ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ: 2023-24 ಆರ್ಥಿಕ ವರ್ಷಕ್ಕೆ ಜಿಡಿಪಿ 6.5 ಶೇಕಡಾ; 5.4 ಶೇ. ಹಣದುಬ್ಬರ

ನವದೆಹಲಿ: ಆರ್‌ಬಿಐನ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು 6.5 ಪ್ರತಿಶತದಲ್ಲಿ ಯಥಾಸ್ಥಿತಿಯಲ್ಲಿಡಲು ಸರ್ವಾನುಮತದಿಂದ ನಿರ್ಧರಿಸಿದೆ. ಕೇಂದ್ರ ಬ್ಯಾಂಕ್ ಪ್ರಮುಖ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿರಿಸಿರುವುದು ಇದು ಸತತ ನಾಲ್ಕನೇ ಬಾರಿಯಾಗಿದೆ. ಆರ್ಥಿಕ ವರ್ಷ 24ರ ಜಿಡಿಪಿ ಅಂದಾಜು 6.5 ಶೇಕಡಾದಲ್ಲಿ ಉಳಿಸಿಕೊಂಡಿರುವ ಆರ್.ಬಿ.ಐ 2023-24 ಕ್ಕೆ ಹಣದುಬ್ಬರ ಪ್ರಕ್ಷೇಪಣವನ್ನು 5.4 ಶೇಕಡಾದಲ್ಲಿ ಬದಲಾಯಿಸದೆ ಇರಿಸಿದೆ. ಶುಕ್ರವಾರ ಆರ್ಥಿಕ ವರ್ಷ 24 ರ ನಾಲ್ಕನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಸ್ತುತಪಡಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, “ನಮ್ಮ ವಿತ್ತೀಯ ನೀತಿಯು […]

ಹೊಸ ಭಯೋತ್ಪಾದಕ ಗುಂಪುಗಳು ರಚನೆಯಾಗದಂತಹ ಕಾರ್ಯವಿಧಾನ ಅನುಸರಿಸಿ: ಏಜೆನ್ಸಿಗಳಿಗೆ ಅಮಿತ್ ಶಾ ಕರೆ

ನವದೆಹಲಿ: ಹೊಸ ಭಯೋತ್ಪಾದಕ ಗುಂಪುಗಳು ರಚನೆಯಾಗದಂತೆ ಎಲ್ಲಾ ಭಯೋತ್ಪಾದನಾ ವಿರೋಧಿ ಏಜೆನ್ಸಿಗಳು ಕಠಿಣ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು. ಗುರುವಾರ ನವದೆಹಲಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಯೋಜಿಸಿದ್ದ ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ದೃಢವಾಗಿ ನಿಗ್ರಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳು ಯಶಸ್ವಿಯಾಗಿದೆ. ಎನ್‌ಐಎ ವ್ಯಾಪ್ತಿಯಲ್ಲಿ ಮಾದರಿ ಭಯೋತ್ಪಾದನೆ ನಿಗ್ರಹ ರಚನೆಯನ್ನು […]

ಕಾರ್ಕಳ: ಜ್ಞಾನ ಭಾರತ್ -ಬಾಲ ಸಂಸ್ಕಾರ ತರಗತಿಗಳಿಗೆ ಮಕ್ಕಳ ನೋಂದಣಿ ಆರಂಭ

ಕಾರ್ಕಳ: ಜ್ಞಾನ ಭಾರತ್ ಸಮಿತಿ, ಗಣಿತ ನಗರ, ಕಾರ್ಕಳ ಇವರ ಆಶ್ರಯದಲ್ಲಿ 9 ರಿಂದ 14 ರ ಹರೆಯದ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ನೀಡುವ ‘ಬಾಲ ಸಂಸ್ಕಾರ’ ಕಾರ್ಯಕ್ರಮ ಪ್ರತಿ ಶನಿವಾರ ಶ್ರೀ ಮಹಾಗಣಪತಿ ದೇವಸ್ಥಾನ ಗಣಿತ ನಗರದ ಆವರಣದಲ್ಲಿ ನಡೆಯಲಿದೆ. ಮಕ್ಕಳಿಗೆ ಸನಾತನ ಸಂಸ್ಕೃತಿ ಹಾಗೂ ದೇಶಭಕ್ತಿಯ ಅರಿವನ್ನು, ಭಗವದ್ಗೀತೆ, ರಾಮಾಯಣ, ಮಹಾಭಾರತದ ಜ್ಞಾನದ ಮುಖಾಂತರ ನೀಡಿ, ಬದುಕು ಕಟ್ಟಿಕೊಡುವ ಸ್ಫೂರ್ತಿ ಚೇತನರ ಯಶೋಗಾಥೆಗಳನ್ನು ತಿಳಿಸಿ, ನವಭಾರತದ ಸದೃಢ ಪ್ರಜೆಗಳನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಚಿಂತನೆ […]

ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಿ: ಪ್ರೊ. ಭಾಸ್ಕರ್ ಶೆಟ್ಟಿ

ಉಡುಪಿ: ವಿದ್ಯಾರ್ಥಿಗಳಲ್ಲಿ ಸೇವಾಮನೋಭಾವನೆಯನ್ನು ಶಾಲಾ-ಕಾಲೇಜು ಹಂತದಲ್ಲಿಯೇ ಮೂಡಿಸಬೇಕು. ಯುವರೆಡ್‌ಕ್ರಾಸ್ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವಂತೆ ತಿಳಿಸಿದ ಅವರು, ತರಬೇತಿ ಪಡೆದ ತರಬೇತುದಾರರು ಸಮಾಜಮುಖಿ ವಾತಾವರಣವನ್ನು ಸೃಷ್ಠಿಸುವುದರ ಮೂಲಕ ರೆಡ್‌ಕ್ರಾಸ್ ಸಂಸ್ಥೆಯನ್ನು ಜಿಲ್ಲೆಯಾದ್ಯಂತ ಅದ್ವಿತೀಯ ಸಂಸ್ಥೆಯನ್ನಾಗಿ ರೂಪಿಸಿ ಎಂದು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಹೇಳಿದರು. ಅವರು ಗುರುವಾರ ನಗರದ ಅಜ್ಜರಕಾಡು ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಂಟ್ ಹಾಲ್‌ನಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರೆಡ್‌ಕ್ರಾಸ್ ಸೊಸೈಟಿ […]

ಉಚ್ಚಿಲ ದಸರಾ: ಅ. 22 ರಂದು ಮಹಾಲಕ್ಷ್ಮಿ ಕೋ-ಆಪರೇಟಿವ್​ ಬ್ಯಾಂಕ್​ ವತಿಯಿಂದ ‘ನಾಡಹಬ್ಬ ದಸರಾ’ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ

ಉಡುಪಿ: ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದ ಸಹಯೋಗದೊಂದಿಗೆ, ಮಹಾಲಕ್ಷ್ಮಿ ಕೋ-ಆಪರೇಟಿವ್​ ಬ್ಯಾಂಕ್​ ವತಿಯಿಂದ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಅ. 22 ರಂದು ಬೆಳಗ್ಗೆ 9.30ಕ್ಕೆ ಉಚ್ಚಿಲ ಮೊಗವೀರ ಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಶಾಸಕ ಯಶ್​ಪಾಲ್​ ಸುವರ್ಣ ಹೇಳಿದ್ದಾರೆ. ‘ನಾಡಹಬ್ಬ ದಸರಾ’ ಈ ವಿಷಯದ ಕುರಿತು ಸ್ಪರ್ಧಿಗಳು ಚಿತ್ರ ಬಿಡಿಸಬೇಕಾಗಿದ್ದು, ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಿರಿಯರ ವಿಭಾಗ (1 […]