ಉಡುಪಿ: ಪ್ರವಾಸೋದ್ಯಮ ಚಟುವಟಿಕೆಗಳಿಗೆ ನೋಂದಣಿ ಕಡ್ಡಾಯ

ಉಡುಪಿ: ಪ್ರವಾಸೋದ್ಯಮ ಚಟುವಟಿಕೆ ನಡೆಸುತ್ತಿರುವವರು ಕರ್ನಾಟಕ ಟೂರಿಸಂ ಟ್ರೇಡ್ ಆಕ್ಟ್ 2015 ರ ಅನ್ವಯ ಎಲ್ಲಾ ಪ್ರವಾಸೋದ್ಯಮ ಚಟುವಟಿಕೆಯನ್ನು ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಿಂದ ನೊಂದಣಿ ಮಾಡಬೇಕು. ಜಿಲ್ಲೆಯಲ್ಲಿರುವ ಹೋಮ್ ಸ್ಟೇ, ಹೋಟೆಲ್ ಅಥವಾ ರೆಸಾರ್ಟ್, ರೆಸ್ಟೋರೆಂಟ್, ಟ್ರಾವೆಲ್ ಏಜೆಂಟ್ಸ್, ಟೂರ್ ಆಪರೇಟರ್, ಟೂರಿಸ್ಟ್ ಟ್ರಾನ್ಸಪೋರ್ಟ್ ಆಪರೇಟರ್, ಅಮ್ಯೂಸಮೆಂಟ್ ಪಾರ್ಕ್, ಕ್ಯಾರವನ್ ಟೂರಿಸಂ ಚಟುವಟಿಕೆಗಳನ್ನು ನಡೆಸುವವರು ಹಾಗೂ ಈಗಾಗಲೇ ನಡೆಸುತ್ತಿರುವವರು ಕಡ್ಡಾಯವಾಗಿ kttf.karnatakatourism.org ನಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು. ಟೂರಿಸ್ಟ್ ಬೋಟಿಂಗ್, ಎಲ್ಲಾ ತರಹದ ಜಲಸಾಹಸ ಕ್ರೀಡೆಗಳು, ಭೂ ಸಾಹಸ […]
ಮಾಹೆ ಗಾಂಧಿಯನ್ ಸೆಂಟರಿನಲ್ಲಿ ‘ಗಾಂಧಿಯ ವಿಶ್ವಾತ್ಮಕ ದೃಷ್ಟಿಕೋನ’ ಕುರಿತು ವಿಶೇಷ ಉಪನ್ಯಾಸ

ಮಣಿಪಾಲ: ಸಂವಾದದ ಮೂಲಕ ಸಂಘರ್ಷದ ಪರಿಹಾರವು ಈ ಸಮಯದ ಅಗತ್ಯವಾಗಿದೆ, ಇದು ಮಹಾತ್ಮ ಗಾಂಧಿಯವರ ಮಹತ್ವದ ಪುಟ್ಟ ಪುಸ್ತಕವಾದ ‘ಹಿಂದ್ ಸ್ವರಾಜ್’ ನಲ್ಲಿ ಚೆನ್ನಾಗಿ ಪ್ರತಿಫಲಿಸುತ್ತದೆ ಎಂದು ರಾಜಕೀಯ ಶಾಸ್ತ್ರಜ್ಞ ಡಾ ರಾಜಾರಾಮ್ ತೋಳ್ಪಾಡಿ ಹೇಳಿದರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಉಡುಪಿ ರೋಟರಿ ಕ್ಲಬ್ ಮತ್ತು ಯುನೆಸ್ಕೋ ಪೀಸ್ ಚೇರ್ ಜಂಟಿಯಾಗಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ‘ಗಾಂಧಿಯ ವಿಶ್ವಾತ್ಮಕ ದೃಷ್ಟಿಕೋನ’ ಎಂಬ ವಿಷಯದ ಕುರಿತು ವಿಶೇಷ […]
ಹೆಮ್ಮಾಡಿ: ತಾಲೂಕು ಮಟ್ಟದ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಜ.ಸ್ವ.ಪ.ಪೂ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಹೆಮ್ಮಾಡಿ: ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯವರು ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಆಯೋಜಿಸಿದ ತಾಲೂಕು ಮಟ್ಟದ ವಿವಿಧ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ವಿಭಾಗಗಳಲ್ಲಿ ಸಾಧನೆ ಮೆರೆದಿದ್ದಾರೆ. ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವರ್ಷಾ ರವಿಶಂಕರ್ ಪ್ರಥಮ ಸ್ಥಾನ, ರಸಪ್ರಶ್ನೆ(ಕ್ವಿಜ್) ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ಸಿ.ಗಿರೀಶ್ ಪೈ ಪ್ರಥಮ ಸ್ಥಾನ, ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ಐಶ್ವರ್ಯ ವೈದ್ಯ ದ್ವಿತೀಯ ಸ್ಥಾನ,ರಂಗೋಲಿ ಸ್ಪರ್ಧೆಯಲ್ಲಿ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ […]
ಸುನಾಗ್ ಆಸ್ಪತ್ರೆಯಲ್ಲಿ ರಕ್ತಸ್ರಾವ ರಹಿತ ಆರ್ಥೊಸ್ಕೋಪಿ ಶಸ್ತ್ರಚಿಕಿತ್ಸೆ ಲಭ್ಯ

ರಕ್ತಸ್ರಾವ ರಹಿತ ಸಣ್ಣ ರಂಧ್ರದ ಮೂಲಕ ಅತ್ಯಂತ ನಿಖರವಾಗಿ ಕೀಲು ಮೂಳೆಗಳ ಸಮಸ್ಯೆಗಳನ್ನು ನಿವಾರಿಸಬಲ್ಲ ಚಿಕಿತ್ಸೆಯೇ ಆರ್ಥೊಸ್ಕೋಪಿ ಶಸ್ತ್ರಚಿಕಿತ್ಸೆ. ಕಡಿಮೆ ಸಮಯದ ದಾಖಲಾತಿಯೊಂದಿಗೆ ರೋಗಿಯನ್ನು ಅತ್ಯಂತ ವೇಗವಾಗಿ ಗುಣಪಡಿಸಬಲ್ಲ ಹಾಗೂ ತನ್ನ ಕೆಲಸದ ಕಾರ್ಯಗಳನ್ನು ಅತ್ಯಂತ ವೇಗವಾಗಿ ಆರಂಭಿಸಬಲ್ಲ ಚಿಕಿತ್ಸೆಯೇ ಆರ್ಥೊಸ್ಕೋಪಿ ಶಸ್ತ್ರಚಿಕಿತ್ಸೆ. ಆರ್ಥೊಸ್ಕೋಪಿ ವಿಭಾಗ ಮೂಳೆ ಮತ್ತು ಕೀಲು ತಜ್ಞರು ಡಾ. ನರೇಂದ್ರ ಕುಮಾರ್ ಎಚ್.ಎಸ್ ನಿರ್ದೇಶಕರು ಡಾ.ದಿಲೀಪ್ ಕೆ.ಎಸ್. ಆರ್ಥೋಸ್ಕೋಪಿ ತಜ್ಞರು ಡಾ. ಪ್ರಶಾಂತ್ ಆಚಾರ್ಯ ಆರ್ಥೋಸ್ಕೋಪಿ ತಜ್ಞರು ಮಂಡಿಯ ತೊಂದರೆಗಳಾದ ಎಸಿಎಲ್, ಮೆನಿಸ್ಕ್ಯಾಲ್, […]