ಸಚಿವ ಭೈರತಿ ಸುರೇಶ್: ರಾಜ್ಯಾದ್ಯಂತ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ಆರಂಭ

ಬೆಳಗಾವಿ : ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ ಹೊಸದಾಗಿ 188 ಇಂದಿರಾ ಕ್ಯಾಂಟೀನ್ ತೆರೆಯಲಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್​ ತಿಳಿಸಿದ್ದಾರೆ. ‘ರಾಜ್ಯದಲ್ಲಿ ಮತ್ತಷ್ಟು ಇಂದಿರಾ ಕ್ಯಾಂಟೀನ್ ಆರಂಭ’ ಸಚಿವ ಭೈರತಿ ಸುರೇಶ್ ಅವರು ಶುಕ್ರವಾರ ಬೆಳಗಾವಿಯಲ್ಲಿ ಇಂದಿರಾ ಕ್ಯಾಂಟೀನ್​ಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇಂದಿರಾ ಕ್ಯಾಂಟೀನ್​ ತುಂಬಾ ಸಂಕಷ್ಟದಲ್ಲಿವೆ ಎಂಬ ಪ್ರಶ್ನೆಗೆ, “ಹಿಂದಿನ ಬಿಜೆಪಿ ಸರ್ಕಾರ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆಗೆ ಕೆಟ್ಟ ಹೆಸರು ತರಲು ಸರಿಯಾಗಿ ನಿರ್ವಹಣೆ ಮಾಡದೇ ಕ್ಯಾಂಟೀನ್​ಗಳನ್ನು […]

ರಸ್ತೆಗಿಳಿಯುತ್ತಿವೆ 40 ನಾನ್ ಎಸಿ ಸ್ಲೀಪರ್, 100 ಸಾಮಾನ್ಯ ಬಸ್​ಗಳು: ಪ್ರಯಾಣಿಕರನ್ನು ‘ಪಲ್ಲಕ್ಕಿ’ಯಲ್ಲಿ ಹೊತ್ತು ತಿರುಗಲಿದೆ ಕೆಎಸ್​ಆರ್​ಟಿಸಿ

ಬೆಂಗಳೂರು: ಪ್ರಯಾಣಿಕರನ್ನು ಅಂಬಾರಿಯಲ್ಲಿ ಹೊತ್ತು ರಾಜ್ಯದ ರಸ್ತೆಗಳಲ್ಲಿ ಸಂಚರಿಸಿದ್ದ ಕೆಎಸ್​ಆರ್​ಟಿಸಿ ಇದೀಗ ಪಲ್ಲಕ್ಕಿ ಮೂಲಕ ಪ್ರಯಾಣಿಕರನ್ನು ಹೊತ್ತು ಸಂಚರಿಸಲು ಸಿದ್ಧವಾಗಿದೆ. ‘ಸಂತೋಷವು ಪ್ರಯಾಣಿಸುತ್ತಿದೆ’ ಎನ್ನುವ ಟ್ಯಾಗ್ ಲೈನ್​ನೊಂದಿಗೆ ಸಾರಿಗೆ ನಿಗಮದ ಪಲ್ಲಕ್ಕಿ ರಸ್ತೆಗಿಳಿಯಲು ಸಜ್ಜಾಗಿದೆ. ‘ಪಲ್ಲಕ್ಕಿ’ಯ ‘ಸಂತೋಷವು ಪ್ರಯಾಣಿಸುತ್ತಿದೆ’ ಕೆಎಸ್​ಆರ್​ಟಿಸಿಯು ಪಲ್ಲಕ್ಕಿ ಎಂಬ ಹೊಸ ಬಸ್​​ ಅನ್ನು ಕರ್ನಾಟಕದ ಜನತೆಗಾಗಿ ಬಿಡುಗಡೆ ಮಾಡುತ್ತಿದೆ. ಇದೇ ಅಕ್ಟೋಬರ್​ 7 ರಂದು ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಲಿದ್ದಾರೆ. ನೂತನ ನಾನ್ ಎಸಿ ಸ್ಲೀಪರ್ ಬಸ್​ಗಳಿಗೆ ‘ಪಲ್ಲಕ್ಕಿ’ ಎನ್ನುವ ಹೆಸರನ್ನು […]

ಟಾಸ್ : ನೆದರ್ಲ್ಯಾಂಡ್ಸ್ ಪಾಕ್​ ವಿರುದ್ಧ ಗೆದ್ದ ಬೌಲಿಂಗ್ ಆಯ್ಕೆ ​

ಹೈದರಾಬಾದ್: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ನೆದರ್ಲೆಂಡ್ಸ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದೆ.ಐಸಿಸಿ ಪುರುಷರ ವಿಶ್ವಕಪ್ 2023ರ ಎರಡನೇ ಪಂದ್ಯ ಇದಾಗಿದ್ದು ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್, ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ನಾಯಕ ಬಾಬರ್ ಅಜಮ್​​ ನೇತೃತ್ವದ ಪಾಕಿಸ್ತಾನ ತಂಡ ಬ್ಯಾಟಿಂಗ್​ ಮಾಡುತ್ತಿದೆ . ಇಂದು ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ಸೆಣಸಾಟ ನಡೆಸುತ್ತಿದ್ದು, ಟಾಸ್ ಗೆದ್ದ ನೆದರ್ಲೆಂಡ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡಗಳು: ಉಭಯ […]

ಬಿಲ್ಲು ಸ್ಪರ್ಧೆಯಲ್ಲಿ ಬೆಳ್ಳಿ; ಬ್ಯಾಡ್ಮಿಂಟನ್​, ಕುಸ್ತಿ, ಕಿಕ್​ ವಾಲಿಬಾಲ್​ನಲ್ಲಿ ಕಂಚು: ಏಷ್ಯನ್​ ಗೇಮ್ಸ್

ಹ್ಯಾಂಗ್​ಝೌ (ಚೀನಾ): ಇಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನ 13ನೇ ದಿನವಾದ ಶುಕ್ರವಾರ  ಭಾರತದ ಪದಕ ಬೇಟೆ ಮುಂದುವರೆದಿದೆ. 19ನೇ ಏಷ್ಯಾಡ್​ನಲ್ಲಿ ಭಾರತ ಪ್ರಸ್ತುತ 21 ಚಿನ್ನ, 33 ಬೆಳ್ಳಿ ಮತ್ತು 37 ಕಂಚಿನಿಂದ 91 ಪದಕಗಳನ್ನು ಗೆದ್ದುಕೊಂಡಿದೆ. 2018ರಲ್ಲಿ 70 ಪದಕ ಗೆದ್ದಿರುವುದು ದಾಖಲೆಯಾಗಿತ್ತು. ಪ್ರಸ್ತುತ ಕೂಟದ ಪದಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದ್ದರೆ, ಚೀನಾ, ಜಪಾನ್​, ದಕ್ಷಿಣ ಕೊರಿಯಾ ಕ್ರಮವಾಗಿ 1,2,3 ನೇ ಸ್ಥಾನ ಅಲಂಕರಿಸಿವೆ.ಬಾಂಗ್ಲಾದೇಶವನ್ನು ಮಣಿಸಿ ಫೈನಲ್​ ಪ್ರವೇಶಿಸಿದ್ದ ಭಾರತದ ಪುರುಷರ ರಿಕರ್ವ್ ತಂಡ […]

ನರ್ಗಿಸ್ ಮೊಹಮ್ಮದಿ ಇರಾನ್ ಹೋರಾಟಗಾರ್ತಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿ

ಒಸ್ಲೋ (ನಾರ್ವೆ): ಇರಾನ್‌ನಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧದ ಹೋರಾಟ ಮತ್ತು ಸಮಾನ ಮಾನವ ಹಕ್ಕುಗಳು, ಸ್ವಾತಂತ್ರ್ಯವನ್ನು ಉತ್ತೇಜಿಸುವ ಅವಿರತ ಹೋರಾಟಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ನರ್ಗಿಸ್​ ಮೊಹಮ್ಮದಿ ಸದ್ಯ ಇರಾನ್‌ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ನಾರ್ವೇಜಿಯನ್ ನೊಬೆಲ್ ಸಮಿತಿಯು ಶುಕ್ರವಾರ 2023 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಇರಾನ್‌ ಹೋರಾಟಗಾರ್ತಿ ನರ್ಗಿಸ್ ಮೊಹಮ್ಮದಿ ಅವರಿಗೆ ಪ್ರಕಟಿಸಿತು. ಇರಾನ್​ ದೇಶದ ಹೋರಾಟಗಾರ್ತಿ ನರ್ಗಿಸ್​ ಮೊಹಮ್ಮದಿ ಅವರಿಗೆ 2023ರ ನೊಬೆಲ್​ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ. 1901ರಿಂದ ನೊಬೆಲ್ […]