ನಟ ಶಿವರಾಜಕುಮಾರ್ ”ಸರಕಾರಗಳು ಕೂಲಂಕುಷವಾಗಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು”

ಬೆಂಗಳೂರು, ಸೆ.29: . ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳು ಕೂಲಂಕುಷವಾಗಿ ಪರಿಶೀಲಿಸಿ ಕಾವೇರಿ ನದಿ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ನಟ ಶಿವರಾಜ್‍ಕುಮಾರ್ ತಿಳಿಸಿದ್ದಾರೆ.ಕಲಾವಿದರು ಬಂದು ನಿಂತು ಧರಣಿ ನಡೆಸಿದರೆ ಪರಿಹಾರ ಸಮಸ್ಯೆ ಆಗುವುದಿಲ್ಲ.ನಾವು ಆಯ್ಕೆ ಮಾಡಿರುವ ಸರಕಾರ ಈ ವಿವಾದವನ್ನು ಬಗೆಹರಿಸಬೇಕು ಎಂದರು. ಶುಕ್ರವಾರ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಸುಮಾರು ವರ್ಷಗಳ ಕಾಲದಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಹೋರಾಟದಲ್ಲಿ ಯಾವಾಗಲೂ ನಂಬಿಕೆ ಮತ್ತು ವಿಶ್ವಾಸದಿಂದ […]

ಗ್ರಾಹಕರು ಹೈರಾಣು : ಸಿಮ್ ಪೋರ್ಟೆಬಿಲಿಟಿಗೆ ಕಂಪನಿಗಳ ಕಿರಿಕಿರಿ

ನವದೆಹಲಿ : ಕಳೆದ 24 ತಿಂಗಳ ಅವಧಿಯಲ್ಲಿ ಸಿಮ್ ಪೋರ್ಟ್ ಮಾಡಿಕೊಂಡ ಪ್ರತಿ ನಾಲ್ವರ ಪೈಕಿ ಒಬ್ಬರು ಪೋರ್ಟ್ ಮಾಡಿಕೊಳ್ಳಲು ತೀರಾ ಕಷ್ಟಪಟ್ಟಿದ್ದಾರೆ ಎಂದು ಶುಕ್ರವಾರ ಬಂದ ಹೊಸ ವರದಿಯೊಂದು ಹೇಳಿದೆ. ಸಿಮ್ ಕಾರ್ಡ್ ಪೋರ್ಟ್ ಮಾಡುವಾಗ ಟೆಲಿಕಾಂ ಕಂಪನಿಗಳು ಅನಗತ್ಯವಾಗಿ ನಿಧಾನ ಮಾಡುತ್ತಿವೆ ಎಂದು ಹಲವಾರು ಗ್ರಾಹಕರು ದೂರುತ್ತಿದ್ದಾರೆಕೇವಲ ಶೇ 47 ರಷ್ಟು ಗ್ರಾಹಕರು ಮಾತ್ರ ತಮ್ಮ ಪೋರ್ಟಿಂಗ್ ಸುಲಭವಾಗಿ ಆಯಿತು ಎಂದು ಹೇಳಿಕೊಂಡಿದ್ದಾರೆ.ಒಂದು ಟೆಲಿಕಾಂ ಕಂಪನಿಯ ಸಿಮ್ ಹೊಂದಿರುವವರು ಇನ್ನೊಂದು ಟೆಲಿಕಾಂ ಕಂಪನಿಯ ಸೇವೆಗೆ […]

ಯಶ್ ಮುಂದಿನ ಸಿನಿಮಾ ‘ಕೆಜಿಎಫ್ 3’ : ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್ 

ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕಳೆದೊಂದು ವರ್ಷದಿಂದ ಟ್ರೆಂಡಿಂಗ್ನಲ್ಲಿರುವ ಹೆಸರು. ಹೊಂಬಾಳೆ ಫಿಲ್ಮ್ಸ್ ಮತ್ತೊಮ್ಮೆ ಯಶ್ ಜೊತೆಗೆ ಕೈ ಜೋಡಿಸಲಿದ್ದು, ಕೆಜಿಎಫ್ 3 ನಿರ್ಮಾಣವಾಗಲಿದೆ ಎಂದು ಹತ್ತಿರದ ಮೂಲಗಳು ಬಹಿರಂಗಪಡಿಸಿದೆ.   ಕೆಜಿಎಫ್ 2 ಬಳಿಕ ನಟನ ಯಾವುದೇ ಸಿನಿಮಾ ಅನೌನ್ಸ್ ಆಗಿಲ್ಲ. ಅಭಿಮಾನಿಗಳು ಎಷ್ಟೇ ಬೇಡಿಕೆ ಇಟ್ಟರೂ ರಾಕಿಭಾಯ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ, ಕಳೆದ […]

ಕ್ವಾರ್ಟರ್ – ಫೈನಲ್‌ ಪ್ರವೇಶಿಸಿದ ಪರ್ವೀನ್ ಹೂಡಾ : ಪದಕದ ಸುತ್ತಿಗೆ ಬೋಪಣ್ಣ- ಭೋಸಲೆ ಜೋಡಿ 

ಹ್ಯಾಂಗ್‌ಝೌ (ಚೀನಾ): .ಭಾರತದ ಜೋಡಿಯು ಮೊದಲ ಸೆಟ್ನ ಆರಂಭಿಕ ಲಾಭವನ್ನು ಪಡೆದು 28 ನಿಮಿಷದಲ್ಲಿ ವಶ ಪಡಿಸಿಕೊಂಡಿದೆ. 19ನೇ ಏಷ್ಯನ್ ಗೇಮ್ಸ್ನಲ್ಲಿ ಇದು ವರೆಗೆ ಒಟ್ಟು 32 ಪದಕಗಳನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.   ಮೂರನೇ ಶ್ರೇಯಾಂಕದ ಚೈನೀಸ್ ತೈಪೆ ಜೋಡಿಯು ಎರಡನೇ ಸೆಟ್‌ನಲ್ಲಿ ಪುನರಾಗಮನ ಮಾಡಿದೆ. 43 ವರ್ಷದ ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಅವರ ಜೋಡಿ ಏಷ್ಯನ್ ಗೇಮ್ಸ್ನಲ್ಲಿ ಫೈನಲ್ ಪ್ರವೇಶಿಸಿದೆ. ಎರಡನೇ ಸೆಟ್ […]

ದೆಹಲಿ ಹೈಕೋರ್ಟ್ : ವಿಶ್ವಕಪ್ ಪಂದ್ಯಗಳ ಅನಧಿಕೃತ ಪ್ರಸಾರ, ಸ್ಟ್ರೀಮಿಂಗ್ಗೆ ನಿರ್ಬಂಧ

ನವದೆಹಲಿ: ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಯಾವುದೇ ಭಾಗವನ್ನು ಅನುಮತಿ ಅಥವಾ ಪರವಾನಗಿ ಇಲ್ಲದೆ ಪ್ರಸಾರ ಹಾಗೂ ಸ್ಟ್ರೀಮಿಂಗ್ ಮಾಡುವುದಕ್ಕೆ ದೆಹಲಿ ಹೈಕೋರ್ಟ್ ನಿರ್ಬಂಧ ಹೇರಿದೆ. ಮುಂಬರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್-2023 ಟೂರ್ನಿಯನ್ನು ಅನಧಿಕೃತವಾಗಿ ಪ್ರಸಾರ ಹಾಗೂ ಸ್ಟ್ರೀಮಿಂಗ್ ಮಾಡದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ದೆಹಲಿ ಹೈಕೋರ್ಟ್ ನಿರ್ಬಂಧಿಸಿ ಮಹತ್ವದ ಆದೇಶ ಹೊರಡಿಸಿದೆ.ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ ವಿಶ್ವಕಪ್‌ನಂತಹ ವಿವಿಧ ಐಸಿಸಿ ಕಾರ್ಯಕ್ರಮಗಳ ದೂರದರ್ಶನ ಮತ್ತು ಡಿಜಿಟಲ್ ಹಕ್ಕುಗಳು ಸೇರಿದಂತೆ ವಿಶೇಷ ಜಾಗತಿಕ ಮಾಧ್ಯಮ ಹಕ್ಕುಗಳನ್ನು ನಾವು […]