8 ಲಕ್ಷದೊಳಗಿನ ಟಾಪ್ 5 ಜನಪ್ರಿಯ ಟಾಟಾ ಕಾರುಗಳು

ಟಾಟಾ ಭಾರತದಲ್ಲಿ 5 ರಿಂದ 8 ಲಕ್ಷ ಬೆಲೆಯ ನಡುವೆ 5 ಕಾರುಗಳನ್ನು ನೀಡುತ್ತದೆ. ಇದು ಟಾಟಾ ಪಂಚ್, ಟಾಟಾ ಟಿಯಾಗೊ, ಟಾಟಾ ಆಲ್ಟ್ರೋಜ್, ಟಾಟಾ ಟಿಗೊರ್, ಟಾಟಾ ಟಿಯಾಗೊ ಎನ್‌ಆರ್‌ಜಿಯಂತಹ ಕೆಲವು ಜನಪ್ರಿಯ ಕಾರುಗಳನ್ನು ಒಳಗೊಂಡಿದೆ. 5-8 ಲಕ್ಷ ಬೆಲೆ ಶ್ರೇಣಿಯ ನಡುವೆ ಟಾಟಾದಿಂದ ಲಭ್ಯವಿರುವ ಅಗ್ಗದ ಕಾರು ಟಾಟಾ ಟಿಯಾಗೊ (ಆನ್-ರೋಡ್ ಬೆಲೆ – ₹ 5.60 ಲಕ್ಷ) ಅತ್ಯಂತ ದುಬಾರಿ ಕಾರು ಟಾಟಾ ಟಿಗೋರ್ (ಆನ್-ರೋಡ್ ಬೆಲೆ – ₹ 8.00 ಲಕ್ಷ). ಟಾಟಾದ […]

ಮಹಿಳಾ ಕಬಡ್ಡಿ ಫೈನಲ್‌ ನಲ್ಲಿ ಚೈನೀಸ್ ತೈಪೆ ಸೋಲಿಸಿ ಚಿನ್ನ ಗೆದ್ದ ಭಾರತ! ಏಷ್ಯನ್ ಗೇಮ್ಸ್ ನಲ್ಲಿ ಶತಕ ಪೇರಿಸಿ ದಾಖಲೆ!!

ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಶನಿವಾರ 14 ನೇ ದಿನದಂದು ಭಾರತದ ಪದಕಗಳ ಸಂಖ್ಯೆ 100 ಕ್ಕೆ ತಲುಪಿ, ಶತಕ ಬಾರಿಸಿದೆ. ಭಾರತದ ಆರ್ಚರಿ ತಂಡವು ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡಿತು, ಜ್ಯೋತಿ ಸುರೇಖಾ, ಓಜಸ್ ಪ್ರವೀಣ್ ಡಿಯೋಟಾಲೆ ಆಯಾ ಮಹಿಳಾ ಮತ್ತು ಪುರುಷರ ಕಾಂಪೌಂಡ್ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಪಡೆದರು. ಇದೇ ವೇಳೆ ಆರ್ಚರಿಯಲ್ಲಿ ಅಭಿಷೇಕ್ ವರ್ಮಾ ಬೆಳ್ಳಿ, ಅದಿತಿ ಗೋಪಿಚಂದ್ ಕಂಚಿನ ಪದಕ ಪಡೆದರು. ಮಹಿಳಾ ಕಬಡ್ಡಿ ತಂಡ ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು […]

ಉಡುಪಿ: ಕುಡಿಯುವ ನೀರಿನ ಪರಿಷ್ಕೃತ ದರ ಪ್ರಕಟಿಸಿದ ನಗರಸಭೆ

ಉಡುಪಿ: ಉಡುಪಿ ನಗರಸಭೆಯ ವತಿಯಿಂದ ಕುಡಿಯುವ ನೀರಿನ ಬಳಕೆಯ ಶುಲ್ಕವನ್ನು ಪರಿಷ್ಕರಿಸಿ, ದರ ಏರಿಕೆ ಮಾಡಲಾಗಿದೆ. ಸರಕಾರದ ಆದೇಶದಂತೆ ಕುಡಿಯುವ ನೀರಿನ ದರವನ್ನು ಪ್ರತಿ 3 ವರ್ಷಕ್ಕೊಮ್ಮೆ ಪರಿಷ್ಕರಿಸಬೇಕಿದ್ದು, ಕಳೆದ 12 ವರ್ಷಗಳಲ್ಲಿ ದರವನ್ನು ಪರಿಷ್ಕರಿಸಲಾಗಿರುವುದಿಲ್ಲ. ಪ್ರಸ್ತುತ ವಿದ್ಯುತ್, ಇತರೇ ನಿರ್ವಹಣಾ ವೆಚ್ಚಗಳು ಅಧಿಕವಾಗಿರುವುದರಿಂದ ದರವನ್ನು ಪರಿಷ್ಕರಿಸುವುದು ಅನಿವಾರ್ಯವಾಗಿದ್ದು, ನವೆಂಬರ್ 1 ರಿಂದ ಅನ್ವಯವಾಗುವಂತೆ ಕುಡಿಯುವ ನೀರಿನ ಬಳಕೆ ಶುಲ್ಕವನ್ನು ಈ ಕೆಳಕಂಡಂತೆ ಪರಿಷ್ಕರಿಸಲಾಗುವುದು. ಒಂದು ಸಾವಿರ ಲೀಟರ್ ನೀರು: ಗೃಹ ಬಳಕೆಗೆ 8 ಸಾವಿರ ಲೀ. […]

ಇಂದ್ರಧನುಷ್ ಲಸಿಕಾ ಕಾರ್ಯಕ್ರಮದಲ್ಲಿ ಶೇ.100 ಪ್ರಗತಿ ಸಾಧನೆ ಗುರಿ: ಡಾ.ವಿದ್ಯಾಕುಮಾರಿ ಕೆ.

ಉಡುಪಿ: ಇಂದ್ರಧನುಷ್ ಅಭಿಯಾನದಡಿ ನೀಡುತ್ತಿರುವ ಲಸಿಕಾಕರಣಗಳಿಂದ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಮೊದಲನೇ ಹಂತದಲ್ಲಿ 3,212 ಮಕ್ಕಳಿಗೆ ಲಸಿಕೆ ನೀಡಲು ಗುರಿ ಹೊಂದಿದ್ದು, 3,203 ಮಕ್ಕಳಿಗೆ ಲಸಿಕೆ ನೀಡಿ, ಶೇ. 99.72 ರಷ್ಟು, 708 ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಲು ಗುರಿ ಹೊಂದಿ 708 ಜನರಿಗೂ ಲಸಿಕೆ ನೀಡಿ ಶೇ. 100 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲಾಧಿಕಾರಿ ಡಾ.ವಿದ್ಯಾಕುಮಾರಿ ಕೆ. ಹೇಳಿದರು. ಅವರು ಶುಕ್ರವಾರ ನಗರದ ಮಣಿಪಾಲ ರಜತಾದ್ರಿಯ […]

ಕುಂದಾಪುರ: ಅ.17 ರಂದು ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬದ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಕುಂದಾಪುರ: ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗ, ಕುಂದಾಪುರ ಉಡುಪಿ ಜಿಲ್ಲೆ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್(ರಿ) ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ(ರಿ) ಕುಂದಾಪುರ ಇವರ ಸಹಕಾರದಲ್ಲಿ ಅ.17 ರಂದು ಕುಂದಾಪುರದ ಕಲಾಮಂದಿರ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಗಂಟೆವರೆಗೆ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ: 8861442007/ 9900230758/9535321649