ಅಂತರ್ ಕಾಲೇಜು ಭಕ್ತಿ ಗೀತೆ ಸ್ಪರ್ಧೆ: ಶ್ರೀ ವೆಂ.ಪ. ಪೂ.ಕಾಲೇಜಿನ ವಿದ್ಯಾರ್ಥಿನಿ ಧಾರಿಣಿಗೆ ಪ್ರಥಮ ಸ್ಥಾನ

ಕುಂದಾಪುರ: ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಬಸ್ರೂರಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನಡೆದ ಕುಂದಾಪುರ ತಾಲೂಕು ಮಟ್ಟದ ಅಂತರ್ ಕಾಲೇಜು ಭಕ್ತಿಗೀತೆ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧಾರಿಣಿ ಕೆ. ಎಸ್. ಪ್ರಥಮ ಸ್ಥಾನ ಪಡೆದಿರುತ್ತಾಳೆ. ವಿದ್ಯಾರ್ಥಿನಿಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಸೆ. 29 ರಂದು ಆನೆಗುಂದಿಶ್ರೀಗಳ ಚಾತುರ್ಮಾಸ್ಯ ಸೀಮೋಲ್ಲಂಘನ; ದಿಗ್ವಿಜಯ ಮೆರವಣಿಗೆ

ಕಟಪಾಡಿ: ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಸೆ.29 ರಂದು ಸಮಾಪ್ತಿಗೊಳ್ಳಲಿದ್ದು, ಅಂದು ಸೀಮೋಲ್ಲಂಘನ, ದಿಗ್ವಿಜಯ ಮೆರವಣಿಗೆ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ. ವಿಶ್ವಕರ್ಮ ಯಜ್ಞದ ಬಳಿಕ ಮಹಾಸಂಸ್ಥಾನದ ಮಠದ ಸಮೀಪದಲ್ಲಿ ಸೀಮೋಲ್ಲಂಘನ-ದಿಗ್ವಿಜಯ ಮೆರವಣಿಗೆಯ ಮೂಲಕ ಕಟಪಾಡಿ ವೃಂದಾವನ, ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ, ಮಹಾಸಂಸ್ಥಾನದ ಸಂದರ್ಶನ ಸೇವೆ ಸಮರ್ಪಣೆ ಮತ್ತು ಪೂಜೆಯ ನಂತರ ಕಾಪು ಕಾಳಿಕಾಂಬಾ ದೇವಳ ಪಡುಕುತ್ಯಾರು, ಶ್ರೀ ದುರ್ಗಾದೇವಿ ಮಂದಿರವಾಗಿ ಆನೆಗುಂದಿ ಮಠಕ್ಕೆ […]
ಪ್ರವಾಸೋದ್ಯಮದಲ್ಲಿ ಸ್ಥಳೀಯ ಪರಂಪರೆಗೆ ಒತ್ತು ನೀಡಿ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಉಡುಪಿ: ಕರಾವಳಿ ಪ್ರವಾಸೋದ್ಯಮ ಕ್ಷೇತ್ರಗಳನ್ನು ಪ್ರವಾಸಿಗರ ಅಗತ್ಯಕ್ಕೆ ತಕ್ಕಂತೆ ಸ್ಥಳೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಕಲೆಗಳಿಗೆ ಒತ್ತು ನೀಡಿ ಅಭಿವೃದ್ಧಿಗೊಳಿಸುವುದರೊಂದಿಗೆ ಜನಾಕರ್ಷಣೆಗೊಳಿಸಬೇಕು ಎಂದು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಬುಧವಾರ ನಗರದ ಅಜ್ಜರಕಾಡು ಪುರಭವನದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ನಗರಸಭೆ ಹಾಗೂ ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ ಜಿಲ್ಲೆಯ ರಮಣೀಯ ಪ್ರಕೃತಿ ಸೌಂದರ್ಯ, ಕಡಲ ತೀರ, ಇಲ್ಲಿನ […]
ಪರಶುರಾಮರ ನಕಲಿ ಮೂರ್ತಿ ಪ್ರತಿಷ್ಠಾಪನೆ ಹಿಂದೂ ಧರ್ಮಕ್ಕೆ ಬಗೆದ ದ್ರೋಹ: ಸುಭಾಸ್ ಚಂದ್ರ ಹೆಗ್ಡೆ

ಕಾರ್ಕಳ: ಕರಾವಳಿಯ ಸೃಷ್ಟಿಯ ಕಾರಣಕರ್ತ ಎಂದು ನಾವೆಲ್ಲರೂ ಧಾರ್ಮಿಕ ನಂಬಿಕೆ ಇರಿಸಿ ಕೊಂಡಿದ್ದ ಪರಶುರಾಮರ ಚರಿತ್ರೆಗೆ ಭೈರವ ಅರಸರ ಊರಲ್ಲಿ ಮಸಿ ಬಳಿಯಲು ಹೊರಟಿರುವ ಕಾರ್ಕಳದ ರಾಜಕೀಯ ನಾಯಕರ ರಾಜಕೀಯ ಶೈಲಿಯು ಧರ್ಮವನ್ನೇ ಅಧಪತನ ಮಾಡಲು ಹೊರಟಿರುವುದು ತೀರಾ ಖಂಡನೀಯ ವಿಚಾರ ಎಂದು ಸುಭಾಸ್ ಚಂದ್ರ ಹೆಗ್ಡೆ ಹೇಳಿದ್ದಾರೆ. ಕಾರ್ಕಳದಲ್ಲಿ ಕಂಚಿನ ಪರಶುರಾಮ ಮೂರ್ತಿಯ ನಿರ್ಮಾಣ ಆಗುವ ಸಂದರ್ಭದಲ್ಲಿ ಎಲ್ಲರೂ ಸಂತಸ ಪಟ್ಟಿದ್ದರು. ಧರ್ಮದ ವಿಚಾರ ಬಂದಾಗ ಕರಾವಳಿಯಲ್ಲಿ ಎಲ್ಲಾ ಹಿಂದೂಗಳು ಕೂಡ ಒಟ್ಟಾಗುತ್ತಾರೆ. ಈ ಹಿಂದೂ […]
ಉಡುಪಿ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ, ಉಪಾಧ್ಯಕ್ಷರಾಗಿ ಮಹೇಶ್ ಅಂಚನ್ ಅವಿರೋಧ ಆಯ್ಕೆ

ಉಡುಪಿ: ಉಡುಪಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ಲಿ.) ಉಡುಪಿ ಇದರ ಅಧ್ಯಕ್ಷರಾಗಿ ಅಲೆವೂರು ಹರೀಶ್ ಕಿಣಿ, ಉಪಾಧ್ಯಕ್ಷರಾಗಿ ಮಹೇಶ್ ಅಂಚನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಶೇಖರ್ ಪಾಲನ್, ವಿನ್ಸೆಂಟ್ ಸಾಲ್ದಾನಾ, ರಮೇಶ್ ಪೂಜಾರಿ, ಸುಕುಮಾರ್ ಗುಜರನ್, ವಿದ್ಯಾ ದಿನಕರ, ಸುನೀತಾ ಮದುಸೂದನ್, ವೈಷ್ಣವಿ ವಿ. ನಾಯಕ್, ಸುರೇಶ್ ಪಾಲನ್, ರಾಜೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಹಕಾರ ಅಭಿವೃದ್ಧಿ ಅಧಿಕಾರಿ ರೋಹಿತ್ ಚುನವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕಾರ್ಯನಿರ್ವಾಹಕ ಜಗದೀಶ್ ಅಮೀನ್ ಸಹಕರಿಸಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸಾಮಾಜಿಕ […]