ಡೆಪ್ಯುಟಿ ಗವರ್ನರ್ ಟಿ ರಬಿ ಶಂಕರ್ : ಆರ್‌ಬಿಐ ತಂತ್ರಜ್ಞಾನದಲ್ಲಿ ಆಸಕ್ತಿ ತೋರಿಸುತ್ತಿದೆ

ಬೆಂಗಳೂರು : ತಂತ್ರಜ್ಞಾನವು ಮಾನವ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದ್ದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಹ ಅದರಲ್ಲಿ ಆಸಕ್ತಿ ತೋರುತ್ತಿದೆ ಎಂದು ಕೇಂದ್ರ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್ ಟಿ ರಬಿ ಶಂಕರ್ (T Rabi Sankar) ಬುಧವಾರ ಹೇಳಿದ್ದಾರೆ. ಹ್ಯಾಕಥಾನ್‌ನ ಎರಡನೇ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ಡೆಪ್ಯುಟಿ ಗವರ್ನರ್ ಟಿ ರಬಿ ಶಂಕರ್, ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ಎಲ್ಲಾ ಕೇಂದ್ರೀಯ ಬ್ಯಾಂಕ್‌ಗಳು, ಸರ್ಕಾರಗಳು ಮತ್ತು ಇತರ ಅಧಿಕಾರಿಗಳು ಇದ್ದಕ್ಕಿದ್ದಂತೆ ಯಾಕೆ ತಂತ್ರಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ […]

17 ಮಂದಿ ನಾಪತ್ತೆ: ಹಮಾಸ್​ ದಾಳಿಯಲ್ಲಿ 22 ಅಮೆರಿಕನ್ನರು ಬಲಿ

ವಾಷಿಂಗ್ಟನ್(ಅಮೆರಿಕ): ಇಸ್ರೇಲ್​ ಮೇಲೆ ಹಮಾಸ್​ನ ದಾಳಿಯಿಂದ ಕೇವಲ ಇಸ್ರೇಲಿಯನ್ನರು ಮಾತ್ರವಲ್ಲದೇ, ಇಸ್ರೇಲ್​ನಲ್ಲಿ ನೆಲೆಸಿದ್ದ ಇತರ ದೇಶದ ಪ್ರಜೆಗಳು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಹೌದು ಈ ಕುರಿತು ಅಮೆರಿಕವು ತನ್ನ ದೇಶದ ಪ್ರಜೆಗಳು ಪ್ರಾಣ ಕಳೆದುಕೊಂಡಿರುವುದನ್ನು ತಿಳಿಸಿದೆ. ಅಮೆರಿಕ ಶ್ವೇತಭವನವು ಇಸ್ರೇಲ್​ ಹಮಾಸ್​​ ದಾಳಿಯಲ್ಲಿ 22 ಅಮೆರಿಕನ್ನರು ಪ್ರಾಣ ಕಳೆದುಕೊಂಡಿದ್ದು, 17 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಬುಧವಾರ ವರದಿ ಮಾಡಿದೆ. ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.ಅಮೆರಿಕ ಶ್ವೇತಭವನವು ಇಸ್ರೇಲ್ ಮೇಲೆ ಹಮಾಸ್​ ನಡೆಸಿರುವ […]

ಫೋರ್ಬ್ಸ್ ಟಾಪ್ 100 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಮುಖೇಶ್ ಅಂಬಾನಿ; ಎರಡನೇ ಸ್ಥಾನದಲ್ಲಿ ಗೌತಮ್ ಅದಾನಿ

ನವದೆಹಲಿ: ಭಾರತದ 100 ಶ್ರೀಮಂತ ವ್ಯಕ್ತಿಗಳ 2023 ರ ಫೋರ್ಬ್ಸ್ ಶ್ರೇಯಾಂಕದಲ್ಲಿ ಮುಖೇಶ್ ಅಂಬಾನಿ ಮತ್ತೊಮ್ಮೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ದೇಶದ ಅಗ್ರ 100 ಶ್ರೀಮಂತರ ಒಟ್ಟು ಸಂಪತ್ತು ಈ ವರ್ಷ $799 ಶತಕೋಟಿಯಲ್ಲಿ ಬದಲಾಗದೆ ಉಳಿದಿದೆ. ಭಾರತದ ಪಟ್ಟಿಯಲ್ಲಿ ವಿವಿಧ ಕ್ಷೇತ್ರಗಳ ಮೂರು ಹೊಸ ಹೆಸರು ಸೇರ್ಪಡೆಯಾಗಿದೆ. ಟಾಪ್ 10 ಶ್ರೀಮಂತರು 1) ಮುಖೇಶ್ ಅಂಬಾನಿ- $92 ಬಿಲಿಯನ್ 2) ಗೌತಮ್ ಅದಾನಿ- $68 ಬಿಲಿಯನ್ 3) ಶಿವ ನಾಡರ್- 29.3 ಬಿಲಿಯನ್ 4) ಸಾವಿತ್ರಿ […]

ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್ : ನೀಟ್ ಪರೀಕ್ಷೆಗೆ ಅರ್ಹತಾ ಅಂಕ ಶೂನ್ಯ ವಿಚಾರ

ಬೆಂಗಳೂರು: 2023 ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ವೈದ್ಯಕೀಯ ಹಾಗೂ ದಂತವೈದ್ಯಕೀಯ ಪಿ.ಜಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತಾ ಅಂಕವನ್ನು ಶೂನ್ಯಕ್ಕೆ ಇಳಿಕೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಹುಬ್ಬಳ್ಳಿ ಮೂಲದ ವೈದ್ಯ ಹಾಗೂ ವಕೀಲ ಡಾ. ವಿನೋದ್ ಜಿ. ಕುಲಕರ್ಣಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ […]

ಮಾಜಿ ಆಲ್​ರೌಂಡರ್​ ಸುರೇಶ್​ ರೈನಾ ಅವರಿಂದ ಭಗವಾನ್ ಕೇದಾರನಾಥ್​ನ ದರ್ಶನ

ರುದ್ರಪ್ರಯಾಗ, ಉತ್ತರಾಖಂಡ್​: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್​ರೌಂಡರ್​ ಸುರೇಶ್ ರೈನಾ ಬುಧವಾರ ಬದ್ರಿವಿಶಾಲ್ ಮತ್ತು ಬಾಬಾ ಕೇದಾರನಾಥ್​ಗೆ ಭೇಟಿ ನೀಡಿ ದರ್ಶನ ಪಡೆದರು.ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಬದ್ರಿವಿಶಾಲ್‌ಗೆ ಭೇಟಿ ನೀಡಿದ ನಂತರ ಭಗವಾನ್ ಕೇದಾರನಾಥ್​ಗೆ ಭೇಟಿ ನೀಡಿ ದರ್ಶನ ಪಡೆದರು. ಮೊದಲನೆಯದಾಗಿ ಅವರು ಬೆಳಗ್ಗೆ ಬದ್ರಿವಿಶಾಲ್​ಗೆ ಭೇಟಿ ನೀಡಿದರು. ಇದರ ನಂತರ ಅವರು ಬಾಬಾ ಕೇದಾರನ ದರ್ಶನಕ್ಕಾಗಿ ಕೇದಾರನಾಥ ಧಾಮವನ್ನು ತಲುಪಿದರು.ಇವರೊಂದಿಗೆ ಶಾಸಕ ಉಮೇಶ್ ಕುಮಾರ್ ಕೂಡ ಉಪಸ್ಥಿತರಿದ್ದರು. ಇದಾದ ನಂತರ ಸುರೇಶ್ ರೈನಾ […]