ಅಮೇರಿಕಾದ ನ್ಯೂಜೆರ್ಸಿಯಲ್ಲಿ ಅತಿದೊಡ್ಡ ಹಿಂದೂ ದೇವಾಲಯ ಉದ್ಘಾಟನೆ

ಯುನೈಟೆಡ್ ಸ್ಟೇಟ್ಸ್ ನ ಅತಿದೊಡ್ಡ ಹಿಂದೂ ದೇವಾಲಯವು ನ್ಯೂಜೆರ್ಸಿಯಲ್ಲಿ ಭಾನುವಾರ ತನ್ನ ಬಾಗಿಲನ್ನು ಭಕ್ತರಿಗಾಗಿ ತೆರೆದಿದೆ. ರಾಬಿನ್ಸ್ವಿಲ್ಲೆಯ ಸಣ್ಣ ಟೌನ್ಶಿಪ್ನಲ್ಲಿ 183-ಎಕರೆ ಜಾಗದಲ್ಲಿ BAPS ಸ್ವಾಮಿನಾರಾಯಣ ಅಕ್ಷರಧಾಮ ಮಂದಿರವನ್ನು ಲೋಕಾರ್ಪಣೆ ಮಾಡಲಾಗಿದೆ. ಅಕ್ಟೋಬರ್ 8 ರಂದು ದೇವಾಲಯ ಅಧಿಕೃತವಾಗಿ ಉದ್ಘಾಟನೆಗೊಂಡಿದ್ದು, ಅ.18 ರಿಂದ ಸಾರ್ವಜನಿಕರಿಗೆ ಪ್ರವೇಶ ದೊರೆಯಲಿದೆ. ಭಾರತೀಯ ಅಮೆರಿಕನ್ನರು ಮತ್ತು ಹಿಂದೂ ಅಮೆರಿಕನ್ನರಿಗೆ, ಇದು ಒಂದು ದೊಡ್ಡ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. #WATCH | The largest Hindu temple in the US – BAPS […]
ಶಾಸಕ ಪ್ರದೀಪ್ ಈಶ್ವರ್ ಸಾಥ್ : ಹೊಸ ಪ್ರತಿಭೆಗಳ ‘ಲವ್ ರೆಡ್ಡಿ’ ಸಿನಿಮಾ

ಶೀರ್ಷಿಕೆ ಹೇಳುವಂತೆ ಇದೊಂದು ಸುಂದರ ಪ್ರೇಮಕಥೆಯ ಜೊತೆಗೆ ಫ್ಯಾಮಿಲಿ ಎಮೋಷನಲ್ ಡ್ರಾಮಾ. ಈ ಸಿನಿಮಾ ಮೂಲಕ ಗಡಿನಾಡ ಪ್ರತಿಭೆ ಅಂಜನ್ ರಾಮಚಂದ್ರ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಾಯಕಿಯಾಗಿ ಶ್ರಾವಣಿ ನಟಿಸಿದ್ದಾರೆ. ಸ್ಯಾಂಡಲ್ವುಡ್ಗೆ ಟ್ಯಾಲೆಂಟ್ ಇರುವ ಪ್ರತಿಭೆಗಳೇ ಎಂಟ್ರಿಯಾಗುತ್ತಿದ್ದಾರೆ. ಇದೀಗ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ‘ಲವ್ ರೆಡ್ಡಿ’ ಎಂಬ ಸಿನಿಮಾ ಮಾಡಿದ್ದಾರೆ.ಹೊಸ ಪ್ರತಿಭೆಗಳ ‘ಲವ್ ರೆಡ್ಡಿ’ ಚಿತ್ರದ ಫಸ್ಟ್ ಝಲಕ್ ಅನ್ನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಿಡುಗಡೆಗೊಳಿಸಿದ್ದಾರೆ. ಈ ವೇಳೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, […]
ಕಚ್ಚಾ ತೈಲ ಬೆಲೆ ಏರಿಕೆ : ಇಸ್ರೇಲ್ – ಗಾಜಾ ಸಮರದ ಎಫೆಕ್ಟ್

ನವದೆಹಲಿ: ಇಸ್ರೇಲ್ ಮತ್ತು ಗಾಜಾದಲ್ಲಿ ಯುದ್ಧ ಪರಿಸ್ಥಿತಿಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ತೈಲ ಉತ್ಪಾದನೆಗೆ ಅಡ್ಡಿಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಗಳು ಸೋಮವಾರ ಶೇಕಡಾ 4 ರಷ್ಟು ಏರಿಕೆಯಾಗಿವೆ.ಅಮೆರಿಕದ ತೈಲ ಬೆಲೆಯ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (ಡಬ್ಲ್ಯುಟಿಐ) ಬ್ಯಾರೆಲ್ಗೆ 86 ಡಾಲರ್ಗಿಂತ ಹೆಚ್ಚಾಗಿದೆ. ಹಾಗೆಯೇ ಬ್ರೆಂಟ್ ಕ್ರೂಡ್ ತೈಲದ ಬೆಲೆಯೂ ಏಷ್ಯಾದ ಆರಂಭಿಕ ವಹಿವಾಟಿನಲ್ಲಿ ಏರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧ ಸ್ಥಿತಿಯು ತೈಲ ಬೆಲೆಗಳ […]
ಉಚಿತ ಫುಡ್ ಡೆಲಿವರಿ ಮತ್ತು ಡಿಸ್ಕೌಂಟ್ : ಕಡಿಮೆ ದರದ ಸ್ವಿಗ್ಗಿ ಒನ್ ಲೈಟ್ ಮೆಂಬರ್ಶಿಪ್
ನವದೆಹಲಿ: ಉಚಿತ ಆಹಾರ ಡೆಲಿವರಿ, ವಿಶೇಷ ಆಫರ್ಗಳು ಮತ್ತು ಡಿಸ್ಕೌಂಟ್ಗಳಂಥ ಪ್ರಯೋಜನಗಳನ್ನು ನೀಡುವ ಸ್ವಿಗ್ಗಿ ಒನ್ ಲೈಟ್ ಮೆಂಬರ್ಶಿಪ್ ಯೋಜನೆಯನ್ನು ಸ್ವಿಗ್ಗಿ ಸೋಮವಾರ ಪ್ರಕಟಿಸಿದೆ.ಇದಕ್ಕೆ ಮೂರು ತಿಂಗಳಿಗೆ 99 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಮೂರು ತಿಂಗಳ ಸದಸ್ಯತ್ವದೊಂದಿಗೆ, ಬಳಕೆದಾರರು 149 ರೂ.ಗಿಂತ ಹೆಚ್ಚಿನ ಆರ್ಡರ್ ಮೌಲ್ಯದ 10 ಉಚಿತ ಫುಡ್ ಡೆಲಿವರಿ ಮತ್ತು ಇನ್ಸ್ಟಾಮಾರ್ಟ್ನಲ್ಲಿ 199 ರೂ.ಗಿಂತ ಹೆಚ್ಚಿನ ಆರ್ಡರ್ ಮೌಲ್ಯದ 10 ಉಚಿತ ಡೆಲಿವರಿಗಳನ್ನು ಪಡೆಯುತ್ತಾರೆ. ಉಚಿತ ಫುಡ್ ಡೆಲಿವರಿ ನೀಡುವ ಸ್ವಿಗ್ಗಿ ಒನ್ ಲೈಟ್ […]
ಎಸ್&ಪಿ ವರದಿ : ಏಷ್ಯಾ-ಪೆಸಿಫಿಕ್ ವಲಯದಲ್ಲಿ ಭಾರತದ ಸರ್ಕಾರಿ ಬ್ಯಾಂಕುಗಳ ಷೇರುಗಳೇ ಬೆಸ್ಟ್

ನವದೆಹಲಿ: ಸೆಪ್ಟೆಂಬರ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಏಷ್ಯಾ-ಪೆಸಿಫಿಕ್ ಮೂಲದ ಬ್ಯಾಂಕ್ಗಳಿಗಿಂತ ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಷೇರುಗಳು ಅತ್ಯುತ್ತಮವಾಗಿ ವಹಿವಾಟು ನಡೆಸಿವೆ. ಇದು ಈ ಬ್ಯಾಂಕ್ಗಳ ಮೇಲೆ ಹೂಡಿಕೆದಾರರು ಇಟ್ಟಿರುವ ವಿಶ್ವಾಸ ಮತ್ತು ಅವುಗಳ ಹಣಕಾಸು ದೃಢತೆಯನ್ನು ಬಿಂಬಿಸುತ್ತದೆ ಎಂದು ಎಸ್ & ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ತಿಳಿಸಿದೆ.ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಷೇರುಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ವರದಿ ಹೇಳಿದೆ. ಇಂಡೋನೇಷ್ಯಾದ ಪಿಟಿ ಬ್ಯಾಂಕ್ ನ್ಯಾಷನಲ್ ನೋಬು ಟಿಬಿಕೆ […]