ಕಾರ್ಕಳ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ

ಕಾರ್ಕಳ: ತಾಲೂಕಿನ ದುರ್ಗ ಗ್ರಾಮದ ಮಲೆಹಿತ್ಲು ನಿವಾಸಿ ಸಂದೇಶ ಶೆಟ್ಟಿ (30) ಎಂಬ ವ್ಯಕ್ತಿಯು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಸೆಪ್ಟಂಬರ್ 30 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 7 ಇಂಚು ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ […]
ಕುಂದಾಪುರ: ವ್ಯಕ್ತಿ ನಾಪತ್ತೆ

ಕುಂದಾಪುರ: ಕುಂದಾಪುರ ತಾಲೂಕು ವಂಡ್ಸೆ ಗ್ರಾಮದ ನಿವಾಸಿ ಅಣ್ಣಪ್ಪ (30) ಎಂಬ ವ್ಯಕ್ತಿಯು ಸೆಪ್ಟಂಬರ್ 28 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸದೃಢ ಶರೀರ ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-258233, ಮೊ.ನಂ: 9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ: 9480805434 […]
ಮಣಿಪಾಲ: ಭಾರತೀಯ ಪಾಕಪದ್ದತಿ ಮತ್ತು ಆಹಾರ ಸಂಸ್ಕೃತಿಯ ಕೇಂದ್ರವನ್ನು ಉದ್ಘಾಟಿಸಿದ ಶೆಫ್ ವಿಕಾಸ್ ಖನ್ನಾ

ಮಣಿಪಾಲ: ಭಾರತವು ಬಹು ಸಂಸ್ಕೃತಿ ಮತ್ತು ಪರಂಪರೆಯ ದೇಶವಾಗಿದೆ. ಭಾರತೀಯ ಪಾಕ ಪದ್ದತಿಯು ಇದರ ಅವಿಭಾಜ್ಯ ಅಂಗವೇ ಆಗಿದೆ. ವಿಷ್ಠು ಪುರಾಣದಲ್ಲಿ ಉಕ್ತವಾಗಿರುವ ‘ಉತ್ತರಮ್ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ, ವರ್ಷಂ ತದ್ ಭಾರತಮ್ ನಮಭಾರತೀಯತ್ರ ಸಂತತಿಃ’ ಅಂದರೆ, ಸಾಗರದಿಂದ ಉತ್ತರದವರೆಗೆ, ಹಿಮವತ್ಪರ್ವತದಿಂದ ದಕ್ಷಿಣದವರೆಗೆ ಹರಡಿರುವ ಭೂಭಾಗವೇ ಭವ್ಯವಾದ ಭಾರತ, ಅಲ್ಲಿರುವವರೇ ಭಾರತೀಯರು – ಈ ಸಾಲು ಭಾರತೀಯ ಪರಂಪರೆಯ ಅಗಾಧತೆಯನ್ನು ಪ್ರತಿಫಲಿಸುವಂತಿದೆ. ಭವ್ಯವಾದ ಹಿಮಾಲಯ ಶಿಖರಗಳಿಂದ ದಕ್ಷಿಣದ ದಟ್ಟವಾದ ಮಳೆಕಾಡುಗಳವರೆಗೆ ಸುಮಾರು 32,87,263 ಚದರ ಕಿ. […]
ಕೊಡವೂರು: ಉಜ್ವಲ ಯೋಜನೆ ಮಾಹಿತಿ ಕಾರ್ಯಗಾರ

ಕೊಡವೂರು: ಕೊಡವೂರು ವಾರ್ಡಿನ ಸೇವಾ ಕೇಂದ್ರದಲ್ಲಿ ಕೇಂದ್ರ ಸರಕಾರದ ಉಜ್ವಲ ಯೋಜನೆಯ ಮಾಹಿತಿ ಕಾರ್ಯಗಾರವು ನಡೆಯಿತು. ಕಾರ್ಯಕ್ರಮವನ್ನು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್ ಉದ್ಘಾಟಿಸಿದರು. ಪ್ರಧಾನಿ ಮೋದಿಯು ಬಡ ಜನರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೊಳಿಸುತ್ತಾರೆ. ಅಡುಗೆ ಅನಿಲ ಸಂಪರ್ಕ ಇಲ್ಲದ ಕಡು ಬಡತನದಲ್ಲಿ ಇರುವ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲ ನೀಡಬೇಕು ಎನ್ನುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮೂಲಕ ಕೊಡವೂರು ವಾರ್ಡಿನ ಕಟ್ಟ ಕಡೆಯ ವ್ಯಕ್ತಿಗೆ ಈ […]