ಮರುಕಳಿಸಲಿದೆ ಉಚ್ಚಿಲ ದಸರಾ ವೈಭವ: ಅ.15 ರಿಂದ 24 ರವರೆಗೆ ನವರಾತ್ರಿ ಉತ್ಸವ
ಕಾಪು: ಇಲ್ಲಿನ ಸುಪ್ರಸಿದ್ದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅ.15 ರಿಂದ 24 ರವರೆಗೆ ನವರಾತ್ರಿ ಉತ್ಸವ ಮತ್ತು ಉಚ್ಚಿಲ ದಸರಾ ನಡೆಸಲು ದ.ಕ ಮೊಗವೀರ ಮಹಾಜನ ಸಂಘ, ಕ್ಷೇತ್ರದ ಆಡಳಿತ ಸಮಿತಿ ಮತ್ತು ಕ್ಷೇತ್ರದ ಭಕ್ತರ ಬಳಗ ನಿರ್ಧರಿಸಿದೆ ಎಂದು ದ.ಕ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ.ಜಿ.ಶಂಕರ್ ತಿಳಿಸಿದರು. ಉಚ್ಚಿಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನವರಾತ್ರಿ ಮತ್ತು ದಸರಾ ಪ್ರಯುಕ್ತ ಪ್ರತಿದಿನ ಬೆಳಿಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ, […]
ರೋಹಿತ್ ಬಿರುಗಾಳಿ ಶತಕ, ವಿರಾಟ್ ಕ್ಲಾಸ್ ಬ್ಯಾಟಿಂಗ್ಗೆ ಮಂಡಿಯೂರಿದ ಅಫ್ಘಾನಿಸ್ತಾನ : ಭಾರತಕ್ಕೆ 2ನೇ ಗೆಲುವು
ನವದೆಹಲಿ: ಹಿಟ್ಮ್ಯಾನ್ ರೋಹಿತ್ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ನಾಯಕ ಹಸ್ಮತುಲ್ಲಾ ಶಾಹಿದಿ, ಅಜ್ಮತುತ್ತಾ ಒಮರ್ಜಾಯಿ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 272 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಭಾರತ ಸೊಗಸಾದ ಆಟವಾಡಿ 35 ಓವರ್ಗಳಲ್ಲಿ 2 ವಿಕೆಟ್ಗೆ 272 ರನ್ ಗಳಿಸಿತು.ಅರುಣ್ ಜೇಟ್ಲಿ ಮೈದಾನದಲ್ಲಿಂದು […]
ಶಿಕ್ಷಣ ಸಚಿವ ಮಧು ಬಂಗಾರಪ್ಪ : ಸರ್ಕಾರಿ ಶಾಲೆಗಳಿಗೆ 20 ಸಾವಿರ ಶಿಕ್ಷಕರ ನೇಮಕಾತಿಗೆ ನಿರ್ಧಾರ
ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಿಗೆ 20 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.ನ್ಯಾಯಾಲಯದ ತೀರ್ಪು ಹೊರಬಂದ ನಂತರ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಕಾರ್ಯಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ವಿಷಯ ತಿಳಿಸಿದರು. ಈ ನೇಮಕಾತಿಗೆ ನ್ಯಾಯಾಲಯ ಇನ್ನೊಂದು ತಿಂಗಳಲ್ಲಿ ಅನುಮತಿ ನೀಡಿ ಆದೇಶ ಪ್ರಕಟಿಸುವ ಸಾಧ್ಯತೆಗಳಿವೆ. 20 ಸಾವಿರ ಶಿಕ್ಷಕರನ್ನು ನೇಮಕ […]
ಶಿರ್ವ: ಯುವತಿ ನಾಪತ್ತೆ
ಶಿರ್ವ: ಇಲ್ಲಿನ ಮೂಡುಬೆಳ್ಳೆ ಕೊಂಗಿಬೈಲು ನಿವಾಸಿ ವಿನಿತಾ(22) ಅ.9 ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಅಕ್ಕನಲ್ಲಿ ಉಡುಪಿಗೆ ಹೋಗಿ ಬರುವುದಾಗಿ ತಿಳಿಸಿದ್ದು, ತನ್ನ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದಾರೆ. ಬಿ.ಕಾಂ ಪದವೀಧರೆಯಾಗಿರುವ ಈಕೆ ಉಡುಪಿಯ ಎಂಜಿಎಂ ಕಾಲೇಜಿನ ಸಮೀಪ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಕಳೆದ ನಾಲ್ಕು ತಿಂಗಳಿಂದ ಉದ್ಯೋಗದಲ್ಲಿದ್ದು, ವಾರದ ಹಿಂದೆ ಉದ್ಯೋಗ ತ್ಯಜಿಸಿದ್ದರು ಎನ್ನಲಾಗಿದೆ. ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸ್ನೇಹಿತರಿಗೂ ಸಂಬಂಧಿಕರಿಗೂ ಯಾವುದೇ ಮಾಹಿತಿ ಇಲ್ಲ. ಆಕೆಯ ಹುಡುಕಾಟಕ್ಕೆ ನಡೆಸಿದ […]
ಇಸ್ರೇಲ್ ನಲ್ಲಿರುವ ಕುಟುಂಬ ಸದಸ್ಯರ ಮಾಹಿತಿಗಾಗಿ ಸಹಾಯವಾಣಿ ಸಂಪರ್ಕಿಸಿ: ಯಶ್ ಪಾಲ್ ಸುವರ್ಣ
ಉಡುಪಿ: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಯವರ ರಕ್ಷಣೆಗಾಗಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ಇಸ್ರೇಲ್‌ನಲ್ಲಿರುವ ಕುಟುಂಬ ಸದಸ್ಯರು ಸಂಪರ್ಕಕ್ಕೆ ಸಿಗದಿದ್ದಲ್ಲಿ ಅಥವಾ ಯುದ್ಧದಿಂದಾಗಿ ಸಂಕಷ್ಟದಲ್ಲಿರುವ ಕುಟುಂಬಿಕರಿಗೆ ತಕ್ಷಣದ ನೆರವಿನ ಅಗತ್ಯವಿದ್ದಲ್ಲಿ ಕೂಡಲೇ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆಮಾಡಿ ಅಥವಾ ವಾಟ್ಸ್ಯಾಪ್ ಸಂಖ್ಯೆಗೆ ಸಂದೇಶ ಕಳುಹಿಸಿ ಅಗತ್ಯ ನೆರವು ಪಡೆಯಬಹುದು ಎಂದು ಯಶಪಾಲ್ ಸುವರ್ಣ ತಿಳಿಸಿದ್ದಾರೆ. ಮೊಬೈಲ್ – +919964023344, +919110882491 ವಾಟ್ಸ್ಯಾಪ್ – +919740217378 ಇಮೈಲ್ ಐಡಿ: [email protected]