ಮುಂಡ್ಕಿನಜೆಡ್ಡು: ಸುಲೋಚನ ಪ್ರಭು ನಿಧನ

ಮುಂಡ್ಕಿನಜೆಡ್ಡು: ದಿ. ರಾಮಚಂದ್ರ ಪ್ರಭು (ದಿಂಡು ಮಾಸ್ಟರ್ )ರವರ ಧರ್ಮಪತ್ನಿ 86 ವರ್ಷ ಪ್ರಾಯದ ಸುಲೋಚನ ಪ್ರಭು ನಿನ್ನೆ ರಾತ್ರಿ 12.15 ಗಂಟೆಗೆ ನಿಧನರಾಗಿದ್ದಾರೆ. ಇವರು ಮೂರು ಗಂಡು ಹಾಗೂ ಒಂದು ಹೆಣ್ಣು ಮಗಳು ಮತ್ತು ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಅ.3 ರಂದು ಕಟ್ಟಡ ಸಾಮಾಗ್ರಿ ಸಾಗಾಟ ವಾಹನಗಳ ಮುಷ್ಕರ

ಉಡುಪಿ: ಕಟ್ಟಡ ಸಾಮಾಗ್ರಿ ಸಾಗಾಟ ವಾಹನಗಳು ಅ.3 ರಂದು ಮುಷ್ಕರ ಘೋಷಿಸಲು ನಿರ್ಧರಿಸಿವೆ. ಪರವಾನಗಿ ಸಮಸ್ಯೆಯಲ್ಲಿ ಸಿಲುಕಿರುವ ಲಾರಿ ಹಾಗೂ ಟೆಂಪೋ ಮಾಲೀಕರ ಸಂಘಟನೆಗಳ ಒಕ್ಕೂಟವು ಹಲವು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದೆ. ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹಾಗೂ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ ಸಮಕ್ಷಮದಲ್ಲಿ ಸಭೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಒಕ್ಕೂಟದ 12 ವಲಯಾಧ್ಯಕ್ಷರು ಮತ್ತು ಪ್ರಮುಖರು ಶುಕ್ರವಾರ ಸಭೆ ನಡೆಸಿ ಅ.3 ರಂದು ಬಂದ್ ಗೆ ಕರೆ ನೀಡಿದ್ದಾರೆ. ಬಂದ್ ಸಂಬಂಧ […]

ಫೆ. 11 ರಂದು 6 ನೆಯ ಮಣಿಪಾಲ್‌ ಮ್ಯಾರಥಾನ್‌ ಆಯೋಜನೆ

ಮಣಿಪಾಲ: ಜೀವನ್ಮರಣ (ಪ್ರಾಣಾಂತಿಕ)ಸ್ಥಿತಿಯಲ್ಲಿರುವ ರೋಗಿಗಳ ಪ್ರಶಾಮಕ ಆರೈಕೆ ಕೇಂದ್ರದ ಉದ್ದೇಶಿತ ಉದಾತ್ತ ಆಶಯದೊಂದಿಗೆ 6 ನೆಯ ಮಣಿಪಾಲ್‌ ಮ್ಯಾರಥಾನ್‌ ಅನ್ನು 2024 ರ ಫೆಬ್ರವರಿ 11 ರಂದು ಆಯೋಜಿಸಲಾಗುವುದು ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌ ಮಾಹಿತಿ ನೀಡಿದರು. ಅವರು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಲದ ಮ್ಯಾರಥಾನ್‌ ‘ಜೀವನ್ಮರಣ (ಪ್ರಾಣಾಂತಿಕ)ಕಾಯಿಲೆಯನ್ನು ಅನುಭವಿಸುತ್ತಿರುವ ರೋಗಿಗಳಿಗೆ ಪ್ರಶಾಮಕ ಆರೈಕೆ ಕೇಂದ್ರ [ಹಾಸ್ಪಿಸ್‌ ಕೇರ್‌] ಎಂಬ ಉದಾತ್ತ ಆಶಯವನ್ನು ಹೊಂದಿದೆ. ‘ನಾವು ನಿಮ್ಮ […]

ಮಾಹೆ ಗಾಂಧಿಯನ್ ಸೆಂಟರ್ ನಲ್ಲಿ ಡೆವಲಪ್ಮೆಂಟ್ ಕಮ್ಯುನಿಕೇಷನ್ ಕುರಿತು ಉಪನ್ಯಾಸ

ಮಣಿಪಾಲ: ನ್ಯೂಮೀಡಿಯಾ ಮತ್ತು ನೆಟ್‌ವರ್ಕ್ ಸೊಸೈಟಿಯ ಆಗಮನ ‘ಡೆವಲಪ್ಮೆಂಟ್ ಕಮ್ಯುನಿಕೇಷನ್’ನ ಪಥವನ್ನೇ ಬದಲಾಯಿಸಿದೆ. ನ್ಯೂಮೀಡಿಯಾವು ನೆಟ್‌ವರ್ಕ್ ಸೊಸೈಟಿಯ ಬೆಳವಣಿಗೆಯನ್ನು ಸುಗಮಗೊಳಿಸಿ ‘ಅಭಿವೃದ್ಧಿ’ ಕುರಿತ ಚರ್ಚೆಯ ಮೇಲೆ ಪರಿಣಾಮ ಬೀರಿದೆ ಎಂದು ತಮಿಳುನಾಡಿನ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ.ಬಿ.ಪಿ.ಸಂಜಯ್ ಹೇಳಿದರು. ಇವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ ಅಂಡ್ ಸೈನ್ಸಸ್‌ನಲ್ಲಿ ‘ಡೆವಲಪ್ಮೆಂಟ್ ಕಮ್ಯುನಿಕೇಷನ್’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಡೆವಲಪ್ಮೆಂಟ್ ಕಮ್ಯುನಿಕೇಷನ್ ಕುರಿತ ಚರ್ಚೆ ವಸಾಹತುಶಾಹಿ, ರಾಷ್ಟ್ರೀಯತೆ ಮತ್ತು ಸಮೂಹ ಮಾಧ್ಯಮಗಳ ಅಶ್ರಗದ […]

ವಿವಿಧ ಪಂದ್ಯಾಟ: ಶ್ರೀ ವೆಂ.ಪ.ಪೂ.ಕಾಲೇಜು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕುಂದಾಪುರ: ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಜ್ಯೋತಿ ಪದವಿ ಪೂರ್ವ ಕಾಲೇಜು ಅಜೆಕಾರ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟ ದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸ್ರವೀಶ್ ಶೆಟ್ಟಿ ಕಾಲೇಜು ತಂಡವನ್ನು ಪ್ರತಿನಿಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಅಮೆಚೂರ್ ಅಸೋಸಿಯೇಶನ್ ಅವರು 18 ಹಾಗೂ 23 ವರ್ಷದೊಳಗಿನವರಿಗಾಗಿ ಆಯೋಜಿಸಿದ ರಾಜ್ಯ ಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ […]