ಉಡುಪಿ: ಬಾಲಮಂದಿರದಿಂದ ಬಾಲಕ ನಾಪತ್ತೆ
ಉಡುಪಿ: ನಗರದ ಮಣಿಪಾಲ ಸಗ್ರಿಯ ಸರಕಾರಿ ಬಾಲಕರ ಬಾಲ ಮಂದಿರದಲ್ಲಿ ವಾಸವಿದ್ದ ಸುಮಾರು 14- 16 ವರ್ಷದ ಶಬೀರ್ ಎಂಬ ಬಾಲಕನು ಸೆಪ್ಟಂಬರ್ 1 ರಿಂದ ನಾಪತ್ತೆಯಾಗಿರುತ್ತಾನೆ. ಎಣ್ಣೆಗಪ್ಪು ಮೈಬಣ್ಣ ಹೊಂದಿದ್ದು, ಹಿಂದಿ ಬಾಷೆ ಮಾತನಾಡುತ್ತಾನೆ. ಇವನ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ಪೊಲೀಸ್ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444, ಪಿ.ಐ ಮೊ.ನಂ: 9480805458, ಪಿ.ಎಸ್.ಐ ಮೊ.ನಂ: 8277988949, ಮಹಿಳಾ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2525599 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ […]
ಬ್ರಹ್ಮಾವರ: ಮಹೇಶ್ ಹಾಸ್ಪಿಟಲ್ ನಲ್ಲಿ ಅಕೌಂಟೆಂಟ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ
ಬ್ರಹ್ಮಾವರ: ಇಲ್ಲಿನ ಪ್ರಸಿದ್ದ ಮಹೇಶ್ ಹಾಸ್ಪಿಟಲ್ ನಲ್ಲಿ ಅಕೌಂಟೆಂಟ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದು, ಕಾಮರ್ಸ್ ಪದವೀಧರರಾಗಿದ್ದು 1 ರಿಂದ 2 ವರ್ಷದ ಅನುಭವ ಇರಬೇಕು. ತಂಡದೊಂದಿಗೆ ಸಹಕಾರದಿಂದ ಕೆಲಸ ಮಾಡಲು ಸಮರ್ಥರಿರಬೇಕು. ಆಸಕ್ತರು ರೆಸ್ಯೂಮ್ ಅನ್ನು [email protected]ಗೆ ಕಳುಹಿಸಿಕೊಡಬಹುದು.
ಅಂಗಡಿ ಮುಂಗ್ಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ
ಉಡುಪಿ: ರಾಜ್ಯ ಸರ್ಕಾರದ ಸುತ್ತೋಲೆ ಹಾಗೂ ಅಧಿಸೂಚನೆಯಂತೆ ಕನ್ನಡ ಭಾಷೆಯನ್ನು ರಾಜ್ಯದ ಎಲ್ಲಾ ಹಂತಗಳಲ್ಲಿ ಸಂಪೂರ್ಣವಾಗಿ ಅನುಷ್ಠಾನ ಜಾರಿಗೊಳಿಸುವಂತೆ ಸೂಚಿಸಲಾಗಿದ್ದು, ಅದರನ್ವಯ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತ್, ನಗರಸಭೆ, ಪಟ್ಟಣ ಪಂಚಾಯತ್ ಎಲ್ಲಾ ಅಧೀನ ಕಛೇರಿ, ಅಂಗಡಿ ಮುಂಗ್ಗಟ್ಟು, ಮಾರಾಟ ಮಳಿಗೆ, ಹೊಟೇಲ್, ಬ್ಯಾಂಕ್, ಕಂಪೆನಿಗಳಲ್ಲಿ ನಾಮಫಲಕಗಳನ್ನು ಕನ್ನಡದಲ್ಲಿ ಹೆಚ್ಚು ಎದ್ದು ಕಾಣುವ ಹಾಗೆ ಪ್ರದರ್ಶಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಒಂದು ಮಿಲಿಯನ್ ನಾಗರಿಕರಿಗೆ ಇಸ್ರೇಲ್ ಅಲ್ಟಿಮೇಟಮ್: ಗಾಜಾದ ದಕ್ಷಿಣಕ್ಕೆ ಸ್ಥಳಾಂತರಿಸಲು 24 ಗಂಟೆ ಕಾಲಾವಕಾಶ
ಟೆಲ್ ಅವೀವ್: 24 ಗಂಟೆಗಳ ಒಳಗೆ ಒಂದು ಮಿಲಿಯನ್ ನಾಗರಿಕರು ಗಾಜಾ ಪಟ್ಟಣದ ದಕ್ಷಿಣಕ್ಕೆ ಸ್ಥಳಾಂತರಿಸಿಕೊಳ್ಳುವಂತೆ ಇಸ್ರೇಲಿನ ಮಿಲಿಟರಿ ಹೇಳಿದೆ. ಇಸ್ರೇಲ್ ಶೀಘ್ರದಲ್ಲೇ ತನ್ನ ಉತ್ತರ ಭಾಗದಿಂದ ಮಾರಣಾಂತಿಕ ನೆಲದ ಆಕ್ರಮಣವನ್ನು ಪ್ರಾರಂಭಿಸಬಹುದು ಎಂಬ ಊಹಾಪೋಹವನ್ನು ಇದು ಸೃಷ್ಟಿಸಿದೆ. ಹಮಾಸ್ ಕಾರ್ಯಕರ್ತರು ಗಾಜಾ ನಗರದ ಕೆಳಗಿರುವ ಸುರಂಗಗಳಲ್ಲಿ ಅಡಗಿರುವ ಕಾರಣ ಅವರ ಸ್ಥಳಾಂತರ ಆದೇಶವಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. “ಗಾಜಾದ ನಿವಾಸಿಗಳೇ, ನಿಮ್ಮ ವೈಯಕ್ತಿಕ ಮತ್ತು ನಿಮ್ಮ ಕುಟುಂಬಗಳ ಸುರಕ್ಷತೆಗಾಗಿ ದಕ್ಷಿಣಕ್ಕೆ ತೆರಳಿ. ನಿಮ್ಮನ್ನು ಮಾನವ […]
ಅಲಿಪ್ತ ನೀತಿ ಅಂತರಾಷ್ಟ್ರೀಯ ಸಂಬಂಧಗಳ ಜಗತ್ತಿಗೆ ಭಾರತ ನೀಡಿದ ಕೊಡುಗೆ: ಪ್ರೊ.ಕೆ.ಪಿ.ವಿಜಯಲಕ್ಷ್ಮಿ
ಮಣಿಪಾಲ: ಅಂತರಾಷ್ಟ್ರೀಯ ಸಂಬಂಧಗಳ ಕುರಿತು ತನ್ನದೇ ಆದ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಮಾಹೆಯ ಜಿಯೋಪಾಲಿಟಿಕ್ಸ್ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಪಿ.ವಿಜಯಲಕ್ಷ್ಮಿ ಹೇಳಿದರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಆಶ್ರಯದಲ್ಲಿ ನಡೆದ ‘ಟ್ರೇಸಿಂಗ್ ದಿ ಟ್ರಾಜೆಕ್ಟರಿ: ಇಂಟರ್‌ನ್ಯಾಷನಲ್ ರಿಲೇಶನ್ಸ್ ಫ್ರಂ ಇಂಡಿಯನ್ ಪ್ರಾಸ್ಪೆಕ್ಟಿವ್’ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು. ‘ನಾನ್-ವೆಸ್ಟರ್ನ’ ಎಂದರೆ ಪಾಶ್ಚಿಮಾತ್ಯ ವಿರೋಧಿ ಎಂದಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾ, ಅಲಿಪ್ತ ನೀತಿಯು ಅಂತರಾಷ್ಟ್ರೀಯ ಸಂಬಂಧಗಳ(ಐಆರ್) ಜಗತ್ತಿಗೆ ಭಾರತದ ಪ್ರಮುಖ ಕೊಡುಗೆಯಾಗಿದೆ […]