ಹಾಕಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತೀಯ ಪುರುಷರ ಹಾಕಿ ತಂಡವು ತನ್ನ ನೆರೆಯ ಎದುರಾಳಿ ಪಾಕಿಸ್ತಾನದ ವಿರುದ್ಧ 10-2 ಅಂತರದ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಗೆಲುವಿನ ಓಟವನ್ನು ಮುಂದುವರಿಸಿದೆ.ಈ ಪಂದ್ಯದಲ್ಲಿ ಭಾರತದ ಫಾರ್ವರ್ಡ್ ಆಟಗಾರ ಲಲಿತ್ ಕುಮಾರ್ ಉಪಾಧ್ಯಾಯ ತಮ್ಮ 150ನೇ ಅಂತಾರಾಷ್ಟ್ರೀಯ ಕ್ಯಾಪ್ ಧರಿಸಿದರು. ನಡೆಯುತ್ತಿರುವ 19ನೇ ಏಷ್ಯನ್​ ಗೇಮ್ಸ್​ನಲ್ಲಿ ಭಾರತ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚು ಗೆದ್ದು, ಒಟ್ಟು 38 ಪದಕದಿಂದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು […]

ಇ- ಪೋರ್ಟ್​ನಲ್ಲಿ ಸಾಧಕರ ನಾಮನಿರ್ದೇಶನಕ್ಕೆ ಅವಕಾಶ : 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಧಾನ ಮಾಡಲಾಗುವ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಾಗಿ ಇಂದಿನಿಂದ (ಅಕ್ಟೋಬರ್ 1) ಅರ್ಜಿ ಸಲ್ಲಿಸಬಹುದಾಗಿದೆ.ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಾಮನಿರ್ದೇಶನ ಮಾಡಬಹುದಾಗಿದ್ದು, ನಾಮನಿರ್ದೇಶನದ ಅವಧಿ ಅ.1 ರಿಂದ ಅ. 15ರ ವರೆಗೆ ಇರಲಿದೆ2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾಧಕರ ನಾಮನಿರ್ದೇಶನಕ್ಕೆ ಇಂದಿನಿಂದ ಅ.15ರ ವರೆಗೆ ಅವಕಾಶ ನೀಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ಹೊರಡಿಸಿದೆ. ಆಯ್ಕೆ ಸಮಿತಿ ರಚನೆ: 2023ನೇ ಸಾಲಿನ […]

ಗಂಗಾವತಿಯಲ್ಲಿ ಆದಿ ಮಾನವ ಕಾಲಕ್ಕೆ ಸೇರಿದ್ದ 2 ಸಾವಿರ ವರ್ಷ ಹಿಂದಿನ ವಾಸದ ಮತ್ತೊಂದು ನೆಲೆ ಪತ್ತೆ

ಗಂಗಾವತಿ : ಇಲ್ಲಿನ ಹಿರೇಬೆಣಕಲ್​ನಲ್ಲಿ ಸುಮಾರು ಎರಡು ಸಾವಿರ ವರ್ಷದ ಆದಿ ಮಾನವ ವಾಸದ ನೆಲೆಗಳು ಪತ್ತೆಯಾದ ಬೆನ್ನಲ್ಲೇ ಇದೀಗ ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅದೇ ಕಾಲಮಾನಕ್ಕೆ ಸೇರಿದ್ದಿರಬಹುದು ಎಂದು ಊಹಿಸಲಾದ ಆದಿ ಮಾನವರ ವಾಸದ ಮತ್ತೊಂದು ನೆಲೆ ಪತ್ತೆಯಾಗಿದೆ. ಗಂಗಾವತಿಯ ಹೆಚ್.ಆರ್.ಜಿ ನಗರದ ಸಮೀಪ ಇರುವ ಬೆಟ್ಟದಲ್ಲಿ ಆದಿ ಮಾನವರ ಕಾಲಮಾನಕ್ಕೆ ಸೇರಿದ್ದು ಎನ್ನಲಾದ ಮಾನವನ ನೆಲೆ ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ತಾಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇತಿಹಾಸಕಾರರು ಅಥವಾ ಸಂಶೋಧಕರು […]

ಅಫ್ಘಾನಿಸ್ತಾನ : ಭಾರತದಲ್ಲಿದ್ದ ತನ್ನ ರಾಯಭಾರ ಕಚೇರಿಯ ಕಾರ್ಯಾಚರಣೆ ಸ್ಥಗಿತ

ನವದೆಹಲಿ : ಭಾರತದಲ್ಲಿನ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ಅಕ್ಟೋಬರ್ 1 ರಿಂದ ತನ್ನ ಕಾರ್ಯಾಚರಣೆಯನ್ನು ಮುಚ್ಚುವುದಾಗಿ ಘೋಷಿಸಿದೆ. ರಾಯಭಾರ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ಈ ಮಾಹಿತಿ ನೀಡಲಾಗಿದೆ.ಭಾರತದಲ್ಲಿನ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ಇಂದಿನಿಂದ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ. ಸುಗಮ ಕಾರ್ಯನಿರ್ವಹಣೆಗೆ ಅಗತ್ಯವಾದ ಬೆಂಬಲ ಮತ್ತು ಸಂಪನ್ಮೂಲಗಳ ಕೊರತೆ ಸೇರಿದಂತೆ ಇತರೆ ಸಮಸ್ಯೆಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ತಿಳಿಸಿದೆ. ಈ ಕುರಿತು ಅಧಿಕೃತ ಹೇಳಿಕೆಯಲ್ಲಿ ವಿಷಾದ ವ್ಯಕ್ತಪಡಿಸಿ, “ನವದೆಹಲಿಯಲ್ಲಿರುವ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ತನ್ನ ಕಾರ್ಯಾಚರಣೆಯನ್ನು […]

’14 ನಿಮಿಷಗಳ ಮಿರಾಕಲ್​’ ಸ್ವಚ್ಛತೆ ಆರಂಭ : ವಂದೇ ಭಾರತ್​ ರೈಲು

ನವದೆಹಲಿ: ಭಾರತೀಯ ರೈಲ್ವೆಯು ಇಂದಿನಿಂದ ರೈಲುಗಳ ತ್ವರಿತ ಶುಚಿಗೊಳಿಸುವಿಕೆಗಾಗಿ ’14 ನಿಮಿಷಗಳ ಮಿರಾಕಲ್​’ ಪರಿಕಲ್ಪನೆಯನ್ನು ಪರಿಚಯಿಸುತ್ತಿದೆ. ಅಧಿಕೃತವಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದೆಹಲಿ ಕ್ಯಾಂಟ್ ರೈಲು ನಿಲ್ದಾಣದಲ್ಲಿ ಪ್ರಾರಂಭಿಸಲಿದ್ದಾರೆ. ದೇಶಾದ್ಯಂತ 29 ವಂದೇ ಭಾರತ್ ರೈಲುಗಳಲ್ಲಿ ಅವುಗಳ ನಿಗದಿತ ನಿಲ್ದಾಣದಲ್ಲಿ ಈ ಕಾರ್ಯ ಆರಂಭವಾಗಲಿದೆ.ವಂದೇ ಭಾರತ್​ ರೈಲುಗಳಲ್ಲಿ ಇಂದಿನಿಂದ 14 ನಿಮಿಷದ ಮಿರಾಕಲ್​ ಸ್ವಚ್ಛತಾ ಪರಿಕಲ್ಪನೆ ಆರಂಭ. ಈಗಾಗಲೇ ಈ ಚಟುವಟಿಕೆಯಲ್ಲಿ ತೊಡಗಿರುವ ಮುಂಚೂಣಿಯಲ್ಲಿರುವ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸದೆ ಸ್ವಚ್ಛತಾ ವ್ಯಕ್ತಿಗಳ ದಕ್ಷತೆ, ಕೌಶಲ್ಯ […]