:30ಕ್ಕೆ ನಗರದ ಮಾಲ್ ಆಫ್ ಮೈಸೂರ್ನ ಐನಾಕ್ಸ್ನಲ್ಲಿ ಚಲನಚಿತ್ರೋತ್ಸವ ಆರಂಭಗೊಳ್ಳಲಿದ್ದು ನಟಿ ಮಿಲನ ನಾಗರಾಜ್ ಉದ್ಘಾಟಿಸಲಿದ್ದಾರೆ. ದಸರಾ ಪ್ರಾಯೋಜಿತರಿಗೆ ಡಿಸಿಯಿಂದ ಧನ್ಯವಾದ: ದಸರಾ ಹಿನ್ನೆಲೆಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರುದಸರಾ ಮಹೋತ್ಸವದ ಆಚರಣೆಯಲ್ಲಿ ಸುರಕ್ಷತೆಯ ಕಡೆಗೂ ಗಮನವಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಅರಮನೆ ಮಂಡಳಿ […]
ಬಾಂಬೆ ಹೈಕೋರ್ಟ್ : ಮಹಿಳೆಯರು ಶಾರ್ಟ್ ಸ್ಕರ್ಟ್ ಧರಿಸಿ ನೃತ್ಯ ಮಾಡುವುದು ಅಶ್ಲೀಲವಲ್ಲ
ನಾಗ್ಪುರ (ಮಹಾರಾಷ್ಟ್ರ) : ಮಹಿಳೆಯರು ಶಾರ್ಟ್ ಸ್ಕರ್ಟ್ ಧರಿಸಿ ಪ್ರಚೋದನಾತ್ಮಕವಾಗಿ ನೃತ್ಯ ಮಾಡುವುದು ಅಶ್ಲೀಲವಲ್ಲ ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಅಭಿಪ್ರಾಯಪಟ್ಟಿದೆ.ಈ ಸಂಬಂಧ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನಾಗ್ಪುರ ಪೀಠದ ನ್ಯಾಯಮೂರ್ತಿಗಳಾದ ಜಸ್ಟೀಸ್ ವಾಲ್ಮೀಕಿ ಮೆಂಗಸ್ ಹಾಗೂ ಜಸ್ಟೀಸ್ ವಿನಯ್ ಜೋಶಿ ಅವರಿದ್ದ ಪೀಠ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿದೆ. ಮತ್ತು ಮಹಿಳೆಯರು ಶಾರ್ಟ್ ಸ್ಕರ್ಟ್ ಧರಿಸುವುದು ಸಾಮಾನ್ಯ. ಆದ್ದರಿಂದ ಶಾರ್ಟ್ ಸ್ಕರ್ಟ್ ಧರಿಸಿ ನೃತ್ಯ ಮಾಡುವುದು ಆಶ್ಲೀಲತೆ ಎಂದು ಕರೆಯಲಾಗುವುದಿಲ್ಲ ಎಂದು ಬಾಂಬ್ […]
ಐಎಂಎಫ್ : ಭಾರತದಲ್ಲಿ ಸ್ಥೂಲ ಆರ್ಥಿಕ ವಾತಾವರಣ ಸಮೃದ್ಧವಾಗಿದೆ
ಭಾರತವು ಡಿಜಿಟಲೀಕರಣ ಮತ್ತು ಮೂಲಸೌಕರ್ಯದಲ್ಲಿ ಬಹಳ ಪ್ರಭಾವಶಾಲಿ ದಾಪುಗಾಲುಗಳನ್ನು ಇಡುತ್ತಿದೆ.ಮರಾಕೆಚ್, ಮೊರಾಕೊ: ಭಾರತದಲ್ಲಿನ ಒಟ್ಟಾರೆ ಆರ್ಥಿಕ ವಾತಾವರಣ ಸಮೃದ್ಧವಾಗಿದೆ. ಹೀಗಾಗಿ ಭಾರತ ವ್ಯಾಪಾರ ಪರಿಸರವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಐಎಂಎಫ್ ಹೇಳಿದೆ. ಇದು ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ವೇಗವಾಗಿ ಸಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಹೇಳಿದೆ. ಆರ್ಥಿಕ ಬೆಳವಣಿಗೆಯನ್ನು ಎತ್ತಿ ಹಿಡಿಯಲು ಭಾರತದಲ್ಲಿ ಯಾವ ರೀತಿಯ ನೀತಿ ಮಧ್ಯಸ್ಥಿಕೆಗಳ ಅಗತ್ಯವಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸನ್, ಭಾರತ ದೇಶವು ರಚನಾತ್ಮಕ […]