ಉಗ್ರರನ್ನು ಬೆನ್ನಟ್ಟಿರುವ ಭದ್ರತಾ ಪಡೆ , ಕಣಿವೆ ನಾಡಲ್ಲಿ ಮತ್ತೆ ಗುಂಡಿನ ಸದ್ದು
ರಾಜೌರಿ, ಜಮ್ಮು ಮತ್ತು ಕಾಶ್ಮೀರ: ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆದಿದೆ.ಕಲಕೋಟ್ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ, ಉಗ್ರರು ಮತ್ತು ಯೋಧರ ಮಧ್ಯೆ ಗುಂಡಿನ ದಾಳಿ ನಡೆದಿದೆ.ಕಲಕೋಟ್ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಇಲ್ಲಿ ಭದ್ರತಾ ಪಡೆ ಇಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಅಷ್ಟರಲ್ಲಿ […]
2 ಲಕ್ಷ ಜನರಿಗೆ ಅಂಟಿದ ಸೋಂಕು! ಬಾಂಗ್ಲಾದಲ್ಲಿ 1000ರದ ಗಡಿ ದಾಟಿದ ಡೆಂಘೀ ಸಾವಿನ ಸಂಖ್ಯೆ
ಢಾಕಾ(ಬಾಂಗ್ಲಾದೇಶ): ನೆರೆಯ ಬಾಂಗ್ಲಾ ದೇಶದಲ್ಲಿ ಡೆಂಘೀ ವ್ಯಾಪಕವಾಗಿ ಹಬ್ಬಿದ್ದು ಕೇವಲ ಈ ಒಂದೇ ವರುಷದಲ್ಲಿ ಡೆಂಘೀ ಮಾರಿಗೆ 1,000 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಬಾಂಗ್ಲಾದ ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಈ ವರುಷ ಪೂರ್ಣಗೊಳ್ಳಲು ಇನ್ನೂ 3 ತಿಂಗಳೂ ಬಾಕಿ ಇದೆ. ಆದರೆ, 9 ತಿಂಗಳಿನಲ್ಲಿಯೇ ಡೆಂಘೀ ಜ್ವರದಿಂದ ಸಾವನ್ನಪ್ಪಿರುವವರ ಸಂಖ್ಯೆ 1000ದ ಗಡಿ ದಾಟಿದೆ. ನಿಖರ ಮಾಹಿತಿ ಪ್ರಕಾರ ಇದುವರೆಗೆ 1,017 ಜನರು ಸಾವನ್ನಪ್ಪಿದ್ದು, ಸುಮಾರು 2,09,000 ಜನರು ಸೋಂಕಿತರಾಗಿದ್ದಾರೆ. 2000ದಲ್ಲಿ […]
ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಸಮಾವೇಶ
ಉಡುಪಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಉಡುಪಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ(ರಿ) ಮತ್ತು ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಶ್ರೀಕೃಷ್ಣಾಪುರ ಮಠ ಇದರ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಮತ್ತು ಸಮಾವೇಶವನ್ನು ಪರ್ಯಾಯ ಸ್ವಾಮೀಜಿಯವರ ಪರವಾಗಿ ಮಠದ ದಿವಾನರಾದ ವರದರಾಜ ಭಟ್ ಇವರು ಉದ್ಘಾಟಿಸಿದರು. ಸಮಾರಂಭದಲ್ಲಿ ಉಡುಪಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತ್ಯಾನಂದ ನಾಯಕ್, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, […]
ಜೈಸ್ವಾಲ್ ಶತಕ, ಬಿಷ್ಣೋಯ್, ಅವೇಶ್ ಮಿಂಚು.. ನೇಪಾಳ ವಿರುದ್ಧ ಗೆದ್ದ ಟೀಂ ಇಂಡಿಯಾ : ಏಷ್ಯನ್ ಗೇಮ್ಸ್ ಕ್ರಿಕೆಟ್
ವನಿತೆಯರ ತಂಡ ಇತ್ತೀಚೆಗೆ ತಮ್ಮ ಮೊದಲ ಪ್ರಯತ್ನದಲ್ಲೇ ಸ್ವರ್ಣ ಪದಕ ಗೆದ್ದುಕೊಂಡಿದೆ. ಇಂದು ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ಏಷ್ಯಾಡ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ 23 ರನ್ಗಳ ಗೆಲುವು ಸಾಧಿಸಿದೆ.ಹ್ಯಾಂಗ್ಝೌ, ಚೀನಾ: ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಬಿಸಿಸಿಐ ವನಿತೆಯರ ಮತ್ತು ಪುರುಷರ ತಂಡವನ್ನು ಚೀನಾದ ಹ್ಯಾಂಗ್‌ಝೌಗೆ ಕಳುಹಿಸಿದೆ.ಏಷ್ಯನ್ ಗೇಮ್ಸ್ ಕ್ರಿಕೆಟ್ನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿದೆ. ವರ್ಮಾ ಔಟಾದ ಬೆನ್ನೆಲ್ಲೇ ಬಂದ […]
ಇಂಟರ್ನ್ಯಾಷನಲ್ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಚೆಲುವೆ , 6 ತಿಂಗಳ ಪ್ರಯತ್ನದಲ್ಲೇ ಮಿಸ್ ಟೀನ್ ಸೂಪರ್ ಗ್ಲೋಬ್
ಮಂಗಳೂರು: ಮಂಗಳೂರಿನ ಸುರತ್ಕಲ್ನ ಕುಳಾಯಿಯ ಹೊನ್ನಕಟ್ಟೆಯ ಯಶಸ್ವಿನಿ ದೇವಾಡಿಗ ಈ ಸಾಧನೆ ಮಾಡಿದವರು. ಯಾವುದೇ ಸಾಧನೆ ಮಾಡಬೇಕಾದರೂ ಸಾಕಷ್ಟು ಶ್ರಮ ಪಡಬೇಕು. ಹಲವು ವರ್ಷಗಳ ಕಾಲ ಸಾಧನೆ ಮಾಡಬೇಕು. ಆದರೆ ಮಂಗಳೂರಿನ ಯುವತಿಯೊಬ್ಬಳು ಆರು ತಿಂಗಳ ಅವಧಿಯಲ್ಲಿ ಥಾಯ್ಲೆಂಡ್ನಲ್ಲಿ ನಡೆದ ಮಿಸ್ ಟೀನ್ ಸೂಪರ್ ಗ್ಲೋಬ್ ಇಂಟರ್ನ್ಯಾಷನಲ್ -2023 ಕಿರೀಟವನ್ನು ಮುಡಿಗೇರಿಸಿದ್ದಾರೆ. ಯಶಸ್ವಿ ದೇವಾಡಿಗ ಅವರು 15- 19 ವರ್ಷದೊಳಗಿನ ವಿಭಾಗದಲ್ಲಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಆ ಸ್ಪರ್ಧೆಯಲ್ಲಿ ಅವರು ಮೊದಲ ರನ್ನರ್ ಅಫ್ ಆಗಿ ಕಿರೀಟ […]