ಇದೇ ಮೊದಲ ಬಾರಿಗೆ ರಾಜ್ಯ ರಾಜಧಾನಿಯಲ್ಲಿ ನಡೆಯಲಿದೆ ತುಳುನಾಡಿನ ಕಂಬಳ: 100ಕ್ಕೂ ಹೆಚ್ಚು ಕೋಣಗಳ ಪ್ರಯಾಣಕ್ಕೆ ಭರದ ಸಿದ್ದತೆ
ಮಂಗಳೂರು: ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮೊದಲ ಕಂಬಳ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ರಾಜ್ಯರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯ ಜನಪದ ಕ್ರೀಡೆ ‘ಕಂಬಳ’ದ ಅನಾವರಣವಾಗಲಿದ್ದು ಸುಮಾರು 100 ರಿಂದ 130 ಕೋಣಗಳು ಮಂಗಳೂರಿನಿಂದ ಮೆರವಣಿಗೆಯಲ್ಲಿ ಸಾಗಲಿವೆ ಎಂದು ಟಿಒಐ ವರದಿ ಮಾಡಿದೆ. ಶನಿವಾರದಂದು ಕಂಬಳದ ಕೋಣಗಳ ಮಾಲಕರೊಂದಿಗೆ ಪ್ರಾಥಮಿಕ ಸಭೆ ನಡೆಸಿದ ಬಳಿಕ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಉಡುಪಿ ಮತ್ತು ದ.ಕ ಜಿಲ್ಲೆಗಳ ಜಿಲ್ಲಾ […]
ಅ. 3 ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜಿಲ್ಲಾ ಪ್ರವಾಸ
ಉಡುಪಿ: ಕರ್ನಾಟಕ ಸರ್ಕಾರದ ಘನವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅಕ್ಟೋಬರ್ 3 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 10.30 ಕ್ಕೆ ಪ್ರವಾಸಿ ಮಂದಿರಕ್ಕೆ ಆಗಮಿಸಲಿದ್ದು, 10.50 ಕ್ಕೆ ಕೋಟದಲ್ಲಿ ನಡೆಯಲಿರುವ ಡಾ. ಶಿವರಾಮ ಕಾರಂತ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 12.40 ಕ್ಕೆ ಕೊಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಫ್ರೆಷರ್ಸ್ ಡೇ ಆಚರಣೆ
ಬ್ರಹ್ಮಾವರ: ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಗುರುತಿಸಿ ಸ್ವಾಗತಿಸುವ ಕಾರ್ಯಕ್ರಮವನ್ನು ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಆಗಮಿಸಿದ್ದರು. ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇದರ ಸಂಸ್ಥಾಪಕ ಸುಬ್ರಮಣ್ಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿದ್ಯಾಲಕ್ಷ್ಮೀ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಕುಮಾರಿ ರಮ್ಯಾ , ಕುಮಾರಿ ಸೌಜನ್ಯ ಮತ್ತು ಪ್ರಭಾಕರ ತಿಂಗಳಾಯ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಬಡನಿಡಿಯೂರು, ನಿರ್ದೇಶಿಕಿ ಮಮತಾ […]
ಸಮಗ್ರ ಕೃಷಿ ಪದ್ಧತಿ ಉತ್ತೇಜನಕ್ಕಾಗಿ ಪ್ರೋ. ಜಿ.ಕೆ ವೀರೇಶ್ ಎಂಡೋಮೆಂಟ್ ಫಂಡ್: ಅರ್ಜಿ ಆಹ್ವಾನ
ಉಡುಪಿ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಸ್ಥಾಪಕ ಅಧ್ಯಕ್ಷರು ಅಲ್ಯುಮಿನಿ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಪ್ರೊ. ಜಿ.ಕೆ ವೀರೇಶ್ ರವರು 15 ಲಕ್ಷ ರೂ. ಗಳನ್ನು ರಾಜ್ಯದ ಸಮಗ್ರ ಕೃಷಿ ಪದ್ಧತಿ ಉತ್ತೇಜನಕ್ಕಾಗಿ ಅಲ್ಯುಮಿನಿ ಅಸೋಸಿಯೇಷನ್‌ಗೆ ದಾನ ನೀಡಿದ್ದು, ಈ ವಿಷಯವಾಗಿ ವಾರ್ಷಿಕ ಉತ್ತರ, ದಕ್ಷಿಣ ಹಾಗೂ ಕರಾವಳಿ ಅಥವಾ ಮಲೆನಾಡು ಭಾಗಗಳಿಂದ ಕೃಷಿ ವಿಶ್ವವಿದ್ಯಾಲಯಗಳ ವಿಸ್ತರಣಾ ನಿರ್ದೇಶಕರು, ಹಿರಿಯ ವಿಜ್ಞಾನಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಸಂಬಂಧಿತ ಜಿಲ್ಲೆಯ ಜಂಟಿ ಕೃಷಿ […]
ಉಪ್ಪುಂದ: ಮತ್ಸಸಂಜೀವಿನಿ ಮೀನುಗಾರರ ಉತ್ಪಾದಕರ ಕಂಪನಿಯ ವಾರ್ಷಿಕ ಮಹಾಸಭೆ
ಉಪ್ಪುಂದ: ಮತ್ಸಸಂಜೀವಿನಿ ಮೀನುಗಾರರ ಉತ್ಪಾದಕರ ಕಂಪನಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಮತ್ತುಷೇರು ಪ್ರಮಾಣ ಪತ್ರ ವಿತರಣೆಯು ನಾಡದೋಣಿ ಭವನ ಉಪ್ಪುಂದಲ್ಲಿ ಇಲ್ಲಿ ನಡೆಯಿತು. SCDCC ಬ್ಯಾಂಕ್ ಮ್ಯಾನೇಜರ್ ಶಂಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶೇರು ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಕಂಪನಿಯನ್ನು ಗ್ರಾಮೀಣ ಭಾಗದ ರೈತರಿಗೆ ಮತ್ತು ಮೀನುಗಾರರಿಗೆ ಉತ್ತಮವಾದ ಆದಾಯಬರುವ ರೀತಿಯಲ್ಲಿ ಉಪ್ಪುಂದದಲ್ಲಿ ಸ್ಥಾಪಿಸಲಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಉಪ್ಪುಂದ ಸಂಸ್ಥೆ ಅಧ್ಯಕ್ಷ ಎ. ಆನಂದ ಖಾರ್ವಿ ಮಾತನಾಡಿ, ಮೀನುಗಾರಿಕೆ ಇಲಾಖೆ ಮತ್ತು ಕೃಷಿ […]