ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ : ನಾಳೆ ನಿಮ್ಮ ಮೊಬೈಲ್ ನಲ್ಲಿ ಪ್ರತಿಧ್ವನಿಸಲಿದೆ ಎಚ್ಚರಿಕೆ ಕರೆಗಂಟೆ

ಬೆಂಗಳೂರು: ರಾಜ್ಯದಲ್ಲಿ ದೂರಸಂಪರ್ಕ ಇಲಾಖೆ (ಸಿ-ಡಾಟ್‌) ಸೆಲ್‌ ಬ್ರಾಡ್‌ ಕಾಸ್ಟಿಂಗ್‌ ಮೂಲಕ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ತುರ್ತು ಎಚ್ಚರಿಕೆ ವ್ಯವಸ್ಥೆಯ ಪರೀಕ್ಷೆ ನಡೆಯಲಿದೆ ಮುಂಬರುವ ದಿನದಲ್ಲಿ ಸಂಭವಿಸುವ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಟೆಲಿಕಮ್ಯುನಿಕೇಶನ್‌ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ಸಕಾಲಿಕ ಮುನ್ನೆಚ್ಚರಿಕೆ (ವಿಭಿನ್ನ ಧ್ವನಿ ಮತ್ತು ಕಂಪನ) ನೀಡಲು ಮುಂದಾಗಿದೆ. ಈಗಾಗಲೇ ಮೊಬೈಲ್‌ ಬಳಕೆದಾರರಿಗೆ ಸಂದೇಶಗಳು ರವಾನೆಯಾಗಿದೆ. ಫೋನ್‌ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್‌ ಶಬ್ದದೊಂದಿಗೆ ಸಂದೇಶ ಫ್ಲಾಶ್‌ ಆಗಲಿದೆ. ಬಳಕೆದಾರರು […]

ಶೇ 6.1 ರಿಂದ 6.3ಕ್ಕೆ ಜಿಡಿಪಿ ಅಂದಾಜಿಸಿದ ಐಎಂಎಫ್​ : ಏರುಗತಿಯಲ್ಲಿ ಭಾರತದ ಆರ್ಥಿಕತೆ

ನವದೆಹಲಿ : ಆರ್ಥಿಕ ಪ್ರಗತಿ ಸಾಧಿಸುವಲ್ಲಿ ವಿಶ್ವ ಪ್ರಬಲ ರಾಷ್ಟ್ರಗಳನ್ನು ಹಿಂದಿಕ್ಕಿ ಮುಂಚೂಣಿಯಲ್ಲಿ ಸಾಗುತ್ತಿರುವ ಭಾರತ, ಪ್ರಸ್ತುತ ವರ್ಷದಲ್ಲಿ ತನ್ನ ಹಿಂದಿನ ಅಂದಾಜಿಗಿಂತ ಹೆಚ್ಚಿನ ದರದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್​) ತನ್ನ ವರದಿಯಲ್ಲಿ ತಿಳಿಸಿದೆ.ಭಾರತವು ಪ್ರಸ್ತುತ ವರ್ಷದಲ್ಲಿ ಶೇ. 6.1ರಷ್ಟು ಆರ್ಥಿಕ ಪ್ರಗತಿ ಹೊಂದುವುದಾಗಿ ಅಂದಾಜಿಸಲಾಗಿತ್ತು. ಆದರೆ ಮೀರಿ ಈ ಬಾರಿ ಶೇ. 6.3ರಷ್ಟು ಆರ್ಥಿಕ ಪ್ರಗತಿ ಕಾಣಲಿದೆ ಎಂದು ಐಎಂಎಫ್​ ವಿಶ್ವಾಸ ವ್ಯಕ್ತಪಡಿಸಿದೆ. ಭಾರತದಲ್ಲಿನ ಆರ್ಥಿಕ ಚಟುವಟಿಕೆಗಳು ತೀವ್ರ ಪ್ರಮಾಣದಲ್ಲಿ ಏರಿಕೆಯಾದ […]

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 72 ಹೊಸ ಕೋವಿಡ್​ ಪ್ರಕರಣ ದಾಖಲು

ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ 72 ಹೊಸ ಕೋವಿಡ್​​ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಸದ್ಯ ದೇಶದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 348 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದತ್ತಾಂಶವನ್ನು ಬಿಡುಗಡೆ ಮಾಡಿದೆ.ಕೋವಿಡ್​ ಹೊಸ ರೂಪಾಂತಾರಿ ತಳಿಗಳಿಂದಾಗಿ ಭಾರತ ಸೇರಿದಂತೆ ಹಲವು ದೇಶದಲ್ಲಿ ಸೋಂಕಿನ ಪ್ರಕರಣಗಳ ಏರಿಕೆ ಕಾಣುತ್ತಿವೆ. ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಕೋವಿಡ್​ನ ಹೊಸ ಉಪತಳಿಗಳಾದ ಏರಿಸ್​, ಎಕ್ಸ್​ಬಿಬಿ ಸೇರಿದಂತೆ ಹಲವು ತಳಿಗಳು ಹೊಸ ಸೋಂಕಿನ ಪ್ರಕರಣಗಳಿಗೆ ಕಾರಣವಾಗಿದೆ. ಈ ಸೋಂಕುಗಳಿಂದ ಪ್ರಕರಣಗಳು ದಾಖಲಾಗುತ್ತಿದ್ದರೂ, […]

ಕಳೆದ 9 ತಿಂಗಳಲ್ಲಿ 12,615 ಸೈಬರ್ ಕ್ರೈಂ ಪ್ರಕರಣಗಳು ದಾಖಲು : ಬೆಂಗಳೂರು

ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳ‌ ಸಂಖ್ಯೆ ಅಧಿಕವಾಗುತ್ತಿದೆ‌.‌ ಇದಕ್ಕೆ ಪೂರಕ ಎಂಬಂತೆ ಕಳೆದ 9 ತಿಂಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 12,615 ಪ್ರಕರಣಗಳು ವರದಿಯಾಗಿದ್ದು, ಸುಮಾರು 470 ಕೋಟಿ‌ ರೂಪಾಯಿ ವಂಚನೆಯಾಗಿದೆ.ರಾಜಧಾನಿಯಲ್ಲಿ ದಾಖಲಾಗಿದ್ದ 12,615 ಪ್ರಕರಣಗಳನ್ನು ತನಿಖೆ ನಡೆಸಿ ವಿವಿಧ ಬ್ಯಾಂಕ್​ಗಳ ಮುಖಾಂತರ 201.83 ಕೋಟಿ ರೂ. ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸೈಬರ್ ಖದೀಮರಿಂದ 28.40 ಕೋಟಿ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 27.68 ಕೋಟಿ ವಾರಸುದಾರರಿಗೆ ಪೊಲೀಸರು ಹಿಂತಿರುಗಿಸಿದ್ದಾರೆ.ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ […]

ಮಂಜ್ರೇಕರ್ ಸಲಹೆ : ಸ್ಪಿನ್​ ಬಿಟ್ಟು ಬ್ಯಾಟಿಂಗ್​ ಲೈನ್​ಅಪ್​ ಹೆಚ್ಚಿಸಿ

ನವದೆಹಲಿ: ಭಾರತ ಏಕದಿನ ವಿಶ್ವಕಪ್ 2023 ರ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ (ICC Cricket World Cup 2023). ಟೀಮ್ ಇಂಡಿಯಾ (IND vs AFG) ದೆಹಲಿ ಮೈದಾನದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.ಇಂದು ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ತನ್ನ ಆಡುವ 11 ಆಟಗಾರರ ಬಳಗದಲ್ಲಿ ಹೆಚ್ಚು ಬ್ಯಾಟ್ಸ್​ಮನ್​ಗಳನ್ನು ಹೊಂದಿದ್ದರೆ ಸೂಕ್ತ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್​ಗೆ ಯೋಗ್ಯವಾಗಿರುವ ಈ ಮೈದಾನದಲ್ಲಿ ಹೆಚ್ಚುವರಿ ಬ್ಯಾಟ್ಸ್​ಮನ್​ನೊಂದಿಗೆ ಕಣಕ್ಕೆ ಇಳಿಯುವುದು ಉತ್ತಮ ಎಂದು […]