ಬ್ಯಾಡ್ಮಿಂಟನ್ನಲ್ಲಿ ಶುಭಾರಂಭ: ಏಷ್ಯನ್ ಗೇಮ್ಸ್: ಟೇಬಲ್ ಟೆನಿಸ್ನಲ್ಲಿ ಭಾರತಕ್ಕೆ ಚೊಚ್ಚಲ ಪದಕ
ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯಾಡ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪದಕ ಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. 13 ಚಿನ್ನ, 21 ಬೆಳ್ಳಿ ಮತ್ತು 22 ಕಂಚಿನ ಪದಕ ಸೇರಿದಂತೆ 56 ಪದಕಗಳನ್ನು ಭಾರತೀಯ ಸ್ಪರ್ಧಿಗಳು ಗೆದ್ದಿದ್ದು, ಪದಕಗಳ ಶತಕ ಬಾರಿಸುವ ಉತ್ಸಾಹದಲ್ಲಿದ್ದಾರೆ. ಏಷ್ಯನ್ ಗೇಮ್ಸ್ನಲ್ಲಿ ಟೇಬಲ್ ಟೆನಿಸ್ ಮಹಿಳೆಯರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಅಹಿಕಾ ಮುಖರ್ಜಿ ಮತ್ತು ಸುತೀರ್ಥ ಮುಖರ್ಜಿ ಉತ್ತರ ಕೊರಿಯಾದ ಸುಯೋಂಗ್ ಚಾ ಮತ್ತು ಸುಗ್ಯಾಂಗ್ ಪಾಕ್ ವಿರುದ್ಧ 4-3 ಅಂತರದಲ್ಲಿ ಸೋಲನುಭವಿಸಿ […]
ನಾಳೆ ಭಾರತ vs ನೇಪಾಳ ಪಂದ್ಯ, ಚಿನ್ನ ಗೆಲ್ಲುವತ್ತ IPL ಸ್ಟಾರ್ಗಳ ಚಿತ್ತ: ಏಷ್ಯನ್ ಗೇಮ್ಸ್
ಹ್ಯಾಂಗ್‌ಝೌ (ಚೀನಾ): ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನಾಡಿದ್ದು, ಒಂದು ಶತಕ ಮತ್ತು ಎರಡು ಅರ್ಧಶತಕದಿಂದ ಒಟ್ಟಾರೆ 7 ಅಂತರರಾಷ್ಟ್ರೀಯ ಪಂದ್ಯಗಳಿಂದ 398 ರನ್ ಕಲೆಹಾಕಿದ್ದಾರೆ. ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳನ್ನಾಡಿದ ರಿಂಕು ಸಿಂಗ್ಗೆ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. 19ನೇ ಏಷ್ಯಾಡ್ನಲ್ಲಿ ಭಾರತ ಕ್ರಿಕೆಟ್ ತಂಡ ಭಾಗವಹಿಸುತ್ತಿದ್ದು, ಚೊಚ್ಚಲ ಪ್ರಯತ್ನದಲ್ಲೇ ಚಿನ್ನ ಗೆಲ್ಲುವ ಭರವಸೆ ಇದೆ. ಏಷ್ಯಾಡ್ನಲ್ಲಿ ಅವರ ಬ್ಯಾಟ್ನಿಂದ ರನ್‌ಗಳನ್ನು ನಿರೀಕ್ಷಿಸಲಾಗುತ್ತಿದೆ. ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಪ್ರೀಮಿಯರ್ […]
ಸ್ವಯಂಸೇವೆಯ ಭಾಗವಾಗಿ ಪಾತ್ರೆ ತೊಳೆದ ರಾಹುಲ್ ಗಾಂಧಿ ಗೋಲ್ಡನ್ ಟೆಂಪಲ್ಗೆ ಭೇಟಿ
ಅಮೃತಸರ (ಪಂಜಾಬ್) : ಕಾಂಗ್ರೆಸ್ ನಾಯಕ, ಲೋಕಸಭೆ ಸಂಸದ ರಾಹುಲ್ ಗಾಂಧಿ ಅವರು ಸೋಮವಾರ ಅಮೃತಸರದ ಪ್ರಸಿದ್ಧ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿ, ಸ್ವಯಂಸೇವೆಯ ಭಾಗವಾಗಿ ಭಕ್ತರು ಬಳಸಿದ ಪಾತ್ರೆಗಳನ್ನು ತೊಳೆದರು.ಇದಕ್ಕೂ ಮೊದಲು ಸಿಖ್ ಸಂಪ್ರದಾಯದಂತೆ ತಲೆಗೆ ನೀಲಿ ಬಣ್ಣದ ಬಟ್ಟೆ ಸುತ್ತಿ ದೇಗುಲದ ಗರ್ಭಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ಸಿಖ್ಖರ ಅತ್ಯುನ್ನತ ಸ್ಥಾನ ಅಕಾಲ್ ತಕ್ತ್ಗೆ ಭೇಟಿ ನೀಡಿದರು. ಇಂದು ರಾಹುಲ್ ಇಲ್ಲಿ ನಡೆಯುವ ಫಲ್ಕಿ ಸೇವಾದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಪಂಜಾಬ್ನ […]
ಆರ್ಚರಿ, ಸ್ಕ್ವಾಷ್ನಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆ: 3,000 ಮೀ ಸ್ಟೀಪಲ್‌ಚೇಸ್‌ನಲ್ಲಿ ಭಾರತಕ್ಕೆ ಬೆಳ್ಳಿ, ಕಂಚು
ಹ್ಯಾಂಗ್‌ಝೌ (ಚೀನಾ): ಶೂಟಿಂಗ್ ವಿಭಾಗದ ನಂತರ ಭಾರತ ಅಥ್ಲೆಟಿಕ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಈವರೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ 2 ಚಿನ್ನ, 6 ಬೆಳ್ಳಿ ಮತ್ತು 6 ಕಂಚು ಸೇರಿದಂತೆ 13 ಪದಕಗಳು ಬಂದಿವೆ. ಏಷ್ಯಾಡ್ನ 9ನೇ ದಿನವಾದ ಸೋಮವಾರ 3,000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಹಾಗು ಕಂಚಿನ ಪದಕ ಗೌರವ ಸಿಕ್ಕಿದೆ. ಪಾರುಲ್ ಚೌಧರಿ 9:27.63 ಸೆಕೆಂಡ್ಗಳ ಸಮಯದಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ಪಡೆದರು. ಚೊಚ್ಚಲ ಏಷ್ಯನ್ ಗೇಮ್ಸ್ ಆಡುತ್ತಿರುವ ಪ್ರೀತಿ 9:43.32 […]
ಸೆಮಿಫೈನಲ್ ಪ್ರವೇಶಿಸಿದ ಹಾಕಿ ತಂಡ : ಲಾಂಗ್ ಜಂಪ್, 4×400 ಮೀ ಮಿಶ್ರ ತಂಡಕ್ಕೆ ಬೆಳ್ಳಿ
ಹ್ಯಾಂಗ್‌ಝೌ (ಚೀನಾ): ಏಷ್ಯಾಡ್ನಲ್ಲಿ ಭಾರತದ ಅಥ್ಲೀಟ್‌ಗಳು ಪದಕ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ.19ನೇ ಏಷ್ಯನ್ ಗೇಮ್ಸ್ನಲ್ಲಿ ಈವರೆಗೆ ಭಾರತ 60 ಪದಕಗಳನ್ನು ಬಾಚಿಕೊಂಡಿದೆ. 9ನೇ ದಿನವಾದ ಇಂದು ರೋರಲ್ ಸ್ಕೇಟಿಂಗ್, ಟೇಬಲ್ ಟೆನಿಸ್, ಸ್ಟೀಪಲ್‌ಚೇಸ್‌ನಲ್ಲಿ ಪದಕಗಳು ಬಂದಿವೆ. ಸಂಜೆ ನಡೆದ ಸ್ಪರ್ಧೆಯಲ್ಲಿ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಆನ್ಸಿ ಸೋಜನ್ ಎಡಪ್ಪಿಳ್ಳಿ ಮತ್ತು 4×400 ಮೀ ಮಿಶ್ರ ತಂಡ ಬೆಳ್ಳಿ ಗೆದ್ದುಕೊಂಡಿತು.ಇನ್ನು ಹತ್ತು ಪದಕ ಗೆದ್ದರೆ ಕಳೆದ ಬಾರಿಯ ದಾಖಲೆ ಮುರಿಯಲಿದೆ. 2018ರಲ್ಲಿ ಒಟ್ಟಾರೆ 70 ಪದಕಗಳನ್ನು ಭಾರತೀಯ ಅಥ್ಲೀಟ್‌ಗಳು ಗೆದ್ದಿದ್ದರು. […]