ಬೈಂದೂರು: ಕದಿಕೆ ಟ್ರಸ್ಟ್ ನಿಂದ ಕೈಮಗ್ಗ ನೇಕಾರಿಕೆ ತರಬೇತಿ ಕಾರ್ಯಕ್ರಮ

ಬೈಂದೂರು: ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಯ್ಗೆ ಪುನಶ್ಚೇತನಗೊಳಿಸಿದ ಕದಿಕೆ ಟ್ರಸ್ಟ್ ನಿಂದ ಬೈಂದೂರು ತಾಲೂಕಿನ ಏಳಜಿತ್ ನ ಸರೋಜ ಅಣ್ಣಪ್ಪ ಅವರ ಮಗ್ಗದ ಮನೆಯಲ್ಲಿ ಅಕ್ಟೋಬರ್ 2, ಗಾಂಧಿ ಜಯಂತಿಯಂದು ಹೊಸ ಕೈಮಗ್ಗ ನೇಕಾರಿಕೆ ತರಬೇತಿ ಆರಂಭಿಸಲಾಗಿದೆ. ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದ, ಬೇರೆ ಉದ್ಯೋಗ ಅವಕಾಶವೂ ಇಲ್ಲದ ಒಳ ಪ್ರದೇಶ ವಾದ ಹೊಸೆರಿಯ ಏಳು ಯುವಜನರು ಈ ಯೋಜನೆಯಲ್ಲಿ ತರಬೇತಿ ಪಡೆಯಲಿದ್ದಾರೆ. ಆರು ತಿಂಗಳ ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ಕದಿಕೆ ಟ್ರಸ್ಟ್ ವತಿಯಿಂದ ಸ್ಟೈಪೆಂಡ್ ಜೊತೆಗೆ ತಿರುವಂನಂತಪುರದ ಪ್ರಖ್ಯಾತ […]

ಬ್ರದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್ ನಿಧನ

ಮಂಗಳೂರು: ‘ಬಟ್ಟಿ ಸಹೋದರ’ ಎಂದು ಕರೆಯಲ್ಪಡುತ್ತಿದ್ದ ಸೇಂಟ್ ಜೋಸೆಫ್ ನ ಬ್ರದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್ ಅವರು ತಮ್ಮ 79 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಮಧ್ಯಾಹ್ನ 1:00 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ. ಬ್ಯಾಪ್ಟಿಸ್ಟ್ ರೋಡ್ರಿಗಸ್ ಅವರ ಅಂತ್ಯಕ್ರಿಯೆ ಅಕ್ಟೋಬರ್ 6 ರಂದು ಮಂಗಳೂರಿನ ಕಾರ್ಮೆಲ್ ಹಿಲ್‌ನಲ್ಲಿರುವ ಇನ್‌ಫೆಂಟ್ ಜೀಸಸ್ ಶ್ರೈನ್‌ನಲ್ಲಿ ಮಧ್ಯಾಹ್ನ 3:30 ಕ್ಕೆ ನಡೆಯಲಿದೆ.

ಕೆನರಾ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಅಧ್ಯಕ್ಷರಾಗಿ ಅನಂತೇಶ್ ಪ್ರಭು ಆಯ್ಕೆ

ಮಂಗಳೂರು: ಕೆನರಾ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಇದರ 83 ನೇ ವಾರ್ಷಿಕ ಸಭೆಯಲ್ಲಿ ಚೇಂಬರ್ ನ ಅಧ್ಯಕ್ಷರಾಗಿ ಅನಂತೇಶ್ ವಿ ಪ್ರಭು ಅವರನ್ನು ಆಯ್ಕೆ ಮಾಡಲಾಯಿತು. ವಾಣಿಜ್ಯ ಸಂಸ್ಥೆಯ ಉಪಾಧ್ಯಕ್ಷರಾಗಿ ಆನಂದ್ ಪೈ ಗಣಪತಿ ಮತ್ತು ಖಜಾಂಚಿಯಾಗಿ ಅಬ್ದುರ್ ರಹಮಾನ್ ಮುಸ್ಬಾ ಆಯ್ಕೆಯಾದರು. 2023-24ನೇ ಸಾಲಿನ ಮಂಡಳಿಯ ಇತರ ಪದಾಧಿಕಾರಿಗಳು ಮತ್ತು ನಿರ್ದೇಶಕರು: ಗೌರವ ಕಾರ್ಯದರ್ಶಿಗಳು: ಪಿಬಿ ಅಹಮದ್ ಮುದಸ್ಸರ್ ಮತ್ತು ಅಶ್ವಿನ್ ಪೈ ಮರೂರು ನಿರ್ದೇಶಕರಾಗಿ: ನಿಟ್ಟೆ ಯತಿರಾಜ್ ಶೆಟ್ಟಿ, ಅಮಿತ್ ರಾಮಚಂದ್ರ, […]

ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ಅಂತಾರಾಷ್ಟ್ರೀಯ ಖ್ಯಾತಿಯ ಬಾಣಸಿಗ ವಿಕಾಸ್ ಖನ್ನಾ

ಉಡುಪಿ: ಅಂತಾರಾಷ್ಟ್ರೀಯ ಪ್ರಸಿದ್ಧಿಯ ಬಾಣಸಿಗ ಚಿತ್ರನಿರ್ಮಾಪಕ ವಿಕಾಸ್ ಖನ್ನಾ ಶ್ರೀಕೃಷ್ಣಮಠಕ್ಕಾಗಮಿಸಿ ದೇವರ ದರ್ಶನ ಪಡೆದುಕೊಂಡು ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಇವರಿಂದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಮಣಿಪಾಲದ ವೆಲ್ಕಮ್ ಗ್ರೂಪ್ ಹೋಟೆಲ್ ನ ಡಾ.ಕೆ.ತಿರುಗ್ನಾನಾಸಂಬಂತಮ್ ಮೊದಲಾದವರು ಉಪಸ್ಥಿತರಿದ್ದರು.

   ಸಂಚಾರದಲ್ಲಿ ವ್ಯತ್ಯಯ : ಬೆಂಗಳೂರು ರಾಜಾಜಿನಗರ  ಹಳಿ ತಪ್ಪಿದ ಮೆಟ್ರೋ ರೀ ರೈಲ್

ಬೆಂಗಳೂರು : ರಾಜಾಜಿನಗರ ಬಳಿ ನಮ್ಮ ಮೆಟ್ರೋ ರೀ ರೈಲು ಹಳಿ ತಪ್ಪಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ನಮ್ಮ ಮೆಟ್ರೋ ರೀ ರೈಲು ಹಳಿ ತಪ್ಪಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.ರಾಜಾಜಿನಗರ ಬಳಿ ಉಂಟಾದ ತಾಂತ್ರಿಕ ಸಮಸ್ಯೆ ಸರಿಪಡಿಸಲು ಮೆಟ್ರೋ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಮಧ್ಯಾಹ್ನದ ವೇಳೆಗೆ ಸಮಸ್ಯೆ ಸರಿಹೋಗುವ ಸಾಧ್ಯತೆ ಇದೆ. ಅಲ್ಲಿಯವರಿಗೆ ಈ ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿರಲಿದೆ. ಸದ್ಯ ರಾಜಾಜಿನಗರದಿಂದ ಮಂತ್ರಿ ಸ್ಕ್ವೇರ್ ಮತ್ತು ಯಶವಂತಪುರ ನಡುವಿನ ಮೆಟ್ರೋ ಸಂಚಾರ ಸ್ಥಗಿತವಾಗಿದ್ದು, ಪ್ರಯಾಣಿಕರು ಪರದಾಡಿದರು.