ಮಾಹೆ: ವಿಶ್ವ ಶ್ವಾಸಕೋಶ ದಿನ- 2023 ಆಚರಣೆ

ಮಣಿಪಾಲ: ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (MCHP), ಮಾಹೆ ಮಣಿಪಾಲದ, ಉಸಿರಾಟದ ಚಿಕಿತ್ಸೆ ವಿಭಾಗವು ಶ್ವಾಸಕೋಶದ ಆರೋಗ್ಯ ಮತ್ತು ಉಸಿರಾಟದ ಆರೈಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ “ವಿಶ್ವ ಶ್ವಾಸಕೋಶ ದಿನ- 2023” ವನ್ನು ಆಚರಿಸಿತು. ಉದ್ಘಾಟನೆಯು ಸೆಪ್ಟೆಂಬರ್ 22 ರಂದು ನಡೆಯಿತು. ಸೆಪ್ಟೆಂಬರ್ 23 ರಂದು ಸಮಾರೋಪ ನಡೆಯಿತು ಮಾಹೆ ಮಣಿಪಾಲದ ಎಂಸಿಒಪಿಎಸ್‌ನ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಹೆ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ […]

ಆನ್ ಲೈನ್ ವಂಚನೆಗೆ ಮತ್ತೊಂದು ಬಲಿ: ಡೆಬಿಟ್ ಕಾರ್ಡ್ ಮಾಹಿತಿ ಎಗರಿಸಿ 4.99 ಲಕ್ಷ ರೂ ವಂಚನೆ

ಉಡುಪಿ: ಎಸ್.ಬಿ.ಐ ಡೆಬಿಟ್ ಕಾರ್ಡನ್ನು ಆಕ್ಟೀವೇಶನ್ ಮಾಡುವುದಾಗಿ ಹೇಳಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಡೆಬಿಟ್ ಕಾರ್ಡ್ ಮಾಹಿತಿ ಹಾಗೂ ಓಟಿಪಿ ಪಡೆದು 4.99 ಲಕ್ಷ ರೂ. ವಂಚಿಸಿದ್ದಾನೆ. ಅಬ್ದುಲ್ ಕರೀಮ್ ಎಂಬ ವ್ಯಕ್ತಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಮಣಿಪಾಲ ಶಾಖೆ ಎಸ್.ಬಿ ಖಾತೆ ಯಿಂದ ರೂ. 49,999 ರಂತೆ ಕ್ರಮಾವಾಗಿ 10 ಸಲ ವ್ಯವಹಾರ ನಡೆಸಿ ಒಟ್ಟು ರೂ. 4,99,990 ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು, ಮೋಸ ಮಾಡಿದ್ದಾನೆ. ಈ ಬಗ್ಗೆ […]

ವಿಶ್ವ ಹಿರಿಯ ನಾಗರಿಕರ ದಿನಾಚರಣೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ (ರಿ), ಹಿರಿಯ ನಾಗರಿಕರ ಸಂಸ್ಥೆಗಳು, ಜಿಲ್ಲಾ ಮಹಿಳಾ ಮಂಡಳಗಳ ಒಕ್ಕೂಟ (ರಿ) ಹಾಗೂ ವೃದ್ಧಾಶ್ರಮಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ […]

ಕುಂದಾಪುರ: ಪಡಿತರ ಅಕ್ಕಿ ಬಹಿರಂಗ ಹರಾಜು

ಕುಂದಾಪುರ: ಬೈಂದೂರು ತಾಲೂಕಿನ ಶಿರೂರು ಹಡವಿನಕೋಣೆ ಎಂಬಲ್ಲಿ ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ, ವಶಪಡಿಸಿಕೊಂಡ 80 ಕ್ವಿಂಟಾಲ್ ಅಕ್ಕಿಯಲ್ಲಿ ನೀರು ತಾಗಿ ಹಾಳಾಗಿರುವ 51 ಕ್ವಿಂ. ಅಕ್ಕಿ ಪಶುಗಳ ಆಹಾರಕ್ಕೆ ಉಪಯೋಗಿಸುವ ಸಲುವಾಗಿ ಅಕ್ಟೋಬರ್ 7 ರಂದು ಮಧ್ಯಾಹ್ನ 12 ಗಂಟೆಗೆ ಕುಂದಾಪುರ ಟಿ.ಎ.ಪಿ.ಸಿ.ಎಮ್.ಎಸ್ (ಲಿ) ಗೋದಾಮಿನಲ್ಲಿ ಬಹಿರಂಗ ಹರಾಜು ಮಾಡಲಾಗುವುದು ಎಂದು ಬೈಂದೂರು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಗ್ನಿಶಾಮಕ ಇಲಾಖೆಯಲ್ಲಿ ಉತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಸೇವಾ ಪದಕ

ಉಡುಪಿ: ಜಿಲ್ಲಾ ಅಗ್ನಿಶಾಮಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿನಾಯಕ ಉ ಕಲ್ಗುಟಕರ, ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಗ್ನಿಶಾಮಕರಾದ ಅಶೋಕ್ ಕುಮಾರ್, ಕೃಷ್ಣ ನಾಯ್ಕ್ ಹಾಗೂ ವಾಹನ ಚಾಲಕ ಸುಧೀರ್ ಉಡುಪಿ, ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ಸುಂದರ್ ವಿ ಮತ್ತು ಕಾರ್ಕಳ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ ಅಚ್ಚುತ್ತ ಕರ್ಕೇರಾ ಇವರುಗಳಿಗೆ ಅಗ್ನಿಶಾಮಕ ಇಲಾಖೆಯಲ್ಲಿ ಉತ್ತಮ ಸೇವೆಗಾಗಿ ಮುಖ್ಯಮಂತ್ರಿಗಳ ಸೇವಾ ಪದಕ ಲಭಿಸಿರುತ್ತದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.