ಬೆಂಗಳೂರು : ಜ್ಯುವೆಲರಿ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ
ಬೆಂಗಳೂರು: ಕಳೆದ ವಾರ ನಗರದ ಹಲವು ಉದ್ಯಮಿಗಳ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದೂ ಸಹ ತಮ್ಮ ಪರಿಶೀಲನೆ ಮುಂದುವರೆಸಿದ್ದಾರೆ.ನಗರದ ಸುಮಾರು ಹತ್ತಕ್ಕೂ ಅಧಿಕ ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.ಬೆಂಗಳೂರಲ್ಲಿ ಉದ್ಯಮಿಗಳ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ, ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ. ಆದಾಯ ತೆರಿಗೆ ವಂಚನೆ ಆರೋಪ ಕಂಡು ಬಂದ ಹಿನ್ನೆಲೆಯಲ್ಲಿ ಚಿನ್ನ ಗಿರವಿ ಮತ್ತು ಖರೀದಿ ಮಾಡುವ […]
ಶ್ರೀಲಂಕಾ ವಿರುದ್ಧದ ಗೆಲುವು ಮತ್ತು ಮೊಹಮ್ಮದ್ ರಿಜ್ವಾನ್ ಟ್ವೀಟ್ : ಕ್ರಿಕೆಟ್ ವಿಶ್ವಕಪ್
ಹೈದರಾಬಾದ್/ನವದೆಹಲಿ: ಮಂಗಳವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಗೆಲುವಿನ ಶತಕ ಗಳಿಸಿದ ನಂತರ ಮುಹಮ್ಮದ್ ರಿಜ್ವಾನ್ ಅವರು ಗಾಜಾ ಬೆಂಬಲಿಸುವ ವಿವಾದಾತ್ಮಕ ಎಕ್ಸ್ ಪೋಸ್ಟ್ ಮಾಡಿದ್ದಾರೆ.ವಿವಾದಾತ್ಮಕ ಎಕ್ಸ್ ಪೋಸ್ಟ್‌ನಲ್ಲಿ, ಶ್ರೀಲಂಕಾ ವಿರುದ್ಧದ ಹೈದರಾಬಾದ್ ಪಂದ್ಯದ ಸ್ಟಾರ್ ಪರ್ಫಾರ್ಮರ್ ಮುಹಮ್ಮದ್ ರಿಜ್ವಾನ್ ಅವರು, ಈ ಗೆಲುವು ಗಾಜಾದಲ್ಲಿರುವ ನಮ್ಮ ಸಹೋದರ ಹಾಗೂ ಸಹೋದರಿಯರಿಗೆ ಅರ್ಪಿಸುತ್ತೇನೆ. ಹಲವಾರು ಜನರನ್ನು ಕೊಂದ ಇಸ್ರೇಲ್ ಮೇಲಿನ ಹಮಾಸ್ ಮುಷ್ಕರವು ವಿಶ್ವ ರಾಜಕೀಯದಲ್ಲಿ ಇನ್ನೂ ಸಕ್ರಿಯವಾಗಿದೆ. ಈ ಹಿಂದೆ ಭಾರತ […]
ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಧಕ್ಕೆಯುಂಟಾಗದಂತೆ ಪಟಾಕಿ ಮಳಿಗೆ ತೆರೆಯಲು ಜಿಲ್ಲಾಧಿಕಾರಿ ಸೂಚನೆ
ಉಡುಪಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಸಂಚಾರ ವ್ಯವಸ್ಥೆಗೆ ಧಕ್ಕೆಯುಂಟಾಗದಂತೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಸೂಕ್ತ ಸ್ಥಳವನ್ನು ಗುರುತಿಸಿ, ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚಿಸಿದರು. ಅವರು ಇತ್ತೀಚೆಗೆ ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಲು […]
ಇಸ್ರೇಲ್ ನಲ್ಲಿ ಎಲ್ಲ ಸೂಪರ್ ಚಾರ್ಜಿಂಗ್ ಸ್ಟೇಷನ್ ಗಳು ಉಚಿತ ಬಳಕೆಗೆ ಲಭ್ಯ ಎಂದ ಟೆಸ್ಲಾ ದಿಗ್ಗಜ
ಕ್ಯಾಲಿಫೋರ್ನಿಯಾ: ಟೆಸ್ಲಾ ಮಾಲೀಕ ಏಲಾನ್ ಮಸ್ಕ್, ಇಸ್ರೇಲ್‌ನಲ್ಲಿ ಬಳಕೆದಾರರು ತಮ್ಮ ವಾಹನಗಳನ್ನು ಉಚಿತವಾಗಿ ಚಾರ್ಜ್ ಮಾಡಬಹುದು ಎಂದು X ನಲ್ಲಿ ತಿಳಿಸಿದ್ದಾರೆ. ಇಸ್ರೇಲ್-ಹಮಾಸ್ ಯುದ್ದದ ಉದ್ವಿಗ್ನತೆಯ ನಡುವೆ ಪ್ರಯಾಣವನ್ನು ಸುಲಭಗೊಳಿಸಲು ಯು.ಎಸ್ ವಾಹನ ತಯಾರಕ ಎಲ್ಲಾ ಸೂಪರ್ಚಾರ್ಜರ್ ಸ್ಟೇಷನ್ ಗಳನ್ನು ಬಳಕೆದಾರರಿಗೆ ಮುಕ್ತವಾಗಿಸಿದ್ದಾರೆ. ಟೆಸ್ಲಾ ಇಸ್ರೇಲ್‌ನಲ್ಲಿ 22 ಸೂಪರ್‌ಚಾರ್ಜರ್ ಸ್ಟೇಷನ್‌ಗಳನ್ನು ಹೊಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಸೂಪರ್‌ಚಾರ್ಜರ್‌ಗಳು ಟೆಸ್ಲಾದ ಅತ್ಯಂತ ವೇಗದ ಚಾರ್ಜಿಂಗ್ ಸ್ಟೇಷನ್‌ಗಳಾಗಿದ್ದು ಅದು 250 kW ವರೆಗೆ ಶಕ್ತಿಯನ್ನು ಒದಗಿಸುತ್ತದೆ. ಟೆಸ್ಲಾದ ಎಲೆಕ್ಟ್ರಿಕ್ ವಾಹನಗಳು […]
ದೊಡ್ಡಣ್ಣಗುಡ್ಡೆ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅ.15 ರಿಂದ 24 ರವರೆಗೆ ನವರಾತ್ರಿ ಉತ್ಸವ
ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಅ.15 ರಿಂದ 24ರ ವಿಜಯದಶಮಿಯ ಪರ್ವಕಾಲದವರಿಗೆ ನವರಾತ್ರಿ ಮಹೋತ್ಸವವು ಬಹು ವಿಜೃಂಭಣೆಯಿಂದ ನಿತ್ಯ ಅನ್ನಸಂತರ್ಪಣೆಯೊಂದಿಗೆ ನೆರವೇರಲಿದೆ. ಈ ಮಹಾನ್ ಉತ್ಸವದಲ್ಲಿ ಸಾರ್ವಜನಿಕರೆಲ್ಲರೂ ಭಾಗವಹಿಸಿ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಧರ್ಮದರ್ಶಿ ರಮಾನಂದ ಗುರೂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.